ಬಸವಕಲ್ಯಾಣ
ಸುಕ್ಷೇತ್ರ ಬಸವಕಲ್ಯಾಣದಲ್ಲಿ ಪ್ರತಿವರ್ಷದಂತೆ ಈ ವರ್ಷವು ಶರಣ ವಿಜಯೋತ್ಸವ, ನಾಡಹಬ್ಬ, ಶರಣ ಹುತಾತ್ಮ ದಿನಾಚರಣೆಯು ಅಕ್ಟೋಬರ್ 03 ರಿಂದ 12, 2024ರ ವರೆಗೆ ಆಚರಿಸಲಾಗುವುದು.
ಅಂತರಾಷ್ಟ್ರೀಯ ಲಿಂಗಾಯತ ಧರ್ಮಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠ, ಬಸವಕಲ್ಯಾಣ ನೇತೃತ್ವದಲ್ಲಿ, ಪ್ರತಿದಿನ ಸಂಜೆ 6:00ಗಂಟೆಗೆ ಹರಳಯ್ಯನವರ ಗವಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಾದ ನಾಟಕ, ವಚನ ಸಂಗೀತ, ನೃತ್ಯ, ಭಜನೆ, ಕೋಲಾಟ, ಮಕ್ಕಳ ಸಂಸತ್ತು, ವಚನ ಚಿಂತನ, ಪ್ರವಚನ ಮತ್ತಿತರ ಕಾರ್ಯಕ್ರಮಗಳು ಭಕ್ತಿ, ಶ್ರದ್ಧೆ, ವೈಭವಗಳಿಂದ ನೆರವೇರುವವು.

ಇದರಲ್ಲಿ ಕಲ್ಯಾಣ ಕ್ರಾಂತಿಯ ಮಹತ್ವದ ದಿವಸವಾದ ಶರಣರ ಹುತಾತ್ಮ ದಿನದಂದು ಅಂದರೆ 11, ಶುಕ್ರವಾರದಂದು ಅತ್ಯಂತ ಮಹತ್ವದ ಘಟನೆಯಾದ ಶರಣರ ಎಳೆಹೂಟೆ ಶಿಕ್ಷೆಯ ಪ್ರಸಂಗವನ್ನು ಪ್ರತ್ಯಕ್ಷ ಪ್ರತಿಬಿಂಬಿಸಲು ಆ ದಿನ ಮಧ್ಯಾಹ್ನ 3 ಗಂಟೆಗೆ ಬಸವಕಲ್ಯಾಣದ ಐತಿಹಾಸಿಕ ಕೋಟೆಯಿಂದ ಹರಳಯ್ಯನವರ ಗವಿಯವರೆಗೆ ಎಳೆಹೂಟೆ ಮೆರವಣಿಗೆ ನಡೆಸಲಾಗುವುದು.
ಅದೇ ದಿವಸ 02 ಗಂಟೆಗೆ ಅನುಭವ ಮಂಟಪದ ಪರಿಸರದಲ್ಲಿರುವ ಹರಳಯ್ಯನವರ ದಿಬ್ಬದಿಂದ ಶರಣರ ರಕ್ತ ಚೆಲ್ಲಿದ ಪವಿತ್ರ ಮಣ್ಣನ್ನು ಅಮೃತಕಲಶದಲ್ಲಿ ಗಾಂಭೀರ್ಯ ಪೂರ್ಣವಾದ ಮೆರವಣಿಗೆಯೊಂದಿಗೆ 03 ಗಂಟೆಗೆ ಕಲ್ಯಾಣ ಕೋಟೆಗೆ ತಲುಪಿಸಲಾಗುವುದು. ತದನಂತರದಲ್ಲಿ ಈ ಅಮೃತ ಕಲಶ ಮತ್ತು ವಚನ ಸಾಹಿತ್ಯದ ಜೊತೆ ಎಳೆಹೂಟೆ ಮೆರವಣಿಗೆಗೆ ಚಾಲನೆ ಕೊಡಲಾಗುವುದು.

ಜೊತೆಗೆ ಕಲಬುರಗಿ ಜಿಲ್ಲೆ ಬಿಜ್ಜನಹಳ್ಳಿ ಗ್ರಾಮದಲ್ಲಿದ್ದ 12ನೇ ಶತಮಾನದ ಹರಳಯ್ಯ ಮತ್ತು ಕಲ್ಯಾಣಮ್ಮ ದಂಪತಿಗಳು ತಮ್ಮ ಚರ್ಮದಿಂದ ಚಮ್ಮಾವುಗೆ ಮಾಡಿ ಬಸವಣ್ಣನವರಿಗೆ ಅರ್ಪಿಸಿದ ಮೂಲ ಚಮ್ಮಾವುಗೆಗಳ ಹತ್ತಿರ ನಿರಂತರವಾಗಿ ಬೆಳಗುತ್ತಿರುವ ಜ್ಯೋತಿಯನ್ನು ಮುಟ್ಟಿ, ಆ ಜ್ಯೋತಿಯನ್ನು ಭಕ್ತಿಪೂರ್ವಕವಾಗಿ ಕಲ್ಯಾಣಕ್ಕೆ ತಂದು ಮೆರವಣಿಗೆಯಲ್ಲಿ ಬೆಳಗಿಸಲಾಗುವುದು.
ಎಳೆಹೂಟೆ ಮೆರವಣಿಗೆಯಂದು ನಾಡಿನ ಮೂಲೆ ಮೂಲೆಯಿಂದ ತಂಡೋಪತಂಡದಲ್ಲಿ ದಿಂಡಿಯಾತ್ರೆ, ವಚನಭಜನೆ, ವಚನಗಾಯನ ಮಾಡುತ್ತಾ, ಕಲ್ಯಾಣ ಕೋಟೆಯ ಮುಖ್ಯ ದ್ವಾರದಲ್ಲಿ ಉಪಸ್ಥಿತರಿದ್ದು, ಶರಣರ ತ್ಯಾಗ ಬಲಿದಾನದ ಪ್ರಸಂಗವನ್ನು ಪುನರ್ಜೀವಿತಗೊಳಿಸಿ ಜೊತೆಗೆ ಶರಣರ ಬಲಿದಾನದ ಚಿಹ್ನವಾದ ಬಿಜ್ಜನಹಳ್ಳಿಯಿಂದ ತಂದ ಜ್ಯೋತಿಯ ದರ್ಶನ ಪಡೆದು ಪುನೀತರಾಗಬೇಕೆಂದು ನಾಡಿನ ಬಸವಭಕ್ತ ಸಮೂಹಕ್ಕೆ ಪೂಜ್ಯಶ್ರೀ ಡಾ. ಗಂಗಾಂಬಿಕ ಅಕ್ಕ ಅವರು ಕೇಳಿಕೊಂಡಿದ್ದಾರೆ.

ಶರಣ ವಿಜಯೋತ್ಸವ, ಲಿಂಗವಂತ ಹುತಾತ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾದ ವಿವಿಧ ಕಾರ್ಯಕ್ರಮಗಳು
ನೇತೃತ್ವ ಹಾಗೂ ಸಾನಿಧ್ಯ: ಪೂಜ್ಯಶ್ರೀ ಡಾ. ಗಂಗಾಂಬಿಕಾ ಅಕ್ಕ, ಅಂತರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ, ಬಸವಕಲ್ಯಾಣ
03.10.2024
ಬೆಳಿಗ್ಗೆ 08 ಗಂಟೆಗೆ ಆರಂಭೋತ್ಸವ, ಶ್ರೀಬಸವೇಶ್ವರ ದೇವಸ್ಥಾನದಿಂದ ಪೂಜೆ ಪ್ರಾರ್ಥನೆಯೊಂದಿಗೆ ಆರಂಭಿಸಿ ಸಕಲ ವೈಭವದೊಂದಿಗೆ ವಚನ ಸಾಹಿತ್ಯದ ಪಲ್ಲಕ್ಕಿ ಉತ್ಸವ ಪರುಷಕಟ್ಟೆಯವರೆಗೆ.
ಬೆಳಗ್ಗೆ 09 ಗಂಟೆಗೆ ಪರುಷಕಟ್ಟೆಯಲ್ಲಿ ವಚನ ಪಠಣ ಮತ್ತು ಮಂಗಲಾಚರಣೆ ನಂತರ ಪರುಷಾಮೃತ ಪ್ರಸಾದ ವಿತರಣೆ ನಡೆಯುವುದು.
ಉದ್ಘಾಟನಾ ಸಮಾರಂಭ ಸಾಯಂಕಾಲ 6:00 ಗಂಟೆಗೆ, ವಿಶೇಷ ಉಪನ್ಯಾಸ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಸ್ಥಳ: ಹರಳಯ್ಯನವರ ಗವಿ, ಬಸವಕಲ್ಯಾಣ
04.10.2024
ಮಾಚಿದೇವ-ಮಲ್ಲಿಬೊಮ್ಮ ವೀರಸೈನಿಕರ ವೇದಿಕೆ
ಸಾಯಂಕಾಲ 6:00 ಗಂಟೆಗೆ ರಾಷ್ಟ್ರರಕ್ಷಣೆ ಮತ್ತು ದೇಶದ ಪ್ರಗತಿಗಾಗಿ ಸೈನಿಕರ ಪಾತ್ರ
05.10.2024
ಮಕ್ಕಳ ಸಮಾವೇಶ
ಸಾಯಂಕಾಲ 6 ಗಂಟೆಗೆ
ಮಕ್ಕಳಿಂದ ಉಪನ್ಯಾಸ, ನಾಟಕ ನೃತ್ಯ, ಸಂಗೀತ ಪ್ರಸ್ತುತಿ.
ನಾಟಕ, ಭೂಮಿತಾಯಿ
06.10.2024
ಮಹಾಶಕ್ತಿಕೂಟಗಳ ಸಮಾವೇಶ ಸಾಯಂಕಾಲ 6 ಗಂಟೆಗೆ, ಸ್ತ್ರೀ ಮುಂದಾಳತ್ವದಲ್ಲಿ ದೇಶ ಪ್ರಗತಿ ಉಪನ್ಯಾಸ, ನಾಟಕ, ನೃತ್ಯ, ಕೋಲಾಟ, ಬುಲಾಯಿ ಪದ, ವಚನ ಉಗ್ಘಡನೆ
07.10.2024
ಹಿರಿಯ ನಾಗರಿಕರ ಸಮಾವೇಶ
ಸಂಜೆ 06 ಗಂಟೆಗೆ
ಆರೋಗ್ಯ ರಕ್ಷಣೆಯ ಚಿಂತನೆ
ಸರಕಾರದಿಂದ ದೊರಕುವ ಸೌಲಭ್ಯಗಳ ವಿವೇಚನೆ, ಹಿರಿಯ ನಾಗರಿಕರ ಸಾಮಾಜಿಕ ಸೇವೆ ಒಂದು ನೋಟ
08.10.2024
ಸಂಜೆ 06ಕ್ಕೆ ನಾಟಕ, ತಾಯಿಯ ಕರುಳು
09.10.2024
ಸಮಾಜೋ-ಸಾಂಸ್ಕೃತಿಕ ನಾಯಕ ಬಸವಣ್ಣ ಸಂಜೆ 06 ಗಂಟೆಗೆ ಉಪನ್ಯಾಸ,
ಬಸವ ಚಳುವಳಿ ಅಂದು ಇಂದು ಮುಂದು, ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು
10.10.2024
ಅನುಭವ ಮಂಟಪದ ಕೊಡುಗೆ, ಕೃಷಿಕೃತ್ಯ ಕಾಯಕ
ಸಂಜೆ 06 ಗಂಟೆಗೆ ಉಪನ್ಯಾಸ, ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು
11.10.2024
ಸಾಮೂಹಿಕ ಇಷ್ಟಲಿಂಗ ಪೂಜಾಯೋಗ,
ಬೆಳಿಗ್ಗೆ 11ಗಂಟೆಗೆ,
770 ಅಮರಗಣಂಗಳ ಪ್ರಾತಿನಿಧಿಕವಾಗಿ
ಶರಣವಿಜಯ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ಸಂಜೆ 06.30ಗಂಟೆಗೆ
ವಿಶ್ವಧರ್ಮದ ರಕ್ಷಣೆಗಾಗಿ ಶರಣರ ಬಲಿದಾನ ಉಪನ್ಯಾಸ
ಎಳೆಹೂಟೆಯ ಮೆರವಣಿಗೆ
ಮಧ್ಯಾಹ್ನ 03 ಗಂಟೆಯಿಂದ ಬಸವಕಲ್ಯಾಣದ ಐತಿಹಾಸಿಕ ಕೋಟೆಯಿಂದ ಹರಳಯ್ಯನವರ ಗವಿಯವರೆಗೆ
12.10.2024
ಶರಣ ವಿಜಯೋತ್ಸವ ಮಂಗಲ ಸಮಾರಂಭ ಮಧ್ಯಾಹ್ನ 03 ಗಂಟೆಗೆ
ಇಷ್ಟಲಿಂಗ ಪೂಜಾಯೋಗ
ಅಕ್ಟೋಬರ್ 04 ರಿಂದ 9ರವರೆಗೆ ಬೆಳಿಗ್ಗೆ 07ರಿಂದ 8.30 ರವರೆಗೆ, ನಂತರ ಪ್ರಸಾದ.
ವಿಶೇಷ ಸೂಚನೆ: 04 ಮತ್ತು 05ರಂದು 06 ವರ್ಷದಿಂದ 18 ವರ್ಷದ ಮಕ್ಕಳಿಗೆ, 06ಮತ್ತು 07ರಂದು 18 ವರ್ಷ ಮೇಲ್ಪಟ್ಟವರಿಗಾಗಿ, ದಿನಾಂಕ 08 ಮತ್ತು 09ರಂದು ಶರಣೆಯರಿಗಾಗಿ ಇಷ್ಟಲಿಂಗ ಪೂಜಾಯೋಗ ಇರುವುದು.
