ಸಿಂಧನೂರು
ನಗರದಲ್ಲಿ ಬಸವ ಜಯಂತಿ ಅಂಗವಾಗಿ ಪಥ ಸಂಚಲನ ಹಾಗೂ ಬಸವ ಸಂದೇಶ ಕರಪತ್ರ ಹಂಚುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಮುಂದಿನ ಹನ್ನೊಂದು ದಿನಗಳ ಪರ್ಯಂತ ಪ್ರತಿದಿನ ಈ ಕಾರ್ಯಕ್ರಮ ಜರುಗಲಿದೆ. ಶ್ರೀ ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಬಸವ ಕೇಂದ್ರದ ಅಧ್ಯಕ್ಷರಾದ ಶರಣ ಕರೇಗೌಡ ಕುರುಕುಂದ ಪಥಸಂಚಲನಕ್ಕೆ ಚಾಲನೆ ನೀಡಿದರು.


ಉತ್ಸವ ಸಮಿತಿ ಅಧ್ಯಕ್ಷರಾದ ನಾಗಭೂಷಣ ನವಲಿ, ಗೌರವಾಧ್ಯಕ್ಷರಾದ ವೀರಭದ್ರಗೌಡ ಅಮರಾಪುರ, ಹಿರಿಯ ಶರಣ ಸಿದ್ರಾಮಪ್ಪ ಸಾಹುಕಾರ, ಶಾಂತಪ್ಪ ಚಿಂಚರಕಿ, ಗುಂಡಪ್ಪಣ್ಣ ಬಳಿಗಾರ, ಶರಣಪ್ಪಣ್ಣ ತೆಂಗಿನಕಾಯಿ, ಬಸವಕೇಂದ್ರದ ಹಾಗೂ ಎಲ್ಲಾ ಬಸವಪರ ಸಂಘಟನೆಯ ಪ್ರಮುಖರು ಸಕ್ರಿಯವಾಗಿ ಭಾಗವಹಿದ್ದರು.