ಕೂಡಲಸಂಗಮ
‘ಬಸವ ಧರ್ಮ ಪೀಠದಿಂದ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಅಕ್ಟೋಬರ್ 18 ರಿಂದ 20ರವರೆಗೆ 23ನೇ ಕಲ್ಯಾಣ ಪರ್ವ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.
‘18ರಂದು ಧರ್ಮ ಚಿಂತನ ಗೋಷ್ಠಿ ಮತ್ತು ಮಹಿಳಾ ಗೋಷ್ಠಿ, 19ರಂದು 23ನೇ ಕಲ್ಯಾಣ ಪರ್ವ ಉದ್ಘಾಟನೆ, ಪೀಠಾರೋಹಣ ಸಮಾರಂಭ ನಡೆಯಲಿದೆ. 20ರಂದು ಬಸವಣ್ಣನ ಭಾವಚಿತ್ರ ಮತ್ತು ವಚನ ಸಾಹಿತ್ಯದ ಮೆರವಣಿಗೆ ನಡೆಯಲಿದೆ. ಸಮಾರಂಭದಲ್ಲಿ ಸಚಿವರು, ಶಾಸಕರು, ಚಿಂತಕರು, ಸಂಶೋಧಕರು, ಸ್ವಾಮೀಜಿ ಪಾಲ್ಗೊಳ್ಳುವರು’ ಎಂದು ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ತಿಳಿಸಿದ್ದಾರೆ.
‘ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಂದ 1 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ. ಕಾರ್ಯಕ್ರಮದ ಎಲ್ಲ ಸಿದ್ಧತೆ ಪೂರ್ಣಗೊಂಡಿವೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.