ಚಿಂಚೋಳಿ ಬಸವ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷರಾಗಿ ಎಂಪಳ್ಳಿ ವೀರೇಶ ಆಯ್ಕೆ

ಬಸವ ಮೀಡಿಯಾ
ಬಸವ ಮೀಡಿಯಾ

ಚಿಂಚೋಳಿ:

ಪಟ್ಟಣದ ಮಹಾಂತೇಶ್ವರ ಮಠದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಬಸವ ಅಭಿಮಾನಿಗಳ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ತಾಲೂಕು ಮಟ್ಟದ 893ನೇ ಬಸವ ಜಯಂತ್ಯೋತ್ಸವ ಸಮಿತಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಯುವ ಘಟಕದ ತಾಲೂಕು ಅಧ್ಯಕ್ಷ ವೀರೇಶ ಎಂಪಳ್ಳಿ ಅವಿರೋಧವಾಗಿ ಆಯ್ಕೆಯಾದರು.

ಗೌರವಾಧ್ಯಕ್ಷರಾಗಿ ಚಿತ್ರಶೇಖರ ಪಾಟೀಲ ದೇಗಲಮಡಿ ಅವರನ್ನು ನೇಮಕ ಮಾಡಲಾಗಿದೆ ಎಂದು ಮಹಾಸಭಾದ ತಾಲೂಕು ಅಧ್ಯಕ್ಷ ಶರಣಪ್ಪ ಪಾಟೀಲ ತಿಳಿಸಿದ್ದಾರೆ.

ಸಭೆಯಲ್ಲಿ ಮಾತನಾಡಿದ ಶರಣಪ್ಪ ಪಾಟೀಲ, ವಿಶ್ವಗುರು ಬಸವಣ್ಣನವರ ತತ್ವದರ್ಶನಗಳನ್ನು ಮನೆ- ಮನಗಳಿಗೆ ತಲುಪಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈ ಬಾರಿ ಜಯಂತ್ಯೋತ್ಸವವನ್ನು ಅತ್ಯಂತ ಯಶಸ್ವಿಯಾಗಿ ಆಚರಿಸಲು ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಮಲ್ಲಿಕಾರ್ಜುನ ಪಾಲಾಮೂರ, ಜಗನ್ನಾಥ ಇದಲಾಯಿ, ಸುಭಾಷ ಸೀಳಿನ್, ನಾಗೇಶ ಮಲಕೂಡ, ಸಂತೋಷ ಕಡಗದ, ಸಂಗಯ್ಯ ಸ್ವಾಮಿ, ಶಂಕರ ಶಿವಪುರಿ, ಆನಂದ ಹಿತ್ತಲ, ಸುಭಾಷ ಪಾಟೀಲ, ನೀಲಕಂಠ ಸೀಳಿನ್, ದಿಲೀಪ ಪಾಟೀಲ, ರಾಜಶೇಖರ ಹಿತ್ತಲ, ವಿಜಯಕುಮಾರ್ ರೊಟ್ಟಿ, ಶಿವರಾಜ ಪಾಟೀಲ ಇನಾಪುರ, ನಂದಿಕುಮಾರ ಪಾಟೀಲ, ಸುರೇಶ ದೇಶಪಾಂಡೆ ಹಾಗೂ ಬಸವಾಭಿಮಾನಿಗಳು ಹಾಜರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *