ಬೀದರ್:
ಬಸವ ಪಂಚಮಿ ಅಂಗವಾಗಿ ಆ. 8 ರಂದು ಜಿಲ್ಲೆಯಾದ್ಯಂತ ಅಲೆಮಾರಿ ಹಾಗೂ ಬಡ ಮಕ್ಕಳಿಗೆ ಉಚಿತ ಹಾಲು ವಿತರಿಸಲಾಗುವುದು ಎಂದು ವಿದ್ಯಾರ್ಥಿ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ರತ್ನದೀಪ ಕಸ್ತೂರೆ ಹೇಳಿದರು.
ಗುರುವಾರ ನಡೆದ ಬಸವ ಪಂಚಮಿ ಹಾಗೂ ನಮ್ಮ ನಡೆ ವಿಜ್ಞಾನದ ಕಡೆ ಜಾಗೃತಿ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.
ಜನರಲ್ಲಿ ಮೂಢನಂಬಿಕೆ ವಿರುದ್ಧ ಜಾಗೃತಿ ಮೂಡಿಸಲು ತಿಂಗಳಾಂತ್ಯದೊಳಗೆ ನಮ್ಮ ನಡೆ ವಿಜ್ಞಾನದ ಕಡೆ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಕಸ್ತೂರೆ ಹೇಳಿದರು.
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಸದಸ್ಯ ಕಲಾಲ ದೇವಿಪ್ರಸಾದ್ ಮಾತನಾಡಿ, ನಮ್ಮ ನಡೆ ವಿಜ್ಞಾನದ ಕಡೆ ಕಾರ್ಯಕ್ರಮಕ್ಕೆ ಪವಾಡ ಬಯಲು ಖ್ಯಾತಿಯ ಹುಲಿಕಲ್ ನಟರಾಜ ಹಾಗೂ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರನ್ನು ಆಹ್ವಾನಿಸಲು ಚರ್ಚಿಸಲಾಗಿದೆ ಎಂದರು.