ಕಲಬುರಗಿ
ಸಿದ್ದಾರ್ಥ ನಗರದ ಬುದ್ಧ ವಿಹಾರದಲ್ಲಿ ಸ್ಲಂ ಜನರ ಸಂಘಟನೆ- ಕರ್ನಾಟಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂದತ್ವ ನಿಯಂತ್ರಣ ವಿಭಾಗ ಇವುಗಳ ಸಂಯುಕ್ತ ಆಶ್ರಯದಲ್ಲಿ ” ವಿಶ್ವಗುರು ಬಸವಣ್ಣನವರ 892ನೇ ಜಯಂತೋತ್ಸವ”ದ ನಿಮಿತ್ತವಾಗಿ ನಗರದ ಪೌರಕಾರ್ಮಿಕರಿಗೆ ಉಚಿತ ಕನ್ನಡಕಗಳನ್ನು ವಿತರಿಸುವ ಕಾರ್ಯಕ್ರಮವನ್ನಿಂದು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಕಲಬುರ್ಗಿ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಶರಣಬಸಪ್ಪ ಕ್ಯಾತ್ನಾಳ್ ಅವರು ಉದ್ಘಾಟಿಸಿದರು.

ಜಿಲ್ಲಾ RCH ಅಧಿಕಾರಿಗಳಾದ ಡಾ. ಸಿದ್ದರಾಮಪ್ಪ ಪಾಟೀಲ, ಹಿರಾಪುರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅನಿತಾ ಜಾದವ, ಪ್ರಕಾಶ ಮಾಲಿಪಾಟೀಲ, ಶರಣು ಪಪ್ಪ, ವಲಯ ಆಯುಕ್ತರಾದ ರಮೇಶ್ ಪಟೇದಾರ, ಬಾಬುರಾವ್ಯ ದಂಡಿನ್ಕರ್, ನೇತ್ರ ಸಹಾಯಕರಾದ ಆಶಿಯಾ ಬೇಗಂ, ಅಲಿಸಾ ಬೇಗಂ, ಅಲ್ಲಮಪ್ರಭು ನಿಂಬರ್ಗಾ, ಪರಿಸರ ಅಭಿಯಂತರ ಬಾಬುರಾವ್ ಮೇಲಿನಕೇರಿ, ಹನುಮಂತ ನಿಂಬಾಳ್ಕರ್, ಬ್ರಹ್ಮಾನಂದ ಮಿಂಚಾ, ವಿಕಾಸ ಸಾವರಿಕರ್, ಯಮನಪ್ಪ ಪ್ರಸಾದ್, ಕವಿತಾ ಇನಾಮ್ದಾರ್, ಅನ್ನಪೂರ್ಣ ನಾಯ್ಕೋಡಿ, ಜಯಶ್ರೀ ಪ್ರಸಾದ್, ವಿಶ್ವನಾಥ್ ಪಟ್ಟದಾರ್ ಮುಂತಾದ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.