ಬಾಂಗ್ಲಾದೇಶದ ಹಿಂದೂಗಳ ಬಗ್ಗೆ ಮಾತನಾಡಿ – ಆರೆಸೆಸ್ ಹಿನ್ನಲೆಯ ಲಿಂಗಾಯತ ಶಿವಮೊಗ್ಗ ಶಾಸಕ ಚನ್ನಬಸಪ್ಪ
ಬೆಳಗಾವಿ
ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣನವರಿಗೆ ಅವಮಾನವಾದರೂ ಬಿಜೆಪಿ ಖಂಡಿಸುತ್ತಿಲ್ಲ ಎಂದು ಅಪಾದಿಸಿದ ಸಚಿವ ಈಶ್ವರ ಖಂಡ್ರೆ ಅವರ ಭಾಷಣ ಸೋಮವಾರ ಸದನದಲ್ಲಿ ಕೋಲಾಹಲ ಸೃಷ್ಟಿಸಿತು.
ಇದರೊಂದಿಗೆ ಬಿಜೆಪಿ ಶಾಸಕ ಬಸವನ ಗೌಡ ಯತ್ನಾಳರ ಬಸವಣ್ಣನವರು ಹೊಳೆಗೆ ಹಾರಿದರು ಎಂಬ ವಿವಾದಿತ ಹೇಳಿಕೆಯ ವಿರುದ್ಧ ಬಸವಾಭಿಮಾನಿಗಳಿಂದ ಪ್ರಕಟವಾಗುತ್ತಿರುವ ಆಕ್ರೋಶ ಸದನದಲ್ಲಿ ಮೊಳಗುವಷ್ಟು ಹಬ್ಬಿದೆ.
ಸುವರ್ಣಸೌಧದಲ್ಲಿ ಅನುಭವ ಮಂಟಪ ತೈಲ ವರ್ಣಚಿತ್ರ ಅನಾವರಣ ಕುರಿತಾದ ಚರ್ಚೆಯನ್ನು ಭಾಗಿಯಾಗಿ ಮಾತನಾಡಿದ ಖಂಡ್ರೆ ಬಸವಣ್ಣರನ್ನು ಅಪಹಾಸ್ಯ ಮಾಡುವಂತಹ ಶಕ್ತಿಗಳು ಹುಟ್ಟುಕೊಂಡಿವೆ. ಬಸವಣ್ಣನವರಿಗೆ ಅವಮಾನ ಮಾಡುವ ರೀತಿಯಲ್ಲಿ ಮಾತನಾಡುತ್ತಾರೆ ಎಂದು ಯತ್ನಾಳ್ ಹೆಸರು ಹೇಳದೆ ವಾಗ್ದಾಳಿ ನಡೆಸಿದರು.
ಈ ಬಗ್ಗೆ ಬಿಜೆಪಿ ಸದಸ್ಯರ ಮೌನ ಪ್ರಶ್ನಿಸಿದ ಅವರು, ಬಸವಣ್ಣನವರ ವಿರುದ್ಧವಾದ ಮಾತಿಗೆ ಮೌನ ಅಂದರೆ ಅದು ಸಮ್ಮತಿ ಲಕ್ಷಣ. ಇದರ ಬಗ್ಗೆ ಏಕೆ ಧ್ವನಿ ಎತ್ತುತ್ತಿಲ್ಲ, ಟೀಕೆ ಮಾಡುತ್ತಿಲ್ಲ, ಹೇಳಿಕೆ ಕೊಡುತ್ತಿಲ್ಲ. ನಿಮ್ಮಲ್ಲಿ ಮಾನವೀಯ, ನೈತಿಕ ಮೌಲ್ಯ ಇದ್ಯಾ? ಎಂದು ಪ್ರಶ್ನಿಸಿದರು. ಮೌನ ವಹಿಸುವವರು ಬಸವ ತತ್ವ ವಿರೋಧಿಗಳು, ಎಂದರು.
ಬಸವತತ್ವವಾದಿಗಳು ಹೋರಾಟ ಮಾಡುವ ಸಮಯ
ಖಂಡ್ರೆ ಅವರ ಭಾಷಣ ಸದನದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಯಿತು.
ಇಂದು ಧರ್ಮ ಧರ್ಮಗಳ ನಡುವ ಒಡೆದು ಆಳುವ ನೀತಿ ಅನುಸರಿಸಲಾಗುತ್ತಿದೆ. ಜಾತಿವಾದಿಗಳು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಪ್ರಯತ್ನ ಆಗುತ್ತಿದೆ. ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು, ಅವರನ್ನು ಮುಖ್ಯವಾಹಿನಿಯಿಂದ ಬೇರ್ಪಡಿಸುವ ಕೆಲಸ ಆಗುತ್ತಿದೆ. ಅದರ ವಿರುದ್ಧ ಬಸವತತ್ವವಾದಿಗಳು ಹೋರಾಟ ಮಾಡುವ ಸಮಯ ಬಂದಿದೆ ಎಂದು ಖಂಡ್ರೆ ಹೇಳಿದರು.
ಇದಕ್ಕೆ ಆಕ್ಷೇಪ ಎತ್ತಿ ಬಿಜೆಪಿ ಸದಸ್ಯರು ವಿರೋಧ ಮಾಡಿದರು. ಶಿವಮೊಗ್ಗ ಶಾಸಕ ಚನ್ನಬಸಪ್ಪ ಎದ್ದು ನಿಂತು ಬಾಂಗ್ಲಾದೇಶದ ಹಿಂದೂಗಳ ಬಗ್ಗೆ ಮಾತನಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಚನ್ನಬಸಪ್ಪ ಶಿವಮೊಗ್ಗದಿಂದ ಆಯ್ಕೆಯಾಗಿರುವ ಕುಂಕುಮಧಾರಿ ಲಿಂಗಾಯತ ಶಾಸಕ ಮತ್ತು ಪೂರ್ಣಪ್ರಮಾಣದ ಆರೆಸೆಸ್ ಕಾರ್ಯಕರ್ತರು.
ಇದಕ್ಕೆ ಪ್ರತಿಯಾಗಿ ಸಚಿವರು ಕುಂಬಳ ಕಾಯಿ ಕಳ್ಳ ಎಂದರೆ ನೀವು ಏಕೆ ಹೆಗಲು ಮುಟ್ಟಿ ನೋಡುತ್ತೀರಿ. ನಾನು ಯಾರ ಹೆಸರು ತೆಗೆದುಕೊಂಡಿಲ್ಲ. ನನಗೆ ಮಾತನಾಡಲು ಅವಲಾಶ ಕೊಡಿ ಎಂದರು. ಪ್ರತಿಯೊಬ್ಬರಿಗೆ ಸಾಮಾಜಿಕ ನ್ಯಾಯದ ಹಕ್ಕಿದೆ ಎಂದರು.
ಖಂಡ್ರೆಯವರಿಗಿಂತ ಮುಂಚೆಯೇ ಮತ್ತೊಬ್ಬ ರಾಜ್ಯ ಸಚಿವ ಪ್ರಿಯಾಂಕ್ ಖರ್ಗೆ ಯತ್ನಾಳ್ ಅವರು ಬಸವ ನಿಂದನೆ ಮಾಡಿದ್ದರೂ ಬಿಜೆಪಿ ಮೌನವಾಗಿದೆ ಎಂದು ಅಪಾದಿಸಿದ್ದರು.
ಬಸವಣ್ಣನವರ ತತ್ವ ಸಿದ್ಧಾಂತದೊಂದಿಗೆ ಗುರುತಿಸಿಕೊಂಡರೆ ಮನುಸ್ಮೃತಿಯಲ್ಲಿ ನಂಬಿಕೆ ಇರುವ ಆರ್‌ಎಸ್‌ಎಸ್‌ಗೆ ಸಿಟ್ಟು ಬರಬಹುದು ಎನ್ನುವ ಭಯವೇ? ಅಥವಾ ಗುರು ಬಸವಣ್ಣನವರಿಗಾದ ಅವಮಾನಕ್ಕಿಂತ ಯತ್ನಾಳ್ ಅವರ ಮೇಲಿನ ಭಯವು ಬಿಜೆಪಿಯವರನ್ನು ಹೆಚ್ಚು ಕಾಡುತ್ತಿದೆಯೇ, ಎಂದು ಪ್ರಶ್ನಿಸಿದ್ದರು.
ಖಂಡ್ರೆಯವರ ಎಲ್ಲಾ ವಿಚಾರಗಳು ಸ್ವಾಗತಸುವಂತಹದು. ಆದರೆ, ಅವರೇ ಬಸವ ವಿರೋದಿ ವೈಧಿಕ ಪಂಚಪೀಠಗಳನ್ನು ಪ್ರೋತ್ಸಾಹಿಸಿ ಲಿಂಗಾಯತ ಧರ್ಮದ ಸುಲಭ ನಡೆಗೆ ತಡೆಯೊಡ್ಡುತ್ತಿದ್ದಾರಲ್ಲ
ಲಿಂಗಾಯತ ಸಮಾಜವೇ ಸಂಶಯಾಸ್ಪದ ವ್ಯಕ್ತಿಗಳ ಸಮೂಹ. ಲಿಂಗಾಯತ ಧರ್ಮದ ಮರ್ಮವೇ ತಳಿಯದ ಪಶುಗಳಿಂದ ಯಾವುದೇ ರೀತಿಯ ನೈತಿಕತೆ ಎಂಬುದು ಆಪೆಖ್ಛಿಸಬೇಡಿ.