ಗೋಕಾಕ ಬಸವ ಮಂಟಪಕ್ಕೆ ಜಾಗ ಒದಗಿಸಲು ರಮೇಶ ಜಾರಕಿಹೊಳಿ ಭರವಸೆ

ಬಸವ ಮೀಡಿಯಾ
ಬಸವ ಮೀಡಿಯಾ

ಗೋಕಾಕ:

ನಗರದಲ್ಲಿ ಬಸವ ಮಂಟಪ, ಧ್ಯಾನ ಮಂದಿರ ನಿರ್ಮಾಣಕ್ಕೆ ಜಾಗ ಮಂಜೂರಾತಿಯ ಬಗ್ಗೆ ರಾಷ್ಟ್ರೀಯ ಬಸವದಳ ಟ್ರಸ್ಟಿನ ಸದಸ್ಯರು ಶಾಸಕ ರಮೇಶ ಜಾರಕಿಹೊಳಿ ಅವರನ್ನು ಭೇಟಿ ಮಾಡಿದರು.

ನಗರದಲ್ಲಿ 30 ವರ್ಷಗಳಿಂದ ರಾಷ್ಟ್ರೀಯ ಬಸವದಳ ಸಾಮೂಹಿಕ ಪ್ರಾರ್ಥನೆ, ವಚನ ಚಿಂತನ ಗೋಷ್ಠಿಗಳು, ಶರಣರ ಜಯಂತಿಗಳನ್ನು ಆಚರಣೆ ಮಾಡುತ್ತಾ ಮಕ್ಕಳಿಗೆ ಬಸವತತ್ವ ಸಂಸ್ಕಾರ ಮತ್ತು ಲಿಂಗದೀಕ್ಷೆ ಕಾರ್ಯಕ್ರಮಗಳನ್ನು ನೆರವೇರಿಸುತ್ತಾ ಬರುತ್ತಿದೆ.

ಯಾವ ಜಾತಿ, ಮತ, ಪಂಥ, ಧರ್ಮ ಭೇದಭಾವವಿಲ್ಲದೆ  ಶರಣ ಸಮಾಜವನ್ನು ಕಟ್ಟುವಂತಹ ಕೆಲಸವನ್ನು  ರಾಷ್ಟ್ರೀಯ ಬಸವದಳ ಟ್ರಸ್ಟ್, ಬಸವ ಮಂಟಪದ ಶರಣ ಶರಣೆಯರು ಮಾಡುತ್ತಾ ಬಂದಿರುವುದನ್ನು ಸಭೆಯಲ್ಲಿ ವಿವರಿಸಲಾಯಿತು.

ಬಸವ ಮಂಟಪ ಕಟ್ಟಡ ನಿರ್ಮಾಣದಿಂದ ಸಮಾಜದಲ್ಲಿ ಸಾಂಸ್ಕೃತಿಕ ಹಾಗೂ ಧಾರ್ಮಿಕ ಜಾಗೃತಿ ಕಾರ್ಯಕ್ರಮಕ್ಕೆ ಮತ್ತಷ್ಟು ಉತ್ತೇಜನ ದೊರಕಲಿದೆ ಎಂಬ ಅಭಿಪ್ರಾಯವನ್ನು ಸಭೆಯಲ್ಲಿ ವ್ಯಕ್ತಪಡಿಸಲಾಯಿತು.

ಶೀಘ್ರದಲ್ಲೇ ಜಾಗ ಒದಗಿಸಲು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಯೋಜನೆಗೆ ಬೇಕಾದ ಅಗತ್ಯ ಸಹಕಾರ ನೀಡುವ ಭರವಸೆಯನ್ನು ಶಾಸಕರಾದ ರಮೇಶ ಜಾರಕಿಹೊಳಿ  ಮಾತನಾಡಿ ಹೇಳಿದರು.

ಬಸವಧರ್ಮ ಪೀಠದ ಗಣನಾಯಕಿ ಹಾಗೂ ರಾಷ್ಟ್ರೀಯ ಬಸವದಳ ಟ್ರಸ್ಟ್ ಕಮಿಟಿ ಉಪಾಧ್ಯಕ್ಷರಾದ ಶರಣೆ ಗುರುಪಾದವ್ವ ಜಕಾತಿ ಅವರು ಸಭೆಯ ನೇತೃತ್ವ ವಹಿಸಿದ್ದರು. ಸಭೆಯಲ್ಲಿ ಶಾಸಕರನ್ನು ಸನ್ಮಾನಿಸಲಾಯಿತು.

ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಶರಣ ಚನ್ನಬಸವ ಬಿಜಲಿ, ಮಾರುತಿ ಉತ್ತೂರ, ಸಾವಿತ್ರಮ್ಮ ಹಡಪದ, ಮಹಾನಂದ ಚಿಕ್ಕೋಡಿ, ರಾಷ್ಟ್ರೀಯ ಬಸವದಳದ ಮುಖಂಡರಾದ ಪಾರವ್ವಕ್ಕ ಹಳ್ಳೂರ, ಸಂಗಮೇಶ ಕುಂಟೋಜಿ, ಆನಂದ ಅಂಗಡಿ, ರಾಘವೇಂದ್ರ ಬಂಡಿಗಾರ, ಮಹಾದೇವಿ ಜಕಾತಿ, ಶಿವಾನಂದ ಪಾಟೀಲ, ಭೀಮಪ್ಪ ಪಟಗುಂದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *