ನಿಜಾಚರಣೆ: ಬಸವತತ್ವದ ಬರಗುಂಡಿ ಮನೆತನದ ಬಸವಾಂಕುರ ಸಂಭ್ರಮ

ಗುಳೇದಗುಡ್ಡ

“ನುಡಿದರೇನಯ್ಯ ನಡೆಯಿಲ್ಲದನ್ನಕ್ಕ
ನಡೆದರೇನಯ್ಯ ನುಡಿಯಿಲ್ಲದನ್ನಕ್ಕ
ಈ ನಡೆ ನುಡಿಯರಿದು ಏಕವಾಗಿ
ತಾವು ಮೃಡಸ್ವರೂಪರಾದ ಶರಣರಡಿಗೆರಿಗೆ ಬದುಕಿದೆನಯ್ಯಾ
ಬಸವಪ್ರಿಯ ಕೂಡಲಚೆನ್ನಬಸವಣ್ಣ”

ಈ ವಚನ ನೆನಪಾಗಿದ್ದು ನವೆಂಬರ್ 10ರಂದು ಗುಳೇದಗುಡ್ಡದ ಬರಗುಂಡಿ ಮನೆತನದಿಂದ ನಡೆದ ಬಸವಾಕುಂರ (ಸೀಮಂತ) ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ.

ಬರುಗುಂಡಿ ಮನೆತನಕ್ಕೂ ನಮಗೂ ಒಂದು ಅವಿನಾಭವ ಸಂಬಂಧ ಮತ್ತು “ರಕ್ತ ಸಂಭಂದಕ್ಕಿಂತ ಭಕ್ತಿ ಸಂಬಂಧವೇ ಮೇಲು” ಎನ್ನುವ ಶರಣರ ನುಡಿಯಂತೆ ನಮ್ಮ ಆ ಸಂಬಂಧದಕ್ಕೆ ಏನಂತ ಹೆಸರಿಸಬೇಕು ಮತ್ತು ಹೆಸರಿಡಲಾರದಂತಹ ವಿಶಾಲವಾದ ಮತ್ತು ಅರ್ಥಪೂರ್ಣವಾದ ಸಂಬಂಧ ನಮ್ಮದು.

ಬಸವತತ್ವ ಚಿಂತಕ ಅಶೋಕ ಬರಗುಂಡಿ ಅವರ ಎರಡನೆಯ ಸೊಸೆಯ ಬಸವಾಂಕುರ ಸಂಭ್ರಮ. ಆಕಾಶ ಮತ್ತು ಸುಷ್ಮಾ ಶರಣ ದಂಪತಿಗಳ ಸತಿ ಪತಿ ಒಂದಾದ ಭಕ್ತಿಯ ಫಲವಾಗಿ ಹಿತವೆನಿಸಿ ಶಿವನು ಕರುಣಿಸಿದರ ಫಲವೆ ಈ ಬಸವಾಂಕುರ ಸಂಭ್ರಮ.

ಗುಳೇದಗುಡ್ಡದ ಬರಗುಂಡಿ ಮನೆತನವೆಂದರೆ ಅದೊಂದು ವಿಶಿಷ್ಠ ಮತ್ತು ವಿಶೇಷವಾದ ಮನೆತನ. ಯಾಕೆಂದರೆ ಒಮ್ಮೆ ಬಸವತತ್ವವನ್ನು ಒಪ್ಪಿ ಅಪ್ಪಿಕೊಂಡ ಮನೆತನ ಹೆಂಗಿರುತ್ತೆ ಅಂತ ಯಾರಾದರೂ ಕೇಳಿದರೆ ಅದಕ್ಕೆ ಉದಾಹರಣೆಯಾಗಿ ಕೊಡಬಹುದಾದ ಕುಟುಂಬ ಅಂದ್ರೆ ಬರಗುಂಡಿ ಕುಟುಂಬ.

ಅಪ್ಪಟ ಬಸವಣ್ಣನ ಭಕ್ತರು. ಬಸವಣ್ಣ ಇಲ್ಲದೆ ಆ ಕುಟುಂಬಕ್ಕೆ ಬೇರೇನೂ ಇಲ್ಲ. ಬಸವಣ್ಣನೆ ಆ ಕುಟುಂಬದ ಜೀವಾಳ. ಆ ಕುಟುಂಬದಲ್ಲಿ ಯಾವುದೇ ಕಾರ್ಯಗಳು ಆಗಲಿ ಅದು ಬಸವತತ್ವವನ್ನು ಬಿಟ್ಟು ಮಾಡಿದ ಉದಾಹರಣೆಗಳು ಆ ಮನೆತನದಲ್ಲಿಯೇ ಇಲ್ಲ.

ಕೆಲವೊಬ್ಬರನ್ನು ನೋಡಬಹುದು ಬರಿ ಮಾತಿನಲ್ಲಿ ಅಷ್ಟೆ, ತತ್ವ ಆಚರಣೆಯಲ್ಲಿ ಕಲಬೆರಿಕೆ. ಈ ರೀತಿಯಾಗದೆ ಹುಟ್ಟಿನಿಂದ ಹಿಡಿದು, ಸಾಯುವತನಕ ಎಲ್ಲವನ್ನೂ ಬಸವತತ್ವದಂತೆ ಇಡೀ ಅವರ ಕುಟುಂಬ ಮಾಡುತ್ತಾ , ಸಮಾಜದಲ್ಲಿಯೂ ಆ ಬಸವತತ್ವ ಆಚರಣೆಗಳನ್ನು ಬಿತ್ತಲು ಇಡಿ ಮನೆತನವೆ ಪಣ ತೊಟ್ಟಂತಿದೆ. ತಾವು ಮಾಡುವುದರ ಜೊತೆ ಬೇರೆಯವರನ್ನು ಈ ಬಸವ ತತ್ವದ ಆಚರಣೆಗಳ ಆಕರ್ಷಿಸುವಂತೆ ಮಾಡಿ , ಅವರಲ್ಲಿ ಬದಲಾವಣೆ ತಂದು ಖುಷಿಪಡುವ ಮನೆತನ ಬರಗುಂಡಿ ಮನೆತನ.

“ನಡೆ ನುಡಿಯರಿದು ಏಕವಾಗಿ ತಾವು ಮೃಡಸ್ವರೂಪರಾದ ಶರಣರಡಿಗೆರಗಿ ನಾನು ಬದುಕಿದೆನಯ್ಯಾ” ಎನ್ನುವ ಶರಣರ ವಚನದಂತೆ ಬದುಕಿದ ಮನೆತನ ಬರಗುಂಡಿ ಮನೆತನ.

ಇಂದು ಬಸವಾಂಕುರ ಸಂಭ್ರಮದ ಕಾರ್ಯಕ್ರಮವನ್ನು ಬಸವತತ್ವದಡಿಯಲ್ಲಿ ಕುಟುಂಬದ ಎಲ್ಲಾ ಸದಸ್ಯರು ವಚನ ಪ್ರಾರ್ಥನೆ, ಧ್ವಜಗೀತೆ ಹಾಡಿದರು. ಶರಣರಾದ ಸಿದ್ಧಲಿಂಗಪ್ಪ ಬರಗುಂಡಿಯವರ ಅರ್ಥಪೂರ್ಣವಾದ ಮಾತುಗಳಿಂದ ಪ್ರಾಸ್ತಾವಿಕತೆಯನ್ನು ಕಟ್ಟಿಕೊಟ್ಟರು. ವೇದಿಕೆಯ ಮೇಲೆ ಶರಣ ದಂಪತಿಗಳಿಗೆ ವಚನಗಳ ಮೂಲಕವೆ ಭಾವೋದಕದಿಂದ ಪ್ರಾರಂಭಿಸಿದ ಜಮಖಂಡಿಯ ರವಿ ಯಡಹಳ್ಳಿ ದಂಪತಿಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿಭೂತಿಧಾರಣೆ , ರುದ್ರಾಕ್ಷಿ ಕಂಕಣ ಕಟ್ಟುವುದರ ಜೊತೆ ವಚನಗಳೇ ಮಂತ್ರಗಳಾಗಿ ಹೂಮಳೆ ಸುರಿಯಿತು. ಇಡೀ ಸಭಾಂಗಣದ ತುಂಬೆಲ್ಲಾ ವಚನಗಳು ಬಿಟ್ಟರೆ ಬೇರೇನೂ ಇರಲಿಲ್ಲ. ಇಡೀ ಸಮಾರಂಭ ಬಸವಮಯವಾಗಿತ್ತು.

ಕಾರ್ಯಕ್ರಮವನ್ನು ಶಿಲ್ಪಾ ಕರಡಿ (ನಾರನಾಳ) ಮತ್ತು ಪೂಜಾ ಬರಗುಂಡಿ ( ಐದ್ನಾಳ) ಅರ್ಥಪೂರ್ಣವಾಗಿ ನಡೆಸಿಕೊಟ್ಟರು. ಬರಗುಂಡಿ ಹಾಗೂ ಗೌಡರ ಮನೆತನದ ಬಂಧು-ಮಿತ್ರರು, ಶರಣ-ಶರಣೆಯರು ಉಪಸ್ಥಿತರಿದ್ದು ಸಂಭ್ರಮಿಸಿದರು.

Share This Article
4 Comments
  • ಬರಗುಂಡಿ ಶರಣರು ಅಪ್ಪಟ ಬಸವ ತತ್ವ ನಿಷ್ಟರು ಅವರು ನಮಗೆ ಮಾಗ೯ದಶ೯ಕರು ಹೌದು ಯುವ ಜನತೆ ಇವರ ಹಾದಿಯಲ್ಲಿ ಸಾಗಿದರೆ ಅವರ ಬದುಕು ಬೆಳಕಾಗುವದರಲ್ಲಿ ಸಂದೇವಿಲ್ಲ. ಅವರ ಬಸವ ಭಕ್ತಿಗೆ ನನ್ನ ಅನಂತ ಶರಣುಗಳು.🙏🙏🙏

  • ಬರಗುಂಡಿಯವರ ಮನೆತನ ಅಂದ್ರೆ ಹಾಗೆ.
    ನಡೆ, ನುಡಿಯಲ್ಲಿ ಒಂದಾದ ಬರಗುಂಡಿಯವರ ಮನೆತನ ದ ಬಗ್ಗೆ ಹೆಮ್ಮೆ ಮತ್ತು ಅಭಿಮಾನ. 🙏

    • ಶೇಖರಪ್ಪ ಸಿದ್ಧಲಿಂಗಪ್ಪ ಕಳಸಾಪೂರಶೆಟ್ರ. ಗದಗ. says:

      ಅಪ್ಪಟ ಶರಣ ತತ್ವ ಸಿದ್ಧಾಂತಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮಾದರಿಯಾಗಿ ನಿಲ್ಲುವ ಪರಂಪರಾಗತ ಮನೆತನ. ಅವರಿಗೆ ಹೃತ್ಪೂರ್ವಕ ಶರಣು ಶರಣಾರ್ಥಿಗಳು.

Leave a Reply

Your email address will not be published. Required fields are marked *