ಬೀದರ
ಬೀದರ ತಾಲೂಕಿನ ಸಂಗೊಳಗಿ ಗ್ರಾಮದಲ್ಲಿ ಮೇ 10 ರಿಂದ ಮೇ 17 ರವರೆಗೆ ಪ್ರತಿದಿನ ಸಾಯಂಕಾಲ 7ರಿಂದ 8.30ವರೆಗೆ “ಬಸವ ದರ್ಶನ” ಪ್ರವಚನ ಜರುಗಲಿದೆ.
ಬಸವ ಜಯಂತಿ ಉತ್ಸವ ಸಮಿತಿ ಸಂಗೊಳಗಿ ಇವರ ಆಶ್ರಯದಲ್ಲಿ ಪ್ರವಚನಕಾರರು, ರಾಮದುರ್ಗ ತಾಲೂಕು ನಾಗನೂರ ಗುರುಬಸವ ಮಠದ ಪೂಜ್ಯ ಬಸವಗೀತಾ ಮಾತಾಜಿ ಪ್ರವಚನ ನಡೆಸಿಕೊಡಲಿದ್ದಾರೆ.
