ಇಂದು ರಾತ್ರಿ ಬಸವ ರೇಡಿಯೋ ಚರ್ಚೆ: ವಚನ ದರ್ಶನ ಸತ್ಯ Vs ಮಿಥ್ಯ

ಬಸವ ಮೀಡಿಯಾ
ಬಸವ ಮೀಡಿಯಾ

ಮೀನಾಕ್ಷಿ ಬಾಳಿ ಮತ್ತು ಟಿ ಆರ್ ಚಂದ್ರಶೇಖರ್ ಇಂದು ರಾತ್ರಿ ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಬೆಂಗಳೂರು

ಕಲ್ಯಾಣದಲ್ಲಿ ಕ್ರಾಂತಿಯೇ ನಡೆಯಲಿಲ್ಲ, ವಚನಗಳು ವೇದಗಳ ಮುಂದುವರಿಕೆ, ಬಸವಣ್ಣ ಯಾವುದೇ ಹೊಸ ಧರ್ಮವನ್ನು ಸ್ಥಾಪಿಸಲಿಲ್ಲ ಎಂದೆಲ್ಲಾ ವಾದಿಸುವ ಸಂಘ ಪರಿವಾರದ ‘ವಚನ ದರ್ಶನ’ ಪುಸ್ತಕದ ಮೇಲೆ ಇಂದು ರಾತ್ರಿ ಬಸವ ರೇಡಿಯೋ ಆನ್ಲೈನ್ ಚರ್ಚೆ ಆಯೋಜಿಸಿದೆ.

ಈ ಪುಸ್ತಕದಲ್ಲಿನ ಹಿಂದುತ್ವ ನಿರೂಪಣೆ ಲಿಂಗಾಯತ ಧರ್ಮೀಯರಿಗೆ ಎಷ್ಟೊಂದು ಅಪಾಯಕಾರಿ ಎಂದು ಅರಿವು ಮೂಡಿಸಲು ಜಾಗತಿಕ ಮಹಾಸಭಾ ಪ್ರಕಟಿಸಿರುವ “ವಚನ ದರ್ಶನ: ಸತ್ಯ Vs ಮಿಥ್ಯ” ಪುಸ್ತಕ ಫೆಬ್ರವರಿ 27 ಬಿಡುಗಡೆಯಾಗಲಿದೆ.

  1. ವಚನಗಳು ವೇದೋಪನಿಷತ್ತುಗಳ ಮುಂದುವರಿದ ಭಾಗವೇ?
  2. ಇಂತಹ ನಿರೂಪಣೆಯ ಹಿಂದಿರುವ ಹುನ್ನಾರ ಮತ್ತು ಶಕ್ತಿಗಳು.
  3. ಇದಕ್ಕೆ ಬಸವ ಅನುಯಾಯಿಗಳ ಪ್ರತಿಕ್ರಿಯೆ ಹೇಗಿರಬೇಕು?

ಹಿಂದುತ್ವ ಶಕ್ತಿಗಳ ಈ ಹುನ್ನಾರಗಳು ಸಫಲವಾಗದಂತೆ ನೋಡಿಕೊಳ್ಳುವ ಮತ್ತು ಪ್ರಬಲವಾದ ಪ್ರತಿರೋಧ ಒಡ್ಡುವ ಯೋಜನೆಗಳನ್ನು ಹಮ್ಮಿಕೊಳ್ಳಲು ಸಹಾಯವಾಗಲು ಈ ಚರ್ಚೆಗಳು ದಿಕ್ಸೂಚಿಯಾಗಬೇಕು ಅನ್ನುವುದು ಬಸವ ರೇಡಿಯೋ ಬಳಗದ ಆಶಯ.

ಇಂದಿನ ಕಾರ್ಯಕ್ರಮದ ವಿವರ

ದಿನಾಂಕ: 26-02-2025
ಸಮಯ: ರಾತ್ರಿ 8:30-9:30

ಚರ್ಚೆಯಲ್ಲಿ ಪಾಲ್ಗೊಳ್ಳುವವರು

1) ಡಾ ಮೀನಾಕ್ಷಿ ಬಾಳಿ,
ಚಿಂತಕಿ, ಹೋರಾಟಗಾರ್ತಿ, ಕಲಬುರಗಿ

2) ಟಿ ಆರ್ ಚಂದ್ರಶೇಖರ್
ಸಂಪಾದಕ, ವಚನ ದರ್ಶನ: ಸತ್ಯ Vs ಮಿಥ್ಯ

ಪ್ರಾಸ್ತಾವಿಕ, ಸಮಾರೋಪ ನುಡಿ,
ಹೆಚ್ ಎಂ ಸೋಮಶೇಖರಪ್ಪ

ಕಾರ್ಯಕ್ರಮ ನಿರ್ವಹಣೆ:
ಕುಮಾರಣ್ಣ ಪಾಟೀಲ್

ದಯವಿಟ್ಟು ಗಮನಿಸಿ:

1) ಮೀನಾಕ್ಷಿ ಬಾಳಿ ಮತ್ತು ಟಿ ಆರ್ ಚಂದ್ರಶೇಖರ್ 20 ನಿಮಿಷ ಮಾತನಾಡಲಿದ್ದಾರೆ. (ಒಟ್ಟು ಅವಧಿ – 40 ನಿಮಿಷ)

2) ನಂತರ 15 ನಿಮಿಷ ಮುಕ್ತ ವೇದಿಕೆ (ಆಸಕ್ತರಿಗೆ ಮಾತನಾಡಲು ಅವಕಾಶ)

3) ಯಾವುದೇ ವ್ಯಕ್ತಿಯ ಅಥವಾ ಸಂಘಟನೆಯ ಟೀಕೆ, ನಿಂದನೆಗೆ ಅವಕಾಶವಿರುವುದಿಲ್ಲ.

4) ಚರ್ಚೆಯಲ್ಲಿ ಭಾಗವಹಿಸಲು ಗೂಗಲ್ ಮೀಟ್ ಲಿಂಕ್
https://meet.google.com/hop-qmqk-zza

Share This Article
Leave a comment

Leave a Reply

Your email address will not be published. Required fields are marked *