ಪಂಚಮಸಾಲಿಗಳು ಯಾರು? 2/2
ಮಖಾರಿ ತನ್ನ ೫ನೇ ಮಗ ಮಿಂಡಗುದ್ದಲಿಸೆಟ್ಟಿಗೆ ಕೃಷಿ ಕಾಯಕ ಹಚ್ಚಿದನು. ಅವನದೇ ಪಂಚಮಸಾಲು ಅಥವಾ ಪಂಚಮಸಾಲಿ. (ಅರ್ಥ: ಸಾಲು = ಸಂಪ್ರದಾಯ, ಸೆಟ್ಟಿ = ವೃತ್ತಿ)
ಮಿಂಡಗುದ್ದಲಿಸೆಟ್ಟಿಯ ನಿಜರೂಪ ‘ಮೇ೦ಡೆಗುದ್ದಲಿಸೆಟ್ಟಿ’. ಮೇ೦ಡೆ ಎಂದರೆ ಮೇಟಿ. ಗುದ್ದಲಿ, ಮೇಟಿಗಳೇ ಇಂದಿಗೂ ಪಂಚಮಸಾಲಿಗಳ ಮುಖ್ಯ ಉಪಕರಣಗಳು.
ಇಂದು ಕಾಣುವ ಮೆಂಡೆಗಾರ, ಮೆಟಾಗೋಡ್ಲಿ ಹೆಸರಿನ ಪಂಚಮಸಾಲಿ ಕುಟುಂಬಗಳು ಮೂಲತಃ ಮಿಂಡಗುದ್ದಲಿಸೆಟ್ಟಿಗಳೇ ಆಗಿದ್ದಾರೆ. ಪಂಚಸೆಟ್ಟಿ ಸಂಪ್ರದಾಯದ ಇತರ ಕುಟುಂಬಗಳೂ ಸಿಗುತ್ತವೆ (ಉದಾ: ಚೌಸೆಟ್ಟಿ).
ಪಂಚಸೆಟ್ಟಿಗಳ ಕಥೆ ವೃತ್ತಿಯ ಆಧಾರದ ಮೇಲೆ ಪ್ರಾಚೀನ ಸಮಾಜ ಕವಲಾಗಿದ್ದು ಸೂಚಿಸುತ್ತದೆ. ಇವರಲ್ಲಿ ಐದನೇ ಗುಂಪಿನವರಾದ ಪಂಚಮಸಾಲಿಗಳು ಕೃಷಿಕರಾಗಿದ್ದರಿಂದ ದೊಡ್ಡ ಸಂಖ್ಯೆಯಲ್ಲಿ ಬೆಳೆದರು.
ಶಾಸನಗಳಲ್ಲಿ ಕಾಣುವ ‘ಪಂಚಮಠ’ ‘ಪಂಚವಣಿಜ’ ಮಠಗಳು ಪಂಚಸೆಟ್ಟಿಗಳಿಗೆ ಸೇರಿದ್ದವು. ನಂತರ ಬಂದ ಪಂಚಾಚಾರ್ಯರು ಇವುಗಳನ್ನು ವಶಪಡಿಸಿಕೊಂಡು ಪಂಚವಣ್ಣಿಗೆ ಮಠಗಳೆಂದು ಕರೆದರು.
(‘ಪಂಚಮಸಾಲಿ: ಹಾಗೆಂದರೇನು ‘ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೪.)