ಅಭಿಯಾನಕ್ಕೆ ವಿರೋಧ: ಮತ್ತಷ್ಟು ಚುರುಕಾದ ಬಸವ ಸಂಘಟನೆಗಳು

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ

ಬಸವ ಸಂಘಟನೆಗಳ ಉತ್ಸಾಹ, ಹುಮ್ಮಸ್ಸು ಹೆಚ್ಚಿಸಿದ ಬಹಿಷ್ಕಾರ ಕರೆ

ಬಾಗಲಕೋಟೆ

ನಾಳೆ ನಗರದಲ್ಲಿ ನಡೆಯುತ್ತಿರುವ ಅಭಿಯಾನಕ್ಕೆ ಕೆಲವು ವೀರಶೈವ ಪರ ಸ್ವಾಮೀಜಿಗಳಿಂದ ವಿರೋಧ ಬಂದ ಮೇಲೆ ಬಸವ ಸಂಘಟನೆಗಳು ಮತ್ತಷ್ಟು ಹುರುಪಿನಿಂದ ಕಾರ್ಯನಿರತವಾಗಿವೆ.

ಗುಳೇದಗುಡ್ಡದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮುರುಘಾಮಠದ ಕಾಶೀನಾಥ ಶ್ರೀಗಳು ಬಾಗಲಕೋಟೆ ಅಭಿಯಾನಕ್ಕೆ ಹೋಗಬಾರದೆಂದು ಭಕ್ತರಿಗೆ ಕರೆ ನೀಡಿದರು.

ಮಠದ ಆವರಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತ ಅಭಿಯಾನದಲ್ಲಿ ವೀರಶೈವ ಲಿಂಗಾಯತ ಸಮುದಾಯ ಒಡೆಯುವ ಪಿತೂರಿ ನಡೆದಿದೆ. ವೀರಶೈವ ಎನ್ನುವ ಪದ ಬಳಸದೇ ಕೇವಲ ಲಿಂಗಾಯತ ಪದ ಬಳಸಿ ಎಂದು ಎಲ್ಲರಲ್ಲಿ ಸಂಕುಚಿತ ಮನೋಭಾವ ಮೂಡಿಸುತ್ತಿದ್ದಾರೆ ಎಂದು ಆಪಾದಿಸಿದರು.

ಮರಡಿಮಠದ ಅಭಿನವ ಕಾಡಸಿದ್ದೇಶ್ವರ ಶ್ರೀಗಳು ಮಾತನಾಡಿ ವೀರಶೈವರು ಬೇರೆ ಅಲ್ಲ, ಲಿಂಗಾಯತರು ಬೇರೆ ಅಲ್ಲ. ಆದರೆ ಅಭಿಯಾನದಲ್ಲಿ ಸಮಾಜ ಒಡೆಯುವ ಹುನ್ನಾರ ನಡೆದಿದೆ. ಬಸವನ ಬಾಗೇವಾಡಿಯಲ್ಲಿ ವೀರಶೈವ ಮಠಾಧೀಶರನ್ನು ಅವಹೇಳನ ಮಾಡಿದ್ದಾರೆ ಎಂದು ಆಪಾದಿಸಿದರು. ಮಠದ ಕೆಲವು ಭಕ್ತರು ಹಾಗೂ ರಾಜಕಾರಣಿಗಳು ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡರು.

ವಿರೋಧ ಬರುತ್ತಿದ್ದಂತೆಯೇ ಚುರುಕಾದ ಲಿಂಗಾಯತ ಪೂಜ್ಯರು ಹಾಗೂ ಬಸವ ಸಂಘಟನೆಗಳು ಭಾನುವಾರ ರಾತ್ರಿಯೇ ಗುಳೇದಗುಡ್ಡದಲ್ಲಿ ಅಭಿಯಾನಕ್ಕೆ ಸಿದ್ಧವಾಗುತ್ತಿದ್ದವರನ್ನು ಸಂಪರ್ಕಿಸಿದರು.

ಬಾಗಲಕೋಟೆ ಸುದ್ದಿಗೋಷ್ಠಿ

ವಿರೋಧದ ಕರೆಗೆ ಯಾವುದೇ ಬೆಂಬಲವಿಲ್ಲವೆಂದು ಖಚಿತವಾದರೂ ಸೋಮವಾರ ಬೆಳಗ್ಗೆ ಬಾಗಲಕೋಟೆಯಲ್ಲಿ ಹಾಗೂ ಸಂಜೆ ಗುಳೇದಗುಡ್ಡದಲ್ಲಿಯೇ ಅಭಿಯಾನಕ್ಕೆ ಬರಲು ಕರೆ ನೀಡಿ ಸುದ್ದಿಗೋಷ್ಠಿ ನಡೆಸಿದರು.

ಚರಂತಿಮಠದ ಡಾ ಪ್ರಭು ಸ್ವಾಮೀಜಿ, ಭೋವಿ ಗುರುಪೀಠದ ಇಮ್ಮಡಿ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ, ಗುಳೇದಗುಡ್ಡದ ಗುರುಸಿದ್ದೇಶ್ವರ ಬ್ರಹನ್ಮಠದ ಶ್ರೀ ಬಸವರಾಜಪಟ್ಟದಾರ್ಯ ಸ್ವಾಮೀಜಿ, ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಿದರು.

ಸಂಜೆ ಗುಳೇದಗುಡ್ಡದ ಎಲ್ಲ ಸಮಾಜಗಳ ಸಭೆ ನಡೆಸಿ ಇಳಕಲ್‌ನ ಗುರುಮಹಾಂತ ಶ್ರೀಗಳು, ನಿಡಸೋಶಿ ಸಿದ್ದ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮಿಗಳು, ಗುರುಸಿದ್ದ ಪಟ್ಟದಾರ್ಯ ಸ್ವಾಮಿಗಳು, ಇರಕಲ್ ಮಠದ ಬಸವಪ್ರಸಾದ ಶರಣರು, ಬಸವರಾಜ ಪಟ್ಟದಾರ್ಯ ಶ್ರೀಗಳು, ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಗಳು ಮಾತನಾಡಿದರು.

ಎಲ್ಲ ಶ್ರೀಗಳು ಸಮಾಜದಿಂದ ಜಾತಿ ಭೇದಭಾವ ನಿವಾರಿಸುವ ಉದ್ದೇಶದಿಂದ ಅಭಿಯಾನ ಆರಂಭಿಸಿದ್ದೇವೆ ಎಂದು ಹೇಳಿ ಕಾರ್ಯಕ್ರಮಕ್ಕೆ ಬರಲು ನೀಡಿದ ಕರೆಯನ್ನು ಸಭಿಕರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು.

ಬಸವ ಕೇಂದ್ರದ ಕಾರ್ಯದರ್ಶಿ ಅಣ್ಣಪ್ಪ ಜಗದೇವ ಅಭಿಯಾನಕ್ಕೆ ಎಲ್ಲರೂ ತನು, ಮನ, ಧನದಿಂದ ದುಡಿದಿದ್ದಾರೆ. ಜಿಲ್ಲೆಯಲ್ಲೆಲ್ಲಾ ಕರ ಪತ್ರ ಹಂಚಲಾಗಿದೆ, ಅಕ್ಕನ ಬಳಗದವರು ಮನೆ ಮನೆಗೆ ಹೋಗಿ ಜಾಗೃತಿ ಮೂಡಿಸಿದ್ದಾರೆ.

ವಿರೋಧ ಬಂದ ಮೇಲೆ ಸಂಘಟಕರ ಉತ್ಸಾಹ ಹೆಚ್ಚಾಗಿದೆ. ನಾಲ್ಕು ಬಸ್, 10 ಜೀಪ್ ಗಳಿಂದ ಗುಳೇದ ಗುಡ್ಡದಿಂದಲೇ ಜನ ಬರಲಿದ್ದಾರೆ, ಎಂದು ಹೇಳಿದರು.

ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ರವಿ ಯಡಹಳ್ಳಿ ಅಭಿಯಾನದ ಮೇಲೆ ವಿರೋಧದ ಪರಿಣಾಮವಿಲ್ಲ. ವಿರೋಧ ಮಾಡಿದವರೇ ಸಣ್ಣವರಾದರು. ವಿರೋಧ ಬಂದ ಮೇಲೆ ಬಸವ ಸಂಘಟನೆಗಳು ಮತ್ತಷ್ಟು ಒಗ್ಗಟ್ಟಾಗಿವೆ. ಎಲ್ಲ ಜೀವಿಗಳನ್ನು ಸಮಾನವಾಗಿ ನೋಡುವ ಧರ್ಮ ಲಿಂಗಾಯತ ಧರ್ಮ. ಅವರು ಒಂದು ಜಾತಿಗೆ ಸೀಮಿತವಾಗಿದ್ದಾರೆ ಎಂದು
ಹೇಳಿದರು.

ಕಾಶೀನಾಥ ಶ್ರೀಗಳು ಮೊದಲು ಕಾರ್ಯಕ್ರಮಕ್ಕೆ ಬರಲು ಒಪ್ಪಿದ್ದರು. ಅವರ ಹೆಸರು ಕೂಡ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಣವಾಗಿತ್ತು. ಈಗ ಪಂಚಪೀಠಗಳ ಹಾಗೂ ಸಂಘ ಪರಿವಾರದ ಒತ್ತಡದಿಂದ ಮನಸ್ಸು ಬದಲಾಯಿಸಿದ್ದಾರೆ. ಮೊದಲು ಐದು ಸಾವಿರ ಜನ ಅಭಿಯಾನಕ್ಕೆ ಬರುವ ನಿರೀಕ್ಷೆಯಿತ್ತು. ಈಗ ಅದಕ್ಕಿಂತ ಹೆಚ್ಚಿನ ಜನ ಬರಲಿದ್ದಾರೆ, ಎಂದು ಇಲ್ಲಿನ ರಾಜಕಾರಣಿಯೊಬ್ಬರು ಹೇಳಿದರು.

ಗುಳೇದಗುಡ್ಡದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಅಶೋಕ ಬರಗುಂಡಿ, ಪ್ರಧಾನ ಕಾರ್ಯದರ್ಶಿ ರವಿ ಯಡಹಳ್ಳಿ, ರಾಚಣ್ಣ ಕೆರೂರ, ಬಸವರಾಜ ಅನಗವಾಡಿ, ಮುಖಂಡರಾದ ಸಂಜಯ ಬರಗುಂಡಿ, ಹನಮಂತ ಮಾವಿನಮರದ, ಸಂಗಪ್ಪ ಹಡಪದ, ಸಂಗನಬಸಪ್ಪ ಚಿಂದಿ, ಚಂದ್ರಶೇಖರ ಹರವಿ, ಸಿದ್ದಿಂಗಪ್ಪ ಬರಗುಂಡಿ, ಶಿವಾನಂದ ಎಣ್ಣೆ, ಮುಪ್ಪಣ್ಣ ಶೀಲವಂತ, ಎಸ್‌. ಎಸ್.ಸೋಮನಾಳ, ಬಸವರಾಜ ಬರಗುಂಡಿ ಸೇರಿದಂತೆ ಪಟ್ಟಣದ ಅನೇಕ ಸಮಾಜಗಳ ಮುಖಂಡರು, ಹಿರಿಯರು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/BC3ULQcPxmhAhKS4XV9R1G

Share This Article
11 Comments
  • ಜೈ ಲಿಂಗಾಯತ ಧರ್ಮ, ಬಸವ ಸಮಸ್ಕ್ರತಿಕ ಅಭಿಯಾನಕ್ಕೆ ಜಯವಾಗಲಿ

    • I am staying in Mumbai but my my name is in your what’s app group.
      Religion: lingayat ,

      Caste: any one sub Caste of lingayat. Please mention list of subcastes by which we will be united under the one umbrella of Lingayat

      • ಕಿರಣ ನಾಡಗೋಡರ ಅವರ ನಿಲುವು ಬಹಳ ಮುಖ್ಯ. ಅವರ ನಿಲುವು ಒಪ್ಪದ
        ವರು. ಲಿಂಗಾತರಲ್ಲ.
        ಯಾರು ವರ್ಣ ಭೇದ, ವರ್ಗ ಭೇದ, ಲಿಂಗ ಭೇದ, ಸೂತಕ ಇತ್ಯಾದಿ ಮಾಡುವುದರಿಂದ ಒಂದೇ ಲಿಂಗಾಯತವನ್ನು ಎರಡು ಒಂದೆ ಎನ್ನುತ್ತಿದ್ದಾರೆ ಮೇಲ್ನೋಟಕ್ಕೆ ಆದರೆ . ಕಸುಬುಗಳನ್ನು, ವೃತ್ತಿಗಳನ್ನು ಜಾತಿ, ಮತ ಎಂದು ವರ್ಗ ಮಾಡಿ, ಪಂಚ ಸೂತಕಗಳನ್ನು ಬಂಡವಾಳ್ಮಡಿಕೊಂಡು, ಮುಗ್ಧ ಜನರಿಗೆ ಯಾಮಾರಿಸಿ, ಗುಲಾಮರನ್ನಾಗಿ ಆಳುತ್ತಿದ್ದಾರೆ. ಅದಕ್ಕೆ ಅವರು ಸಮಾಜಕ್ಕೆ ಕಂಟಕರು . ಬಸವಧರ್ಮ ಶೋಷಣೆರಹಿತ ವಾಗುವುದರಲ್ಲಿ ಎರಡು ಮಾತಿಲ್ಲ.

  • ವೀರಶೈವ ಎನ್ನುವವರು ಕೂಡಾ ಲಿಂಗಾಯತರೇ!. ಯಾಕಿಷ್ಟು ಕಿರೀಕ್ರಿ ಮಾಡುತ್ತಲಿದ್ದರೆ. ಮಹಾ ಸ್ವಾಮಿಗಳೇ ವೀರಶೈವ ಈ ಶಬ್ದವು 15ನೇಯ ಶತಮಾನದಿಂದ ಭೀಮಕವಿಯ ಬಸವ ಪುರಾಣದಲ್ಲಿ ಮೊದಲಿಗೆ ಬಂದಿದೆ. 12ನೇಯ ಶತಮಾನದ ಪೂರ್ವದಲ್ಲಿ ಈ ಹೆಸರು ಯಾವ ಸಾಹಿತ್ಯದಲ್ಲಿವು ಬಂದಿಲ್ಲ. ಪಂಚಾಚಾರ್ಯರು ಹುಟ್ಟಿಸಿದ ಶಬ್ದ.

    • ಮಾನ್ಯರೇ,
      ಇಲ್ಲಿ ಯಾರಿಗೂ ಯಾವುದೇ ಕಿರಿಕಿರಿ ಇಲ್ಲ. ವೀರಶೈವರು ಎಂಬುದು ನೀವೇ ಹೇಳಿದ ಹಾಗೆ 15 ನೇ ಶತಮಾನದ ನಂತರದ ಬೆಳವಣಿಗೆ.
      ಬಸವಣ್ಣನವರನ್ನು ನಮ್ಮ ಧರ್ಮಗುರು ಎಂದು ಒಪ್ಪಿಕೊಳ್ಳುವ ಎಲ್ಲ ವೀರಶೈವ ಜಗದ್ಗುರುಗಳಿಗೂ ಇಲ್ಲಿ ಮುಕ್ತ ಅವಕಾಶ ಇದೆ.
      ಸಮಸಮಾಜದ ಕನಸು ಕಂಡ, ಎಲ್ಲ ಮೌಢ್ಯ ಹಾಗೂ ಪುರೋಹಿತಶಾಹಿ ವಿರುದ್ಧ ಹೋರಾಡಿದ ಶರಣರೇ ಎಲ್ಲರಿಗೂ ಪ್ರಾಣ ಜೀವಾಳ. ವೀರಶೈವದ ಜಗದ್ಗುರುಗಳು ಪ್ರಾಮಾಣಿಕತೆ ಮೆರೆದು ಶರಣ ಸಂಸ್ಕೃತಿಗೆ ಒಳಗಾದರೆ ಅದು ಎಲ್ಲರಿಗೂ ಒಳಿತು.

  • ವೀರಶೈವ ಮತ್ತು ಲಿಂಗಾಯತ ಇಬ್ಬರೂ ಶಿವೋಪಸಕರು ಹಾಗು ಬಸವಣ್ಣ ನವರ ಅನುಯಾಯಿ ಗಳು ಸಮಾಜ ಒಡೆಯಬಾರದು. ಕನ್ನಡ ಗಾದೆ ಮಾತು. ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ

    • ಶರಣರೇ,
      ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ
      ಪಾತಾಳದಿಂದತ್ತತ್ತ ನಿಮ್ಮ ಶ್ರೀಚರಣ
      ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀಮುಕುಟ
      ಅಗಮ್ಯ, ಅಗೋಚರ, ಅಪ್ರತಿಮ ಲಿಂಗವೇ
      ಕೂಡಲಸಂಗಮದೇವ
      ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ.

      ಇದು ಲಿಂಗಾಯತರ ಶಿವೋಪಾಸನೆಯ ಪರಿ…. ಇದನ್ನು ಒಪ್ಪಿಕೊಳ್ಳುವವರು ಲಿಂಗಾಯತರು. ಇದ ಬಿಟ್ಪು ಬೇರೆ ಬೇರೆ ರೀತಿಯಲ್ಲಿ ಶಿವೋಪಾಸನೆ ಮಾಡುವವರು ಲಿಂಗಾಯತರಲ್ಲ. ಇದಶ್ಟೇ ವ್ಯತ್ಯಾಸ.

    • ಕಿರಣ ನಾಡಗೋಡರ ಅವರ ನಿಲುವು ಬಹಳ ಮುಖ್ಯ. ಅವರ ನಿಲುವು ಒಪ್ಪದ
      ವರು. ಲಿಂಗಾತರಲ್ಲ.
      ಯಾರು ವರ್ಣ ಭೇದ, ವರ್ಗ ಭೇದ, ಲಿಂಗ ಭೇದ, ಸೂತಕ ಇತ್ಯಾದಿ ಮಾಡುವುದರಿಂದ ಒಂದೇ ಲಿಂಗಾಯತವನ್ನು ಎರಡು ಒಂದೆ ಎನ್ನುತ್ತಿದ್ದಾರೆ ಮೇಲ್ನೋಟಕ್ಕೆ ಆದರೆ . ಕಸುಬುಗಳನ್ನು, ವೃತ್ತಿಗಳನ್ನು ಜಾತಿ, ಮತ ಎಂದು ವರ್ಗ ಮಾಡಿ, ಪಂಚ ಸೂತಕಗಳನ್ನು ಬಂಡವಾಳ್ಮಡಿಕೊಂಡು, ಮುಗ್ಧ ಜನರಿಗೆ ಯಾಮಾರಿಸಿ, ಗುಲಾಮರನ್ನಾಗಿ ಆಳುತ್ತಿದ್ದಾರೆ. ಅದಕ್ಕೆ ಅವರು ಸಮಾಜಕ್ಕೆ ಕಂಟಕರು . ಬಸವಧರ್ಮ ಶೋಷಣೆರಹಿತ ವಾಗುವುದರಲ್ಲಿ ಎರಡು ಮಾತಿಲ್ಲ.

  • ಶರಣರೇ,
    ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ
    ಪಾತಾಳದಿಂದತ್ತತ್ತ ನಿಮ್ಮ ಶ್ರೀಚರಣ
    ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀಮುಕುಟ
    ಅಗಮ್ಯ, ಅಗೋಚರ, ಅಪ್ರತಿಮ ಲಿಂಗವೇ
    ಕೂಡಲಸಂಗಮದೇವ
    ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ.

    ಇದು ಲಿಂಗಾಯತರ ಶಿವೋಪಾಸನೆಯ ಪರಿ…. ಇದನ್ನು ಒಪ್ಪಿಕೊಳ್ಳುವವರು ಲಿಂಗಾಯತರು. ಇದ ಬಿಟ್ಪು ಬೇರೆ ಬೇರೆ ರೀತಿಯಲ್ಲಿ ಶಿವೋಪಾಸನೆ ಮಾಡುವವರು ಲಿಂಗಾಯತರಲ್ಲ. ಇದಶ್ಟೇ ವ್ಯತ್ಯಾಸ.

  • ಬಸವ ಪ್ರಜ್ಞೆ ಪ್ರತಿಯೊಬ್ಬ ಸಾಮಾನ್ಯರಲ್ಲಿ ಜಾಗೃತವಾದಾಗ ಯಾವ ವಿರಕ್ತಮಠ ದವರು ಬೇಡ ಗುರು ಮಠದವರು ಬೇಡ ಇದೆ ನಮ್ಮ ಬಸವ ಸಂಸ್ಕೃತಿಯ ಅಭಿಯಾನದ ಮಹತ್ವ ಗುಳೇದಗುಡ್ಡದ ಸರ್ವ ಶರಣಬಂದಗಳಿಗೂ ಭಕ್ತಿಯ ಶರಣು ಶರಣಾರ್ಥಿಗಳು 🙏🙏

Leave a Reply

Your email address will not be published. Required fields are marked *