ಬೀದರ:
ಬಸವಣ್ಣನವರ ಹೆಸರಿನಲ್ಲಿ ಬೆಂಗಳೂರು ಮಹಾನಗರದಲ್ಲಿ 153 ಎಕರೆ ವಿಸ್ತಾರದ ಬೃಹತ್ ಜೀವ ವೈವಿಧ್ಯ ಉದ್ಯಾನ ಸ್ಥಾಪಿಸಲು ಸರಕಾರ ಅನುಮೋದನೆ ನೀಡಿರುವುದನ್ನು ಸ್ವಾಗತಿಸಿ, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರಿಗೆ ಬಸವಪರ ಸಂಘಟನೆಗಳಿಂದ ಸನ್ಮಾನಿಸಲಾಯಿತು.

ನಗರದ ಅಕ್ಕಮಹಾದೇವಿ ಕಾಲೇಜಿನಲ್ಲಿ ಬುಧವಾರ ರಾಷ್ಟ್ರೀಯ ಬಸವದಳ, ಜಾಗತಿಕ ಲಿಂಗಾಯತ ಮಹಾಸಭಾ, ಬಸವಕೇಂದ್ರ, ಲಿಂಗಾಯತ ಮಹಾಮಠ, ಕನ್ನಡ ಸಾಹಿತ್ಯ ಪರಿಷತ್, ಬಸವ ಜಯಂತಿ ಉತ್ಸವ ಸಮಿತಿ, ಮತ್ತಿತರ ಬಸವಪರ ಸಂಘಟನೆಗಳ ವತಿಯಿಂದ ಸಚಿವರನ್ನು ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಿದ್ಧರಾಮ ಬೆಲ್ದಾಳ ಶರಣರು ಮಾತನಾಡಿ, ಶರಣರ ವಚನಗಳು ಜೀವಪರ ಕಾಳಜಿ, ಪ್ರಕೃತಿ-ಪರಿಸರ ಪ್ರೀತಿಯನ್ನು ಹೊಂದಿರುವವು. ಅಂಥ ವಚನಗಳು ಆ ಉದ್ಯಾನದಲ್ಲಿ ರಾರಾಜಿಸುವಂತಾಗಲಿ ಎಂದರು.

ಈ ಯೋಜನೆಯು ಪರಿಸರ ಸಂರಕ್ಷಣೆ ಜೊತೆಗೆ ಬಸವ ತತ್ವಗಳ ಪ್ರಚಾರಕ್ಕೂ ಸಹಕಾರಿಯಾಗಲಿದೆ ಎಂದು ಸಂಘಟನೆಯ ಅನೇಕ ಪದಾಧಿಕಾರಿಗಳು ಮಾತನಾಡಿ ಸಂತಸ ವ್ಯಕ್ತಪಡಿಸಿದರು.

ಜೈರಾಜ್ ಖಂಡ್ರೆ, ಬಸವರಾಜ ಧನ್ನೂರ, ರಮೇಶ ಮಠಪತಿ, ಹಾವಶೆಟ್ಟಿ ಪಾಟೀಲ, ಯೋಗೇಶ, ಸಂತೋಷ ಪಾಟೀಲ, ಧನರಾಜ ಹಂಗರಗಿ, ಸುರೇಶ ಸ್ವಾಮಿ, ವಿಲಾಸ ಪಾಟೀಲ, ವಿಜಯಕುಮಾರ ಪಾಟೀಲ, ವಿಶ್ವನಾಥ ಕಾಜಿ, ಚಂದ್ರಶೇಖರ ಹೆಬ್ಬಾಳೆ, ಶರಣಪ್ಪ ಮಿಠಾರೆ, ಸುರೇಶ ಚನ್ನಶೆಟ್ಟಿ, ರಾಜಶೇಖರ ಜೀರಗೆ, ಮಡಿವಾಳಪ್ಪ ಮಂಗಲಗಿ,ಅಶೋಕ ಎಲಿ, ಶಿವರಾಜ ಮದಕಟ್ಟೆ, ಚಂದ್ರಕಾಂತ ಮಿರ್ಚೆ, ಮಾಣಿಕೇಶ್ಯ ಪಾಟೀಲ, ಸಚಿನ್ ಕೊಳ್ಳೂರು, ನಿಖಿಲಕುಮಾರ ಖಂಡ್ರೆ, ಕಂಟೆಪ್ಪ ಗಂದಿಗುಡೆ ಹಾಗೂ ಬಾಬುರಾವ ದಾನಿ ಮತ್ತಿತರರು ಹಾಜರಿದ್ದರು.
