ಹಿರೇಬಾಗೇವಾಡಿ :
ಗ್ರಾಮದ ಸುರೇಶ ಬ. ಇಟಗಿ ಮತ್ತು ಶಶಿಕಲಾ ಎಸ್. ಇಟಗಿ ಶರಣ ದಂಪತಿಗಳು ಬಸವನಗರದಲ್ಲಿ ನೂತನವಾಗಿ ನಿರ್ಮಿಸಿದ ‘ಬಸವ-ಬಂಗಾರ’ದ ಗುರುಪ್ರವೇಶ ಮತ್ತು ಸಾಮೂಹಿಕ ಇಷ್ಟಲಿಂಗ ಪೂಜಾ ಕಾರ್ಯಕ್ರಮ ಮಾರ್ಚ್ 15, ರವಿವಾರ ನಡೆಯಲಿದೆ.
ಕಾರ್ಯಕ್ರಮದ ಸಾನಿಧ್ಯವನ್ನು ನಾಗನೂರ ರುದ್ರಾಕ್ಷಿಮಠದ ಪೂಜ್ಯ ಡಾ. ಅಲ್ಲಮಪ್ರಭು ಸ್ವಾಮಿಗಳು, ಕಾರಂಜಿಮಠದ ಪೂಜ್ಯ ಗುರುಸಿದ್ದ ಸ್ವಾಮಿಗಳು, ಬಡೇಕೊಳ್ಳಮಠದ ಸದ್ಗುರು ನಾಗೇಂದ್ರ ಸ್ವಾಮಿಗಳು, ಅರಳಿಕಟ್ಟಿ ತೋಂಟದಾರ್ಯ ಮಠದ ಶಿವಮೂರ್ತಿ ಸ್ವಾಮಿಗಳು, ಪೂಜ್ಯ ಉಳವಪ್ಪ ಅಜ್ಜನವರು, ಸೈಯ್ಯದ ಅಲ್ಲಾವುದ್ದೀನಷಾ ಖಾದ್ರಿ ದರ್ಗಾ ಅಜ್ಜನವರು ಸಾನಿಧ್ಯ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಜಾಗತಿಕ ಲಿಂಗಾಯತ ಮಹಾಸಭೆ, ಸಂಚಾರಿ ಗುರುಬಸವ ಬಳಗ ಪ್ರಮುಖರು ಉಪಸ್ಥಿತರಿರುವರು.
ಕಾರ್ಯಕ್ರಮ 8.45 ಗಂಟೆಗೆ ಶ್ರೀ ಬಸವೇಶ್ವರ ವೃತ್ತದಿಂದ ನೂತನ ಮನೆಯವರೆಗೆ ಧರ್ಮ ಜಾಗೃತಿ ನಡಿಗೆ, 9.30 ಗಂಟೆಗೆ ನೂತನ ಮನೆಯ ಗುರುಪ್ರವೇಶ, 10 ಗಂಟೆಗೆ ಷಟಸ್ಥಲ ಧ್ವಜಾರೋಹಣ, 10.30 ಗಂಟೆಗೆ ಪೂಜ್ಯರಿಗೆ ಹಾಗೂ ಗುರುಹಿರಿಯರಿಗೆ ಗೌರವ ಸಮರ್ಪಣೆ, 11 ಗಂಟೆಗೆ ಇಷ್ಟಲಿಂಗ ಪೂಜೆ, 11.30 ಗಂಟೆಗೆ ಅನುಭಾವ, 12.30 ಗಂಟೆಗೆ ಸಂಗೀತ ಸೇವೆ, ಮಧ್ಯಾಹ್ನ 1ಗಂಟೆಗೆ ಮಹಾಪ್ರಸಾದ ನೆರವೇರುವುದು.
ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/
