ಬೆಂಗಳೂರು :
ಬೆಂಗಳೂರಿನ ಕೇಂದ್ರ ಬಸವ ಸಮಿತಿಯ 2025-2030 ಅವಧಿಗೆ ಆಯ್ಕೆಯಾದ ಹಾಗೂ ನಾಮನಿರ್ದೇಶನಗೊಂಡ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರ ವಿವರ ಈ ಕೆಳಗಿನಂತಿದೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.
ಡಾ. ಅರವಿಂದ ಬಸಪ್ಪ ಜತ್ತಿ ( ಅಧ್ಯಕ್ಷರು), ಪ್ರಭುದೇವ ಜೆ. ಚಿಗಟೇರಿ ( ಹಿರಿಯ ಉಪಾಧ್ಯಕ್ಷರು), ಹನುಮಂತರೆಡ್ಡಿ ಮುದ್ನಾಳ ( ಉಪಾಧ್ಯಕ್ಷರು), ಮಾಜಿ ಸಚಿವೆ ರಾಣಿ ಸತೀಶ ( ಉಪಾಧ್ಯಕ್ಷರು), ಗಿರೀಶ ಎಸ್.ದಿಬ್ಬೂರ ( ಪ್ರಧಾನ ಕಾರ್ಯದರ್ಶಿಗಳು), ಎಚ್.ಆರ್. ಪ್ರಭುಪ್ರಸಾದ (ಪ್ರಧಾನ ಕಾರ್ಯದರ್ಶಿಗಳು), ಎಚ್.ಎಸ್. ದೇವಾಡಿಗ ( ಕೋಶಾಧ್ಯಕ್ಷರು), ಸುನಿಲಕುಮಾರ ರಗಟೆ (ಜಂಟಿ ಕಾರ್ಯದರ್ಶಿಗಳು), ಡಾ. ನಿರ್ಮಲಾ ಯಲಿಗಾರ (ಜಂಟಿ ಕಾರ್ಯದರ್ಶಿಗಳು)

ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಶಿವಾನುಭವ ಚರಮೂರ್ತಿ ಬೇಲಿಮಠದ ಶಿವರುದ್ರ ಮಹಾಸ್ವಾಮಿಗಳು, ಎಚ್.ಎಸ್. ಚಿಕ್ಕಬಸವಣ್ಣ, ವೀರಬಸವಂತರಾಯ, ಸಾಲಿ ಸಿದ್ದಯ್ಯಸ್ವಾಮಿ, ಪ್ರೊ.ಎ.ಎಸ್. ಚಂದ್ರಶೇಖರ, ಮಹಾದೇವ ಜತ್ತಿ, ಸಿದ್ಧರಾಮ ಜತ್ತಿ, ಲೀಲಾದೇವಿ ಆರ್. ಪ್ರಸಾದ, ಡಾ.ಡಿ.ಎನ್. ಯೋಗಿಶ್ವರಪ್ಪ, ಮಧುರಾ ಅಶೋಕಕುಮಾರ, ಕೊಂಡಜ್ಜಿ ಷಣ್ಮುಖಪ್ಪ, ಬಿ.ರಾಕೇಶ್, ಲತಾ ಪುರಾಣಿಕ, ಸಿ.ಎಮ್. ಚಂದ್ರಶೇಖರ, ಡಾ.ಚಿನ್ಮಯ ಚಿಗಟೇರಿ, ಚಂದ್ರಶೇಖರ ಅರಬೊಳ, ಮಹೇಶರೆಡ್ಡಿ ಮುದ್ನಾಳ, ಪೂರ್ಣಿಮಾ ಜೈರಾಜ್, ಜಿ.ಮಹಾದೇವ ಪ್ರಸಾದ, ಭುವನೇಶ್ವರಿ ಕಿಲಪಾಡಿ, ಕೆ.ವಿ. ನಾಗರಾಜಮೂರ್ತಿ, ಉಷಾ ಸುರೇಶ, ಮೋಹನ ಬಸನಗೌಡ ಪಾಟೀಲ, ರವೀಶ ಜಿ.ಯಾವಗಲ್, ಚಂದ್ರಶೇಖರ ಬಸಪ್ಪ ಆವಂತಿ, ಚನ್ನಬಸವ ದಾ. ಜತ್ತಿ, ವಿಲಾಸವತಿ ಖೂಬಾ, ಜೆ.ಎಸ್. ವಿರೂಪಾಕ್ಷಯ್ಯ.
ಇವರೆಲ್ಲರಿಗೂ ಶಿವಾನುಭವ ಚರಮೂರ್ತಿ ಬೇಲಿಮಠದ ಶಿವರುದ್ರ ಮಾಹಾಸ್ವಾಮಿಗಳು ಬಸವ ಸಮಿತಿಯ ‘ ಸಂಗಮ’ ಸಭಾಂಗಣದಲ್ಲಿ ಪ್ರಮಾಣ ವಚನ ಬೋಧಿಸಿದರು. ಈ ಸಂದರ್ಭದಲ್ಲಿ ಮುಂದಿನ ಐದು ವರ್ಷಗಳಲ್ಲಿ ಸಮಿತಿಯಿಂದ ಹಮ್ಮಿಕೊಂಡ ಕಾರ್ಯಕ್ರಮಗಳ ಕುರಿತು ಅಧ್ಯಕ್ಷರಾದ ಡಾ. ಅರವಿಂದ ಜತ್ತಿ ಅವರು ಸಭೆಗೆ ವಿವರವಾಗಿ ವಿವರಿಸಿದರು.
ಬಸವ ಸಮಿತಿಯ ಆಡಳಿತ ಮತ್ತು ಪ್ರಕಟಣೆ ವಿಭಾಗದ ನಿರ್ದೇಶಕರಾದ ನಂಜಪ್ಪ, ಸಿಬ್ಬಂದಿಗಳಾದ ಪುಷ್ಪಾ, ಚನ್ನೆಗೌಡ, ಮಲ್ಲಯ್ಯ ಇನ್ನುಳಿದವರು ಹಾಜರಿದ್ದರು.
