ಸಿರುಗುಪ್ಪ:
ತಾಲ್ಲೂಕಿನ ಗಡಿಗ್ರಾಮ ದೇವರಗುಡ್ಡದ ಮಾಳ ಮಲ್ಲೇಶ್ವರ ಕಲ್ಯಾಣೋತ್ಸವದ ಅಂಗವಾಗಿ ಶನಿವಾರ ಮಧ್ಯರಾತ್ರಿಯಿಂದ ರವಿವಾರ ಬೆಳಗಿನವರೆಗೆ ನಡೆದ ‘ಬಡಿದಾಟದ ಜಾತ್ರೆ’ಯಲ್ಲಿ ಒಟ್ಟು 70 ಜನರಿಗೆ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗುವಾಗ ಉರಿಯುವ ಬೆಂಕಿಯ ಪಂಜುಗಳನ್ನು ತೂರಿದ ವೇಳೆ ನೂಕುನುಗ್ಗಲು ಉಂಟಾಯಿತು.
5 ಡ್ರೋಣ್ ಕ್ಯಾಮರಾಗಳು, ನೂರು ಕಡೆ ಸಿಸಿ ಕ್ಯಾಮೆರ,ಒಂದು ಸಾವಿರ ಪೋಲಿಸ್ ಸಿಬ್ಬಂದಿಯನ್ನು ನೇಮಕ ಮಾಡಲಾಗಿತ್ತು.
ಆದರೂ ಉತ್ಸವ ಮೂರ್ತಿಗಳನ್ನು ವಶಪಡಿಸಿಕೊಳ್ಳಲು 11 ಗ್ರಾಮಗಳ ಸುಮಾರು 20 ಸಾವಿರಕ್ಕೂ ಹೆಚ್ಚು ಜನರು ಕೈಯಲ್ಲಿ ಬಡಿಗೆ ಹಿಡಿದು ಹೊಡೆದಾಡುವ ಸಂದರ್ಭದಲ್ಲಿ ಬೆಂಕಿಯ ಪಂಜುಗಳನ್ನು ತೂರಿದ್ದರಿಂದ ಹೆಚ್ಚಿನ ಜನರಿಗೆ ಗಾಯಗಳಾಗಲು ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.