ನಂಜನಗೂಡು:
ಬಸವಾದಿ ಶರಣರ ಸಂದೇಶಗಳು ಮತ್ತು ಅವರ ವಚನಗಳ ಸಾರವನ್ನು ವಿವಿಧ ಪ್ರವಚನಕಾರರು, ಅನುಭಾವಿಗಳ ಮೂಲಕ ತಿಳಿಸುವ ‘ಬಸವ ಮಾಸ’ ಪ್ರವಚನ ಮಾಲಿಕೆ ಶನಿವಾರ ಚಾಲನೆಗೊಂಡಿತು.
ಆರಂಭದಲ್ಲಿ ಷಟ್ಸ್ಥಲ ಧ್ವಜಾರೋಹಣ, ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಬಸವ ಮಾಸ ಸಮಿತಿ ವತಿಯಿಂದ ನಡೆಯುತ್ತಿರುವ ಕಾರ್ಯಕ್ರಮದ ಮೊದಲ ದಿನ ವಿಜಯಪುರ ಜಿಲ್ಲೆಯ ಅಕ್ಕನಾಗಮ್ಮ ಮಹಾಮನೆ ಮಠದ ಪೂಜ್ಯ ಚಂದ್ರಕಲಾ ಮಾತಾಜಿ ಅವರು ಪ್ರವಚನ ನೀಡಿದರು.

ಪ್ರವಚನ ಎಂದರೇನು, ಯಾಕೆ ಬೇಕೆಂಬ ಕುರಿತು ಮನದಟ್ಟು ಮಾಡುತ್ತ, ಶರಣರ ಸಂದೇಶಗಳು ಪ್ರಸ್ತುತ ಸಮಾಜಕ್ಕೆ ಅವಶ್ಯವಾಗಿ ಬೇಕಿದೆ ಎಂದು ಭಕ್ತರಿಗೆ ಮನದಟ್ಟು ಮಾಡಿದರು.
ಆಧುನಿಕ ಜೀವನದಲ್ಲಿ ಬದುಕುತ್ತಿರುವ ನಮಗೆ ಬಸವಭಕ್ತಿ ಮುಖ್ಯವಾಗಿ ಬೇಕಿದೆ. ಶರಣರ ಸಂದೇಶಗಳು ಬದುಕಿಗೆ ಪೂರಕವಾಗಿವೆ. ಶರಣರ ವಚನಗಳನ್ನು ಅರಿತು ಅವುಗಳಂತೆ ಆಚರಣೆಗಳನ್ನು ಮಾಡಿದರೆ ಉತ್ತಮ ಬದುಕಾಗುತ್ತದೆ ಎಂದರು.

ಉತ್ತರ ಕರ್ನಾಟಕದಲ್ಲಿ ಶ್ರಾವಣ ಮಾಸ ಮತ್ತು ಬಸವ ಜಯಂತಿ ಹಬ್ಬದಲ್ಲಿ ಪ್ರವಚನ ಏರ್ಪಡಿಸುತ್ತೇವೆ. ಆದರೆ ಇಲ್ಲಿ ಈ ಸಂದರ್ಭದಲ್ಲಿ ಆಯೋಜನೆ ಮಾಡಿರುವುದು ಬಹಳ ವಿಶೇಷ. ಬಸವ ಮಾಸ ಸಮಿತಿಯ ಈ ಕಾರ್ಯವನ್ನು ನೋಡಿ ಸಂತೋಷವಾಗಿದೆ, ಅವರ ಕಾರ್ಯ ಶ್ಲಾಘನೀಯ ಎಂದರು.
ಕೊನೆಗೆ ಸರಳ ಪ್ರಸಾದ ವಿತರಣೆ ಮಾಡಲಾಯಿತು. ಇಂದಿನ ದಾಸೋಹವನ್ನು ನಾಗಮ್ಮ ಮತ್ತು ಸಿ. ಪುಟ್ಟಣ್ಣ, ನಾಗಲಾಂಬಿಕ ಮತ್ತು ಪ್ರಭುಸ್ವಾಮಿ ಆಯರಹಳ್ಳಿ ಕುಟುಂಬ ವರ್ಗದವರು ನೆರವೇರಿಸಿದರು.

ಕಾರ್ಯಕ್ರಮದ ನಿರೂಪಣೆ ರಾಜೇಂದ್ರ ಪ್ರಸಾದ, ಪ್ರಾರ್ಥನೆ ಹಂಗಳಪುರ ಜ್ಯೋತಿ ಸುರೇಶ, ಪ್ರಾಸ್ತಾವಿಕ ನುಡಿ ಬಸವ ಯೋಗೇಶ, ಸ್ವಾಗತ ಕಲ್ಪುರ ಮಹೇಶ, ವಂದನಾರ್ಪಣೆಯನ್ನು ಕಣೇನೂರು ನಾಗೇಶ ಮಾಡಿದರು. ಶರಣ ಶರಣೆಯರು ಉಪಸ್ಥಿತರಿದ್ದರು.
