ಕಲ್ಯಾಣದಲ್ಲಿ ಅರಿವಿನ ಪರಿಮಳ ಸೂಸಿದ ಶರಣ ಹೂಗಾರ ಮಾದಯ್ಯ

ಬೆಳಗಾವಿ

ವಚನ ಪಿತಾಮಹ ಡಾ ಫ. ಗು. ಹಳಕಟ್ಟಿ ಭವನದಲ್ಲಿ ರವಿವಾರ ಪ್ರಾರ್ಥನೆ, ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಡಾ. ಭವ್ಯಾ ಸಂಪಗಾರ ಅವರು ಹೂಗಾರ ಮಾದಯ್ಯ ಶರಣರ ಬಗ್ಗೆ ಉಪನ್ಯಾಸ ನೀಡುತ್ತ, ಹೂಗಾರ ಸಮಾಜದವರು ಹೂವಿನ ಮನಸ್ಸು ಹೊಂದಿದವರು. ಕಲ್ಯಾಣದ ನಿಯಮದಂತೆ ಶರಣನಾದವನು ಮೊದಲು ಕಾಯಕ ಮಾಡಬೇಕು, ಅದರಂತೆ ಮಾದಣ್ಣನವರು ತಾವು ಹೂವು ಪತ್ರೆ ಕಾಯಕವನ್ನೇ ಪ್ರತಿದಿನ ಶರಣರ ಲಿಂಗ ಪೂಜೆಗೆ ತಂದು ಕೊಡುವ ಕಾಯಕವನ್ನಾಗಿ ಮಾಡುತ್ತಾರೆ.

ಮಾದಣ್ಣನಿಗೆ ಮಹಾದೇವಿ ಮಡದಿಯಾಗಿ ಅವಳು ಹೂ ಕಟ್ಟುವ ಕಾಯಕ ಮಾಡುತ್ತಾರೆ. ಶರಣರ ಜೀವನವು ಹೂ ಇದ್ದಂತೆ, ಮಾದಯ್ಯನವರು ಅದರಂತೆ ಶರಣರಿಂದ ಅರಿವು ಎನ್ನುವ ಮಕರಂಧವನ್ನು ಹೀರಿಕೊಂಡು ತಮ್ಮೊಳಗೆ ಇಟ್ಟುಕೊಳ್ಳುತ್ತಾ, ಅನುಭಾವ ಎಂಬ ಜೇನುತುಪ್ಪವನ್ನು ಸವಿದರು. ಅನುಭಾವದ ಸುಧೆಯನ್ನು ಹಂಚಿದವರು. ಕಲ್ಯಾಣದಲ್ಲಿ ಅರಿವಿನ ಪರಿಮಳವನ್ನು ಸೂಸಿದವರು ಶರಣ ಹೂಗಾರ ಮಾದಯ್ಯನವರು ಎಂದು ತಿಳಿಸಿದರು.

ಸುರೇಶ ನರಗುಂದ ಸಾಮೂಹಿಕ ಪ್ರಾಥ೯ನೆ ನಡಿಸಿಕೊಟ್ಟರು. ಮಹಾಂತೇಶ ಮೆಣಸಿನಕಾಯಿ ಅವರು ಪರಿಚಯಿಸಿದರು. ಜಯಶ್ರೀ ಚಾವಲಗಿ, ಅಕ್ಕಮಹಾದೇವಿ ತೆಗ್ಗಿ, ವಿ. ಕೆ. ಪಾಟೀಲ, ಬಸವರಾಜ ಬಿಜ್ಜರಗಿ, ಬಿ. ಪಿ. ಜೇವಣಿ, ಸುನೀಲ ಸಾಣಿಕೊಪ್ಪ, ದಾಕ್ಷಾಯಿಣಿ ಪೊಜೇರಿ ಶರಣ ಶರಣೆಯರು ವಚನ ವಿಶ್ಲೇಷಣೆ ಮಾಡಿದರು.

ಮುಖ್ಯ ಅತಿಥಿಗಳಾಗಿ ಶರಣ ಶಿವಾನಂದ ಹೂಗಾರ, ಅತಿಥಿಗಳಾಗಿ ಶರಣ ಲಕ್ಷೀಕಾಂತ ಗುರವ ಆಗಮಿಸಿದ್ದರು. ಶರಣೆ ರುದ್ರಮ್ಮಾ ಅಕ್ಕನವರ ಪ್ರಸಾದ ವ್ಯವಸ್ಥೆ ಮಾಡಿದ್ದರು.

ಪ್ರಭು ಹೂಗಾರ, ಮೋಹನ ಹೂಗಾರ, ರಾಜು ಗುರವ ಮಹಾದೇವ ಹೂಗಾರ, ಅಜು೯ನ ಹೂಗಾರ, ಸುಶೀಲಾ ಗುರವ, ಶೇಖರ ವಾಲಿ ಇಟಗಿ, ಶರಣ ಪೂಜೇರಿ, ಗದಿಗೆಪ್ಪ ತಿಗಡಿ, ಬಾಬು ತಿಗಡಿ, ಶಿವಾನಂದ ತಲ್ಲೂರ, ಶಿವಾನಂದ ನಾಯಕ, ಶಂಕರ ಗುಡಸ, ಸದಾಶಿವ ದೇವರಮನಿ, ಜ್ಯೋತಿ ಬದಾಮಿ, ಆನಂದ ಕರಕಿ, ಶರಣ ಕಂಬಾರ, ಗುರುಸಿದ್ದಪ್ಪ ರೇವಣ್ಣನ್ನವರ, ಶ೦ಕ್ರಪ್ಪ ಮೆಣಸಗಿ, ಕಮಲಾ ಗಣಾಚಾರಿ ಮತ್ತಿತರ ಶರಣಶರಣೆಯರು ಉಪಸ್ಥಿತರಿದ್ದರು

ಇದೇ ಸ೦ದಭ೯ದಲಿೢ ಅನುಭಾವ ನೀಡಿದ ಡಾ. ಸ೦ಪಗಾರ ಹಾಗೂ ಹೂಗಾರ ಸಮಾಜದ ಅಧ್ಯಕ್ಷರಾದ ಶಿವಾನ೦ದ ಹೂಗಾರ ಇವ೯ರಿಗೂ ಸತ್ಕರಿಸಲಾಯಿತು. ಸುರೇಶ ನರಗುಂದ ನಿರೂಪಿಸಿ ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ https://chat.whatsapp.com/BC3ULQcPxmhAhKS4XV9R1G

Share This Article
Leave a comment

Leave a Reply

Your email address will not be published. Required fields are marked *