‘ನಿರೀಕ್ಷೆಗೆ ಮೀರಿ ಬೆಳೆಯುತ್ತಿರುವ ಬಸವ ಮೀಡಿಯಾ ಹೊಸ ದಾಖಲೆ ಸ್ಥಾಪಿಸಲಿ.’
ಬೆಂಗಳೂರು
ಶರಣ ಸಮಾಜದ ಹಿರಿಯ ಚೇತನ ಚಿಂತಕ ಗೊ. ರು. ಚನ್ನಬಸಪ್ಪ ಬಸವ ಮೀಡಿಯಾಗೆ ಒಂದು ಲಕ್ಷ ದಾಸೋಹ ನೀಡಿದ್ದಾರೆ.
ಜೊತೆಗೆ “ಬಸವ ಮೀಡಿಯಾ ಆರಂಭದಲ್ಲೇ ನಿರೀಕ್ಷೆಗೆ ಮೀರಿದ ಸಂಖ್ಯೆಯಲ್ಲಿ ವೀಕ್ಷಕರನ್ನು ಗಳಿಸಿದೆ. ಬಸವಾದಿ ಶರಣರ ವಿಚಾರಧಾರೆಯ ಪರ್ಯಾಯ ಸಂಸ್ಕೃತಿಯನ್ನು ಪುನಶ್ಚೇತನಗೊಳಿಸಲು ತನ್ನನ್ನು ಸಮರ್ಪಿಸಿಕೊಂಡಿರುವ ಬಸವ ಮೀಡಿಯಾ ಹೊಸ ದಾಖಲೆ ಸ್ಥಾಪಿಸುವಂತಾಗಲಿ,” ಎಂದು ಆಶಿಸಿ ಹರಸಿದ್ದಾರೆ.
ಆಗಸ್ಟ್ 17ರಂದು ನಡೆದ ‘ಬೆಸ್ಟ್ ಆಫ್ ಬಸವ ಮೀಡಿಯಾ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಗೊರುಚ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ಕಾರ್ಯಕ್ರಮ ನಡೆಯುತ್ತಿರುವಾಗಲೇ ವೇದಿಕೆಯಲ್ಲಿ ಪಕ್ಕ ಕುಳಿತಿದ್ಧ ಬಸವ ಮೀಡಿಯಾ ಛೇರ್ಮನ್ ಟಿ.ಆರ್. ಚಂದ್ರಶೇಖರ್ ಅವರಿಗೆ ಬಸವ ಮೀಡಿಯಾದ ಮುಂದಿನ ಬೆಳವಣಿಗೆಗೆ ಒಂದು ಲಕ್ಷ ಕೊಡುತ್ತೇನೆ ಎಂದು ಹೇಳಿದ್ದರು.

ಮೊದಲು ಕಾರ್ಯಕ್ರಮದಲ್ಲಿ ಮಾತನಾಡುವುದಿಲ್ಲ ಎಂದು ಹೇಳಿದ್ದರೂ ಗೊರುಚ ಉತ್ಸಾಹದಿಂದ ಮೈಕ್ ತೆಗೆದುಕೊಂಡು ಬಸವ ಮೀಡಿಯಾ ಮುಂದೆ ಮಾಡಬೇಕಾಗಿರುವ ಕಾರ್ಯಕ್ಕೆ ಸಂಕ್ಷಿಪ್ತವಾಗಿ ಮಾರ್ಗದರ್ಶನ ನೀಡಿದ್ದರು. “ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಬಸವ ಸಂದೇಶವನ್ನು ಲೋಕಕ್ಕೆ ಸಾರಬೇಕು,” ಎಂದು ಗೊರುಚ ಹೇಳಿದರು.
ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಬಸವ
ಸಂದೇಶವನ್ನು ಲೋಕಕ್ಕೆ ಸಾರಬೇಕು
ಮರುದಿನವೇ ಗೊರುಚ ಬಸವ ಮೀಡಿಯಾ ಟ್ರಸ್ಟೀ ಎಚ್ ಎಂ ಸೋಮಶೇಖರಪ್ಪ ಅವರಿಗೆ ಕರೆ ಮಾಡಿ ಮನೆಗೆ ಬಂದು ಚೆಕ್ ತೆಗೆದುಕೊಂಡು ಹೋಗಲು ಹೇಳಿದರು.
“ಗೊರುಚ ಅವರ ಅನುಮೋದನೆ ಬಸವ ಮೀಡಿಯಾಗೆ ಆನೆಬಲ ತಂದಿದೆ. ನಮ್ಮೆಲ್ಲರ ಜವಾಬ್ದಾರಿ ಹೆಚ್ಚಿಸುವಂತಹ ಆಶೀರ್ವಾದ ಇದು. ತಮ್ಮ ನಿವೃತ್ತಿ ವೇತನದ ಹಣದಲ್ಲಿ, ಪ್ರಶಸ್ತಿಗಳ ಜೊತೆ ಬಂದ ಹಣದಲ್ಲಿ ಗೊರುಚ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ,” ಎಂದು ಟಿ ಆರ್ ಚಂದ್ರಶೇಖರ್ ಹೇಳಿದರು.
ಬಸವ ಮೀಡಿಯಾಗೆ ಗೊರುಚ ಅವರ ಪೂರ್ಣ ಸಂದೇಶ
ಹನ್ನೆರಡನೆಯ ಶತಮಾನದಲ್ಲಿ ನಡೆದ ಲೋಕಸೋಜಿಗದ ಶರಣಾನಂದೋಲನ ಸಂದೇಶವನ್ನು ಜಾಗತಿಕಗೊಳಿಸುವ ಧ್ಯೇಯದಿಂದ ಆರಂಭವಾಗಿರುವ ಬಸವ ಮೀಡಿಯಾ ವೈಚಾರಿಕ, ಪ್ರಜ್ಞಾ ಜಾಗೃತಿಯ ಒಂದು ಹೊಸ ಪ್ರಯೋಗ.
ವಿಶೇಷವೇನೆಂದರೆ ಪ್ರಯೋಗದ ಆರಂಭದಲ್ಲೇ ಅದು ನಿರೀಕ್ಷೆಗೆ ಮೀರಿದ ಸಂಖ್ಯೆಯಲ್ಲಿ ವೀಕ್ಷಕರನ್ನು ಗಳಿಸಿರುವುದು. ನಡೆ-ನುಡಿಗಳೊಂದಾದ ಬಸವಾದಿ ಶರಣರ ವಿಚಾರಧಾರೆಯ ಪರ್ಯಾಯ ಸಂಸ್ಕೃತಿಯನ್ನು ಪುನಶ್ಚೇತನಗೊಳಿಸುವುದು ಇಂದಿನ ತುರ್ತು ಅಗತ್ಯ. ಈ ಅಗತ್ಯಕ್ಕಾಗಿಯೇ ತನ್ನನ್ನು ಸಮರ್ಪಿಸಿಕೊಂಡಿರುವ ಬಸವ ಮೀಡಿಯಾ ಪ್ರಭಾವಪೂರ್ಣ ಸಮುದಾಯ ಶಿಕ್ಷಣವಾಹಿನಿಯಾಗಿ ಹೊಸ ದಾಖಲೆ ಸ್ಥಾಪಿಸುವಂತಾಗಲಿ ಎಂದು ಆಶಿಸುತ್ತೇನೆ.
ಬಸವ ಸಂಜೆಯಲ್ಲಿ ಗೊರುಚ ಅವರ ಭಾಷಣ
ತುಂಬಾ ಸಂತೋಷದ ವಿಷಯ.
ಹಿರಿಯರಿಗೆ ಧನ್ಯವಾದಗಳು.
ಬಸವ ಬೆಳಕಿನೊಂದಿಗೆ ಬಸವ ಮೀಡಿಯಾ ಇನ್ನೂ ಎತ್ತರಕ್ಕೆ ಬೆಳೆಯಲಿ
ಬಸವ ಪರಂಪರೆಯನ್ನು ಮುನ್ನಡೆಸಲು ಹಿರಿಯರ ಸಹಕಾರ ಸ್ತುತ್ಯಾರ್ಹವಾದದ್ದು! ಶರಣು ಶರಣಾರ್ಥಿಗಳು