ಭಾಲ್ಕಿಯಲ್ಲಿ ಬಸವ ದರ್ಶನ ಪ್ರವಚನ’ಕ್ಕೆ ಅದ್ಧೂರಿ ಚಾಲನೆ

ಬಸವ ಮೀಡಿಯಾ
ಬಸವ ಮೀಡಿಯಾ

ಭಾಲ್ಕಿ :

ವಿಶ್ವಗುರು ಬಸವಣ್ಣನವರ ಜಯಂತಿ ಉತ್ಸವ ಹಾಗೂ ವಚನ ಜಾತ್ರೆ-2026 ರ ಅಂಗವಾಗಿ, ಪೂಜ್ಯ ಡಾ. ಚನ್ನಬಸವ ಪಟ್ಟದ್ದೇವರ 27ನೇ ಸ್ಮರಣೋತ್ಸವ ಮತ್ತು ನಾಡೋಜ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವದ ನಿಮಿತ್ತ ಜರುಗಿದ ‘ಬಸವ ದರ್ಶನ ಪ್ರವಚನ’ ಉದ್ಘಾಟನಾ ಸಮಾರಂಭ’ಕ್ಕೆ ಬುಧವಾರ ಅದ್ಧೂರಿ ಚಾಲನೆ ದೊರಕಿತು.

ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷರಾದ ನಾಡೋಜ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರ ಸಾನಿಧ್ಯದಲ್ಲಿ, ಬೆಳಗಾವಿಯ ಶ್ರೀ ಸಿದ್ಧೇಶ್ವರ ಮಠದ ಪೂಜ್ಯ ಶಿವಾನಂದ ಮಹಾಸ್ವಾಮಿಗಳಿಂದ ಮೂಡಿಬಂದ ಪ್ರವಚನವು ನೆರೆದಿದ್ದ ಬಸವಭಕ್ತರಲ್ಲಿ ಜ್ಞಾನದ ಜ್ಯೋತಿಯನ್ನು ಮೂಡಿಸಿತು.

ಭಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯ ಗುರುಬಸವ ಪಟ್ಟದ್ದೇವರ ಕಾರ್ಯಕ್ರಮದ ಸಮ್ಮುಖ ವಹಿಸಿದ್ದರು.

ಕಾರ್ಯಕ್ರಮದ ಉದ್ಘಾಟನೆಯನ್ನು ತಳವಾಡೆ ಆಸ್ಪತ್ರೆ, ಭಾಲ್ಕಿಯ ವೈದ್ಯರಾದ ಡಾ. ಶೈಲಜಾ ಡಾ. ಅನೀಲಕುಮಾರ ತಳವಾಡೆ ಅವರು ನೆರವೇರಿಸಿದರು.

ಮುಖಂಡರಾದ ಸುಭಾಷ ಕಾರಾಮುಂಗೆ ಅಧ್ಯಕ್ಷತೆಯನ್ನು ವಹಿಸಿದ್ದರು. ಬಸವ ಗುರುಪೂಜೆಯನ್ನು ಯುವ ಮುಖಂಡರಾದ ಪ್ರಸನ್ನ ಪ್ರಕಾಶ ಖಂಡ್ರೆ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಪತ್ರಕರ್ತರ ಸಂಘದ ಅಧ್ಯಕ್ಷರಾದ ಜೈರಾಜ ದಾಬಶೆಟ್ಟೆ, ವೈದ್ಯರಾದ ಡಾ. ಪ್ರೇರಣಾ ಡಾ. ಸಚಿನ್ ಎಡವೆ ಅವರು ಭಾಗವಹಿಸಿದ್ದರು.

ಪ್ರವಚನ ಸೇವಾ ಸಮಿತಿಯ ಅಧ್ಯಕ್ಷರಾದ ಪಂಕಜಾ ಶಿವು ಲೋಖಂಡೆ ಸ್ವಾಗತಿಸಿದರು. ನಿವೃತ್ತ ಪ್ರಾಚಾರ್ಯರಾದ ರೇಖಾ ಮಹಾಜನ ಶರಣು ಸಮರ್ಪಣೆ ಮಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಶರಣ ದೀಪಕ ತಮಕೆ ಭಾತಂಬ್ರಾ ನೆರವೇರಿಸಿದರು.

ನಂತರದಲ್ಲಿ ಕಲಬುರಗಿಯ ಸಂಗಮೇಶ ಪಾಟೀಲ, ಗದಗದ ತೋಂಟೇಂದ್ರಕುಮಾರ ಕರಡಕಲ್, ಭಾಲ್ಕಿಯ ಮಹಾಂತೇಶ ಇವರಿಂದ ವಚನ ಸಂಗೀತ ನೆರವೇರಿತು.

ಕಾರ್ಯಕ್ರಮದ ದಾಸೋಹ ಸೇವೆಯನ್ನು ಶಾರದಾ ಖಾನಾವಳಿಯ ಮಾಲೀಕರಾದ ಬಾಬುರಾವ್ ಮದಕಟ್ಟೆ ಅವರು ವಹಿಸಿಕೊಂಡಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *