ಫೆಬ್ರವರಿ 21ರಿಂದ ಸಮತಾ ಸಮಾವೇಶ, ಸಂಸತ್ತು ಕಾರ್ಯಕ್ರಮ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಕಲ್ಯಾಣ

ನಗರದ ನೂತನ ಅನುಭವ ಮಂಟಪ ಸಮೀಪದ ಬಸವ ಮಹಾಮನೆ ಸಂಸ್ಥೆಯಿಂದ ಫೆಬ್ರುವರಿ 21, 22 ಮತ್ತು 23ರಂದು ಸಮತಾ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದು ಮಹಾಮನೆ ಸಂಸ್ಥೆ ಅಧ್ಯಕ್ಷ ಬೆಲ್ದಾಳ ಸಿದ್ದರಾಮ ಶರಣರು ತಿಳಿಸಿದ್ದಾರೆ.

ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಅವರು, ಕೆಲ ವರ್ಷಗಳಿಂದ ಅನುಭವ ಮಂಟಪ ಸಂಸತ್ತು ಕಾರ್ಯಕ್ರಮ ಸಹ ಹಮ್ಮಿಕೊಳ್ಳಲಾಗುತ್ತಿದೆ. ಈ ಸಲ ಸಮಾವೇಶದ ಜೊತೆಯಲ್ಲಿ 7ನೇ ಸಂಸತ್ತು ಕಾರ್ಯಕ್ರಮವಿರುತ್ತದೆ.

ವಿವಿಧ ಗೋಷ್ಠಿಗಳು ಜರುಗಲಿವೆ. ಮಠಾಧೀಶರು, ಸಾಹಿತಿ, ಚಿಂತಕರು, ರಾಜಕೀಯ ಮುಖಂಡರು, ಗಣ್ಯರು ಪಾಲ್ಗೊಳ್ಳುವರು. ಈ ಬಗ್ಗೆ ಈಗಾಗಲೇ ಪುರ್ವಸಿದ್ಧತಾ ಸಭೆ ಹಮ್ಮಿಕೊಂಡು ಸಕಲ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

ಸಮಾಜ ಮತ್ತು ಜೀವನದಲ್ಲಿ ಅಶಾಂತಿಯಿದೆ. ಜಾತಿ ತಾರತಮ್ಯವಿದೆ. ಆದ್ದರಿಂದ ಬಸವಾದಿ ಶರಣರ ತತ್ವವನ್ನು ಸಾರಿ ಸಮತೆಯೆಡೆಗೆ ಕೊಂಡೊಯ್ಯುವ ಕಾರ್ಯಕ್ರಮದ ಅಗತ್ಯವಿದೆ. ಮೂರು ದಿನಗಳ ಈ ಮಹತ್ವದ ಸಮಾರಂಭದಲ್ಲಿ ಹೆಚ್ಚಿನವರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

Share This Article
Leave a comment

Leave a Reply

Your email address will not be published. Required fields are marked *