ಕೊಪ್ಪಳದಲ್ಲಿ ನೂತನ ಶ್ರೀ ಬಸವೇಶ್ವರ ವೃತ್ತದ ಉದ್ಘಾಟನೆ

ಕೊಪ್ಪಳ:

ಭಾಗ್ಯನಗರ ಪಟ್ಟಣ ಪಂಚಾಯತಿ ವ್ಯಾಪ್ತಿಯ ಕಿನ್ನಾಳ ರಸ್ತೆಯಲ್ಲಿ  ಕೊಪ್ಪಳ ನಗರಾಭಿವೃದ್ಧಿ  ಪ್ರಾಧಿಕಾರ ಮತ್ತು ಪಟ್ಟಣ ಪಂಚಾಯಿತಿ ವತಿಯಿಂದ ನಿರ್ಮಿಸಲಾದ ಶ್ರೀ ಬಸವೇಶ್ವರ ವೃತ್ತದ ಉದ್ಘಾಟನೆ ಶುಕ್ರವಾರ ನೆರವೇರಿತು.

ಉದ್ಘಾಟನೆ ಮಾಡಿ, ಸಮಾರಂಭದಲ್ಲಿ ಕೊಪ್ಪಳ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ ಅವರು ಮಾತನಾಡುತ್ತ, ವಿಶ್ವಗುರು ಬಸವಣ್ಣನವರ ವೃತ್ತ ಎಲ್ಲಡೆಯೂ ಆಗಬೇಕು. ಬಸವಣ್ಣನವರು ಒಂದು ಜಾತಿ, ಒಂದು ವರ್ಗಕ್ಕೆ ಮೀಸಲಾದವರಲ್ಲ. ಅವರ ಸಂದೇಶವನ್ನು ಎಲ್ಲರೂ ಪಾಲಿಸಬೇಕೆಂದು ಹೇಳಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕೆ. ಶ್ರೀನಿವಾಸ ಗುಪ್ತ ಅವರು ಮಾತನಾಡಿ, ಇದು ನಮ್ಮ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿರುವ ಹೆಮ್ಮೆಯ ವೃತ್ತವಾಗಿದೆ. ಶೀಘ್ರದಲ್ಲೇ ಇಲ್ಲಿ ಗುರು ಬಸವಣ್ಣನವರ ಭವ್ಯವಾದ ಮೂರ್ತಿಯನ್ನು ಸ್ಥಾಪಿಸುತ್ತೇವೆ ಎಂದರು.

ಪಟ್ಟಣ ಪಂಚಾಯತಿ ಅಧ್ಯಕ್ಷ ತುಕಾರಾಮಪ್ಪ ಗಡಾದ ಉಪಾಧ್ಯಕ್ಷ ಹೊನ್ನೂರಸಾಬ ಬೈರಾಪುರ, ಸ್ಧಾಯಿ ಸಮಿತಿಯ ಅಧ್ಯಕ್ಷ ಶಿವರಾಮ ಮ್ಯಾಗಳಮನಿ, ಪಂಚಾಯತಿ ಸದಸ್ಯ ವಾಸುದೇವ ಮೇಘರಾಜ, ಪರಶುರಾಮ ನಾಯಕ, ಗವಿಸಿದ್ದಯ್ಯ ಕೆಂಭಾವಿಮಠ, ರೋಷನ್ಅಲಿ ಮಂಗಳೂರು, ಕಸ್ತೂರಿ ಹಂಚಿನಮನಿ, ಸರಸ್ವತಿ ಇಟ್ಟಂಗಿ, ಪಾಲಾಕ್ಷಮ್ಮ ಕವಲೂರ, ನಗರಾಭಿವೃದ್ಧಿ ಪ್ರಾಧಿಕಾರದ ನಾಮನಿರ್ದೇಶಿತ  ಸದಸ್ಯರಾದ ಮಾರ್ಕಂಡೇಶ್ವರ ಕಲ್ಲನವರ, ಚನ್ನಬಸಯ್ಯ ಚನ್ನವಡಿಮಠ, ಅಬ್ದುಲ್ ಲತೀಫ, ಕಾಳಮ್ಮ ಶಿವಶರಣ ಬಸವರಾಜ, ಮಂಜುನಾಥ ಗುಂಡಬಾಳ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಶರಣಪ್ಪ ಚೌಹಾಣ್, ಪಟ್ಟಣ ಪಂಚಾಯತಿಯ ಮುಖ್ಯ ಅಧಿಕಾರಿ ಸುರೇಶ ಬಬಲಾದ, ನಗರ ಯೋಜನ ಸದಸ್ಯ ಎಂ.ಎ. ಪ್ರಭಣ್ಣ ವೇದಿಕೆ ಮೇಲೆ ಇದ್ದರು.

ವಿಶ್ವಗುರು ಬಸವೇಶ್ವರ ಟ್ರಸ್ಟಿನ ಅಧ್ಯಕ್ಷರಾದ ಗುಡದಪ್ಪ ಹಡಪದ, ರಾಜೇಶ ಸಸಿಮಠ, ಮುತ್ತಣ್ಣ ಬಿರಲದಿನ್ನಿ, ದೇವಿಶ ಗಬ್ಬುರ, ವೀರಭದ್ರಪ್ಪ ನಂದ್ಯಾಳ, ಶರಣಬಸವನಗೌಡ ಪಾಟೀಲ, ಯಮನೂರಪ್ಪ ಹಳ್ಳೇರ, ಹನುಮೇಶ ಕಲ್ಮಂಗಿ, ಅರ್ಚನಾ ಸಸಿಮಠ , ಮಂಜುಳಾ ಹುರಿಕಡ್ಲಿ, ಈರಮ್ಮ ಕೊಳ್ಳಿ, ಸರಸ್ವತಿ ರಾಂಪುರ, ಶಿಲ್ಪಾ ಸಸಿಮಠ, ಶ್ರೀದೇವಿ ಇಂಗಳದಾಳ, ಬಾಳಮ್ಮ ಮಾಳೆಕೊಪ್ಪ, ವಿಶಾಲಾಕ್ಷಿ, ಜ್ಯೋತಿ ಗೊಂಡಬಾಳ ಹಾಗೂ ನಾಗರಿಕರು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
Leave a comment

Leave a Reply

Your email address will not be published. Required fields are marked *