ಬಸವ ಜಯಂತಿಗೆ ಹುಬ್ಬಳ್ಳಿಯಲ್ಲಿ ವಚನಾಧಾರಿತ ರಸಪ್ರಶ್ನೆ ಸ್ಪರ್ಧೆ

ಹುಬ್ಬಳ್ಳಿ

ನಗರದ ಶ್ರೀ ಗುರುಬಸವ ಮಂಟಪದ ನೀಲಾಂಬಿಕ ಬಳಗದ ವತಿಯಿಂದ ಪ್ರಸಕ್ತ ಸಾಲಿನ ವಿಶ್ವಗುರು ಬಸವೇಶ್ವರ ಜಯಂತಿ ಅಂಗವಾಗಿ ವಚನಾಧಾರಿತ ರಸಪ್ರಶ್ನೆ ಸ್ಪರ್ಧೆಯನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ತಿಯ ಲಿಂಗಾಯತ ಮಹಿಳಾ ಸಂಘಟನೆಗಳ ಸದಸ್ಯರಿಗಾಗಿ ಆಯೋಜಿಸಲಾಗಿದೆ.

ಸ್ಪರ್ಧೆಯು ಇದೇ ಏಪ್ರಿಲ್ ೦೬ರ ರವಿವಾರದಂದು ಬೆಳಿಗ್ಗೆ ೧೧ ಘಂಟೆಗೆ ಜರುಗುತ್ತಿದ್ದು, ಹುಬ್ಬಳ್ಳಿ ಹಾಗೂ ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿ ಬರುವ ಲಿಂಗಾಯತ ಮಹಿಳಾ ಸಂಘಟನೆಗಳ ಸದಸ್ಯರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.

ಪ್ರತಿ ಒಂದು ಸಂಘಟನೆಯಿಂದ ಇಬ್ಬರು ಸ್ಪರ್ಧೆಗಳು ಭಾಗವಹಿಸಲು ಅವಕಾಶವಿರುತ್ತದೆ.
ಪುರುಷರಿಗೆ ಸ್ಪರ್ಧೆಯಲ್ಲಿ ಅವಕಾಶವಿರುವದಿಲ್ಲ.

ವಚನಧಾರಿತ ರಸಪ್ರಶ್ನೆ ಸ್ಪರ್ಧೆಯಲ್ಲಿ ಬಸವಾದಿ ಶರಣ ಶರಣೆಯರ ವಚನಗಳಲ್ಲಿ ಅಡಗಿರುವ ತಾತ್ವಿಕ ಅಂಶಗಳು, ಸಾಮಾಜಿಕ ಅಂಶಗಳು, ಧಾರ್ಮಿಕ ವಿಚಾರಗಳು ಹಾಗೂ ಲಿಂಗಾಯತ ಧರ್ಮಕ್ಕೆ ಸಂಬಂಧಿಸಿದ ಸಿದ್ಧಾಂತಗಳು, ತತ್ವಗಳು ಹಾಗೂ ಲಿಂಗಾಯತ ಪರಂಪರೆಗೆ ಸಂಬಂಧಿಸಿದ ಗ್ರಂಥಗಳು, ಗ್ರಂಥ ಕರ್ತರು, ವಚನ ಸಾಹಿತ್ಯದ ಐತಿಹಾಸಿಕ ಸಂಗತಿಗಳು, ಲಿಂಗಾಯತದ ಐತಿಹಾಸಿಕ ವಿಷಯಗಳು, ವಚನಕಾರರು ಹಾಗೂ ಅವರ ವಚನಾಂಕಿತಗಳು ಮೊದಲಾದವುಗಳನ್ನು ಸ್ಪರ್ಧಿಗಳು ಅಧ್ಯಯನ ಮಾಡಿಕೊಂಡು ಬರಲು ಸೂಚಿಸುತ್ತೇವೆ.

ಸ್ಪರ್ಧೆಯಲ್ಲಿ ವಿಜೇತ ಸಂಘಟನೆಗಳಿಗೆ ಕ್ರಮವಾಗಿ ಪ್ರಥಮ ೨೦೦೦/-
ದ್ವಿತೀಯ ೧೫೦೦/-
ತೃತೀಯ ೧೦೦೦/-
ನಗದು ಬಹುಮಾನವಿದ್ದೂ ಫಲಕ, ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ.

ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತರು ತಮ್ಮ ಸಂಘಟನೆಯ ಹೆಸರಿನೊಂದಿಗೆ ಹೆಸರು ನೋಂದಾಯಿಸಬೇಕು.

ಹೆಸರು ನೋಂದಾಯಿಸಲು ಕೊನೆಯ ದಿನಾಂಕ ೨೫. ೦೩. ೨೦೨೫ ಇರುತ್ತದೆ.

ಹೆಚ್ಚಿನ ಮಾಹಿತಿ ಹಾಗೂ ಹೆಸರು ನೊಂದಾಯಿಸಲು ಕೆಳಗಿನ ಆಯೋಜಕರ ದೂರವಾಣಿಗೆ ಸಂಪರ್ಕಿಸಲು ಕೋರಲಾಗಿದೆ.

ಶರಣೆ ಶಾರದಾ ಪಾಟೀಲ
8095154920
ಶರಣೆ ಅನಿತಾ ಕುಬಸದ
9731863204.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/E98vBDEsxjs5GHomGeoNMz

Share This Article
Leave a comment

Leave a Reply

Your email address will not be published. Required fields are marked *