ಬಸವಶಕ್ತಿ: ಲಿಂಗಾಯತರು ಕುರಿಗಳಂತೆ ಮತ ಹಾಕುವುದು ನಿಲ್ಲಿಸಲಿ

ರವೀಂದ್ರ ಕೋಳಕೂರ
ರವೀಂದ್ರ ಕೋಳಕೂರ

. ಹಿಂದುತ್ವವಾದಿಗಳು ನಮ್ಮ ಅಸ್ತಿತ್ವವನ್ನೇ ಅಳಿಸ ಹೊರಟಿದ್ದಾರೆ.

ಬಸವ ಕಲ್ಯಾಣ

ಲಿಂಗಾಯತ ಧರ್ಮಕ್ಕೆ ಬಹಳ ರಾಜಕೀಯ ವಿರೋಧವಿದೆ. ಹಿಂದುತ್ವವಾದಿಗಳು ನಮ್ಮ ಅಸ್ತಿತ್ವವನ್ನೇ ಅಳಿಸ ಹೊರಟಿದ್ದಾರೆ. ಕೆಲವು ದಲಿತ ಸಮುದಾಯಗಳನ್ನು ತಮ್ಮ ಬಲೆಯಲ್ಲಿ ಹಾಕಿಕೊಂಡಂತೆ ಇವರು ಲಿಂಗಾಯತರನ್ನೂ ವಶಕ್ಕೆ ತೆಗೆದುಕೊಳ್ಳಲು ಹೊರಟಿದ್ದಾರೆ.

ಈ ಕೆಲಸಕ್ಕೆ ಲಿಂಗಾಯತ ರಾಜಕಾರಣಿಗಳೇ ಬಳಕೆಯಾಗುತ್ತಿರುವುದು ವಿಪರ್ಯಾಸ.

ಬಸವ ಕಲ್ಯಾಣದ ಶಾಸಕ ಶರಣು ಸಲಗಾರ ಗೆಲ್ಲುವುದು ಲಿಂಗಾಯತ ಮತಗಳಿಂದಲೇ. ಆದರೆ ಅವರು ಯಾವಾಗಲು ಬಸವ ವಿರೋಧಿ ಚಟುವಟಿಕೆಗಳಲ್ಲಿಯೇ ಕಾಣಿಸಿಕೊಳ್ಳುತ್ತಾರೆ. ಇದಕ್ಕೆ ಮುಖ್ಯ ಕಾರಣ ಲಿಂಗಾಯತರು ಇವರನ್ನೆಲ್ಲಾ ಪ್ರಶ್ನಿಸದೆ ಕುರಿಗಳಂತೆ ಮತ ಹಾಕುತ್ತಿರುವುದು.

ಬಸವ ಕಲ್ಯಾಣಕ್ಕೆ ರಂಭಾಪುರಿ ಸ್ವಾಮೀಜಿ ಬರಲು ಹೆದರುತ್ತಿದ್ದರು. ಹೋದ ವರ್ಷ ಅವರನ್ನು ಇಲ್ಲಿಗೆ ಕರೆಸಿ ಅಡ್ಡಪಲ್ಲಕ್ಕಿ ಮಾಡಿಸಿದ್ದು ಇದೇ ಶಾಸಕ.

ನಾಲೈದು ಸಾವಿರ ಮತಗಳಿರೋ ಸಣ್ಣ ಸಣ್ಣ ಸಮುದಾಯಗಳನ್ನು ಇವರು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಅವರ ಭಾವನೆಗೆ ಧಕ್ಕೆ ಬರದಂತೆ ಎಚ್ಚರಿಕೆಯಿಂದ ಇರುತ್ತಾರೆ. ಯಾಕಂದರೆ ಅವರ ಮತ ಬಿದ್ದೇ ಬೀಳುತ್ತದೆ ಎಂಬ ಗ್ಯಾರಂಟಿಯಿಲ್ಲ. ಯಾವಾಗ ಬೇಕಾದರೂ ಅದು ಕೈ ತಪ್ಪಿಹೋಗಬಹುದು.

ಆದರೆ ಬಸವ ಕಲ್ಯಾಣದಲ್ಲಿ 60,000 ಲಿಂಗಾಯತ ಮತಗಳಿವೆ. ಆದರೆ ಈ ಮತಗಳೆಲ್ಲಾ ಸಾರಾಸಗಟಾಗಿ ಬೀಳುತ್ತದೆ ಎಂಬ ವಿಶ್ವಾಸವಿದೆ. ಅದಕ್ಕೆ ಈ ಅಸಡ್ಡೆ.

ಇಂತಹ ರಾಜಕಾರಣಿಗಳನ್ನು ದಾರಿಗೆ ತರಬೇಕಾದರೆ ಬಸವ ಶಕ್ತಿ ಶಿಬಿರ, ಸಮಾವೇಶಗಳ ಮೂಲಕ ಸಮಾಜದಲ್ಲಿ, ಬಸವ ಸಂಘಟನೆಗಳಲ್ಲಿ ರಾಜಕೀಯ ಪ್ರಜ್ಞೆ ಮೂಡಿಸುವ ಕೆಲಸವಾಗಬೇಕು. ಮುಖ್ಯವಾಗಿ ಅಸಡ್ಡೆಯಿಂದ ವರ್ತಿಸುವ ರಾಜಕಾರಣಿಗಳಿಗೆ ಚುನಾವಣೆಯಲ್ಲಿ ಇದೇ ಕಾರಣಕ್ಕೆ ಕೆಲವು ಮತಗಳು ಕೈ ತಪ್ಪಿ ಹೋಗಬಹುದೆಂಬ ಭಯ ಹುಟ್ಟಿಸಬೇಕು.

ಒಂದು ಕ್ಷೇತ್ರದಲ್ಲಿ ಇರುವ ಎಲ್ಲಾ ಮತಗಳನ್ನು ತಿರುಗಿಸುವ ಅಗತ್ಯವಿಲ್ಲ. ಶೇಕಡಾ 5ರಷ್ಟು ಅಥವಾ 10ರಷ್ಟು ಮತಗಳನ್ನು ಲಿಂಗಾಯತ ಧರ್ಮದ ಪರವಾಗಿ ಕ್ರೋಡೀಕರಿಸಿದರೆ ಸಾಕು. ಸರಿಯಾದ ಸಂದೇಶ ಹೋಗುತ್ತದೆ. ರಾಜಕಾರಣಿಗಳಿಗೆ ಅರ್ಥವಾಗುವ ಭಾಷೆ ಇದೊಂದೇ.

ಇದಕ್ಕೆ ಸರಿಯಾದ ತಿಳುವಳಿಕೆ ನೀಡಿ ಪರಿಣಾಮಕಾರಿಯಾಗಿ ಬೂತ್ ಮಟ್ಟದಲ್ಲಿ ಕೆಲಸ ಮಾಡುವ ತರಬೇತಿಯನ್ನು ಬಸವ ಸಂಘಟನೆಗಳಿಗೆ ನೀಡಬೇಕು.

ಬಸವ ಶಕ್ತಿ ಶಿಬಿರ ಸಮಾವೇಶಗಳನ್ನು ಜಿಲ್ಲಾ, ತಾಲೂಕು ಮಟ್ಟದಲ್ಲಿ ಆಯೋಜಿಸಬೇಕು. ಇವೆಲ್ಲಾ ಸುಮ್ಮನೆ ಜನ ಬಂದು, ಭಾಷಣ ಕೇಳಿ ಹೋಗುವ ಜಾತ್ರೆಯಾಗಬಾರದು. ಇವುಗಳ ಮೂಲಕ ರಾಜಕೀಯವಾಗಿ, ಚುನಾವಣೆಯ ಸಮಯದಲ್ಲಿ ಸಕ್ರಿಯವಾಗಿ ಕೆಲಸ ಮಾಡುವ ಕೇಡರ್ ಅಥವಾ ಬದ್ದ ಗುಂಪುಗಳನ್ನು ರಚಿಸಬೇಕು ತಯಾರಾಗಬೇಕು.

ಇಂದು ಲಿಂಗಾಯತ ಸಮಾಜದಲ್ಲಿ ಜಾಗೃತಿ ಮೂಡುತ್ತಿದೆ. 2017-18ರ ರ್ಯಾಲಿಗಳಲ್ಲಿ ಎಲ್ಲಾ ರೀತಿಯ ಜನ, ಸ್ವಾಮೀಜಿಗಳು ಸೇರಿದ್ದರು. ವೈದಿಕತೆ ಇರುವ ಮಠಾಧೀಶರೂ ಭಾಗವಹಿಸಿದ್ದರು.

ಆದರೆ ಬಸವ ಸಂಸ್ಕೃತಿ ಅಭಿಯಾನದಲ್ಲಿ ಲಿಂಗಾಯತ ಧರ್ಮಕ್ಕೆ ಬದ್ಧತೆಯಿರುವವರು ಮಾತ್ರ ಭಾಗವಹಿಸಿದರು.

ಇದೇ ರೀತಿ ಮತ್ತಷ್ಟು ಜಾಗೃತಿಯನ್ನು ಬಸವ ಶಕ್ತಿ ಶಿಬಿರ, ಸಮಾವೇಶಗಳು ಮೂಡಿಸಲಿ.



ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7eXkKdvSgzIz1asEX6uZh

Share This Article
1 Comment
  • ಹೌದು ನಿಮ್ಮ ಮಾತು ಸರಿ ಇದೆ 👍💯❤️👌 ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 80 ವರ್ಷಗಳು ಸಮೀಪಿಸುತ್ತಿದೆ ಆದರೆ ಬಡವರು ಬಡವರಾಗಿ ಶ್ರೀಮಂತರು ಶ್ರೀಮಂತರಾಗಿ ಇದ್ದಾರೆ ಕಾರಣ ಇಷ್ಟೇ ನಾವು ಮಾಡುತ್ತಿರುವ ತಪ್ಪು ಅಂದ್ರೆ ಕಾಂಗ್ರೆಸ್ ಜೆಡಿಎಸ್ ಬಿಜೆಪಿ ಗೆ ನಮ್ಮ ಅಮೂಲ್ಯವಾದ ಮತಗಳು ನಿಡಿ ಅವರಿಗೆ ಮೇರೆಸಿ ನಂತರ ಯಾಕಾದರು ಇವರಿಗೆ ಮತ ಹಾಕಿ ಗೆಲ್ಲಿಸಿದ್ದೇವೆ ಎಂದು ನಾವೆ ನೊಂದು ಮುಜುಗರಕ್ಕೆ ಒಳಗಾಗುತ್ತಿದ್ದೆವೆ ಮತ್ತು ದುಃಖವನ್ನು ತಂದುಕೊಳ್ಳುತ್ತಿದ್ದೇವೆ. ಅದು ಅಲ್ಲದೆ ನಮ್ಮ ದೇಶದ ಜನತೆ ಅಂತು ವಿಚಿತ್ರ ಇಲ್ಲಿ ಉಗಳಬಾರದು ಎಂದು ಹೇಳಿದರೆ ಅಲ್ಲಿಯೆ ಉಗುಳುತ್ತಾರೆ ತಮ್ಮ ಮಕ್ಕಳನ್ನು ಸರ್ಕಾರಿ ಶಾಲಾಗೆ ಕಾಲೇಜ್ನಲ್ಲಿ ಸೆರಿಸಿ ಎಂದು ಹೇಳಿದ್ರೆ ಅವರು ಖಾಸಗಿ ಶಾಲಾ ಕಾಲೇಜುಗಳಿಗೆ ಕಳುಹಿಸುತ್ತಾರೆ ಸರ್ಕಾರಿ ಸಿಮ್ ಕರಿದಿಸುವುದಿಲ್ಲ ಬಸಳುಸುವುದಿಲ್ಲ ಇತ್ಯಾದಿ ಚಿರಿಚಿರಿ ಭಾಷಣ ಮಾಡೋರು ಹೇಳುತ್ತಾರೆ ಬಸವಣ್ಣ ನವರು ಅಂಬೇಡ್ಕರ್ ಅವರು ಕಮ್ಯುನಿಸ್ಟ್ ಇದ್ದರು ಎಂದು ಹೇಳುತ್ತಾರೆ ಆದರೆ ಕಮ್ಯುನಿಸ್ಟ್ ಪಕ್ಷಕ್ಕೆ ಮತ ಚಲಾಯಿಸುವುದು ಇಲ್ಲ ಇತ್ಯಾದಿ. ಲಿಂಗಾಯತ ಅಷ್ಟೇ ಅಲ್ಲ ಸರ್ವ ಸಮುದಾಯದವರು ಉದ್ದಾರ ಆಗ ಬೇಕು ಅಂದರೆ ಈಬಾರಿ ನಿಜಕ್ಕೂ ತಮ್ಮ ನಿಲುವು ಬದಲಾಯಿಸಿ ಕೊಂಡರೆ ಒಳ್ಳೆಯದು ಆತ್ಮೀಯರೆ ಹಳ್ಳಿ ಇಂದಲೆ ದಿಲ್ಲಿ ನಡೆಯುವುದು ಎಂಬ ಮಾತು ಇದೆ ತುಂಬಾ ಹತ್ತಿರ ಸಮೀಪದಲ್ಲಿ ಗ್ರಾಮ ಪಂಚಾಯತ್ ಚುನಾವಣೆ ಇದೆ ವಿಚಾರ ಮಾಡಿ ಮತಚಾಲಾಯಿಸಿ ದಯವಿಟ್ಟು ಲಂಚ ಪಡೆಯಬೇಡಿ ಹೊಸ ಪಕ್ಷ ಗಳಿಗೆ ಮತಚಾಲಾಯಿಸಿ .

Leave a Reply

Your email address will not be published. Required fields are marked *