ಸೇಡಂ ಉತ್ಸವ: ಪಟ್ಟಣದಲ್ಲಿ ಮಹಿಳೆಯರಿಂದ ‘ಬಸವ ಬುತ್ತಿ’ ಮೆರವಣಿಗೆ

ಬಸವ ಮೀಡಿಯಾ
ಬಸವ ಮೀಡಿಯಾ

ಸೇಡಂ

ಸಂಘ ಪರಿವಾರ ಆಯೋಜಿಸಿರುವ ಭಾರತೀಯ ಸಂಸ್ಕೃತಿ ಉತ್ಸವ ನಿಮಿತ್ತವಾಗಿ ಪಟ್ಟಣದಲ್ಲಿ ಇತ್ತೀಚೆಗೆ ಬಸವ ಬುತ್ತಿ ಮೆರವಣಿಗೆ ನಡೆಯಿತು.

ಜನವರಿ 20ರಂದು ಬಸವೇಶ್ವರ ವೃತ್ತದಲ್ಲಿರುವ ಬಸವಣ್ಣನ ಪುತ್ಥಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಬಸವ ಬುತ್ತಿಯನ್ನು ತಲೆ ಮೇಲೆ ಹೊತ್ತು ಮಹಿಳೆಯರು ಬಸವೇಶ್ವರ ವೃತ್ತದಿಂದ ಹೊರತು ಕೊತ್ತಲ ಬಸವೇಶ್ವರ ದೇವಾಲಯದವರೆಗೆ ಮೆರವಣಿಗೆಯಲ್ಲಿ ಸಾಗಿದರು.
ದೇವಾಲಯದ ಸಪ್ಪಣ್ಣಾರ್ಯ ಶಿವಯೋಗಿ ದಾಸೋಹಕ್ಕೆ ಬುತ್ತಿಗಳನ್ನು ಸಮರ್ಪಿಸಿ ಎಲ್ಲರೂ ಬಸವ ಬುತ್ತಿಯ ಭೋಜನವನ್ನು ಸವಿದರು.

ಗುಡೂರಿನ ಅನ್ನದಾನೇಶ್ವರ ಸ್ವಾಮೀಜಿ, ಕೊತ್ತಲ ಬಸವೇಶ್ವರ ದೇವಾಲಯದ ಸದಾಶಿವ ಸ್ವಾಮೀಜಿ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಬಸವ ತತ್ವದ ಆಶಯಗಳಿಗೆ ವಿರುದ್ಧವಾಗಿದ್ದರೂ ಸಂಘ ಪರಿವಾರದವರು ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಪ್ರಚಾರ ಕೊಡಲು ಬಸವಣ್ಣನವರ ಹೆಸರು ಬಳಸಿಕೊಳ್ಳುತ್ತಿದ್ದಾರೆ ಎಂದು ಸೌಹಾರ್ದ ಕರ್ನಾಟಕ ವೇದಿಕೆ ಖಂಡಿಸಿದೆ.

ಪ್ರಚಾರ ಕಾರ್ಯಕ್ಕೆ ‘ಬಸವ ರಥ’ವನ್ನು ಬೀದರ್ ಜಿಲ್ಲೆಯ ಸಂಘ ಪರಿವಾರದವರು ಹೊರಡಿಸಿರುವ ಹಿನ್ನೆಲೆಯಲ್ಲಿಯೇ ‘ಬಸವ ಬುತ್ತಿ’ ಮೆರವಣಿಗೆ ಆಯೋಜಿಸಿರುವುದು ವರದಿಯಾಗಿದೆ.

Share This Article
1 Comment
  • ಬಸವ ಬುತ್ತಿಯಲ್ಲಿ… ವೇದಾಗಮಗಳ ಔತಣದ ಕೂಟವಡಗಿತ್ತು. ಭರ್ಜರಿಯ ಪೂರ್ಣ ಯಜ್ಞವೊಂದು ನಡೆದೊಯ್ತು …r

Leave a Reply

Your email address will not be published. Required fields are marked *