ಧರ್ಮ ಸಂಘಟನೆಗಾಗಿ ಕಾರ್ಯಕರ್ತರನ್ನು ಸಿದ್ಧಗೊಳಿಸಬೇಕು: ಡಾ. ಎಸ್.ಬಿ. ಕೋಟೂರ

ಧಾರವಾಡ

ಲಿಂಗಾಯತ ಮತಗಳನ್ನು ಬಳಸಿಕೊಂಡು ಗೆಲ್ಲುವ ಲಿಂಗಾಯತ ರಾಜಕಾರಣಿಗಳು ಲಿಂಗಾಯತರ ವಿರುದ್ಧವೇ ಕೆಲಸ ಮಾಡುತ್ತಾರೆ.

ಇಂದು ನಾಡಿನುದ್ದಕ್ಕೂ ಸಕ್ರಿಯವಾಗಿರುವ ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ ಬೆಳಸಿಕೊಂಡರೆ ಮಾತ್ರ ಲಿಂಗಾಯತ ವಿರೋಧಿ ರಾಜಕಾರಣಕ್ಕೆ ಕಡಿವಾಣ ಹಾಕಲು ಸಾಧ್ಯ.

ಈ ಸಾಧ್ಯತೆಯ ಬಗ್ಗೆ ಬಸವ ಸಂಘಟನೆಗಳಲ್ಲಿ ಜಾಗೃತಿ ಮೂಡಿಸಲು ಬಸವ ಶಕ್ತಿ ಸಮಾವೇಶ ನಡೆಸಬೇಕೆಂಬ ಸಲಹೆ ಅನೇಕ ಬಸವ ಕಾರ್ಯಕರ್ತರಿಂದ ಬಂದಿದೆ.

ಇಂದು ಬಸವ ಮೀಡಿಯಾದ ಸುಜಾತ ಶೆಟ್ಟರ್ ಅವರ ಜೊತೆ ಸಂವಾದದಲ್ಲಿ ಧಾರವಾಡ ಅನುಭವ ಮಂಟಪ ಸಂಘಟನೆಯ ಅಧ್ಯಕ್ಷ ಡಾ. ಎಸ್.ಬಿ. ಕೋಟೂರ, ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

1) ಬಸವ ಸಂಘಟನೆಗಳು ರಾಜಕೀಯ ಪ್ರಭಾವ ಬೆಳಸಿಕೊಳ್ಳಬೇಕೆ? ಯಾಕೆ?

ರಾಜಕೀಯ ವ್ಯವಸ್ಥೆ ಈಗ ಕೊಚ್ಚೆ ನೀರಿನಂತಾದಾಗಿದ್ದು, ಅದರ ಸಮೀಪ ಕೂಡಾ ಸುಳಿಯಬಾರದು ಎನ್ನುವ ಪರಿಸ್ಥಿತಿಯಿದೆ. ಎಲ್ಲರದು ಜಾತಿಯ ಲೆಕ್ಕಾಚಾರದ ಮೇಲೆ ರಾಜಕೀಯ ನಡೆದಿದೆ. ಬಸವಣ್ಣನವರು ಜಾತಿ ನಿರ್ಮೂಲನೆಗೆ ಹೋರಾಡಿದವರು.

ಲಿಂಗಾಯತರು ವಿವಿಧ ಪಕ್ಷಗಳಲ್ಲಿ ಒಳಗೊಂಡಿದ್ದಾರೆ. ಇದರಿಂದ ರಾಜಕೀಯ ಪ್ರಭಾವ ಪ್ರಜ್ಞೆ ಬೆಳೆಸಲು ಮಾಡುತ್ತಿರುವ ಪ್ರಯತ್ನಗಳಿಗೆ ಅಡಚನೆಯಾಗಬಹುದು. ಇದರಿಂದ ಆಂತರಿಕ ಕಲಹಗಳು ಹೆಚ್ಚಾಗಬಹುದು. ಯಾವ ಪಕ್ಷ ಯಾವಾಗ ಅಧಿಕಾರಕ್ಕೆ ಬರತ್ತೊ ಗೊತ್ತಾಗೊದಿಲ್ಲ. ಅದಕ್ಕೆ ರಾಜಕೀಯದಿಂದ ದೂರವಿದ್ದು ಅವರೇ ನಮ್ಮ ಕಡೆಗೆ ಬರುವಂತೆ (ಪಕ್ಷಾತೀತವಾಗಿ) ಬಸವ ಸಂಘಟನೆಗಳು ಕೆಲಸ ಮಾಡಬೇಕು.

2) ಇದಕ್ಕೆ ತರಬೇತಿಯ ಅಗತ್ಯವಿದೆಯೇ?

ಧರ್ಮ ಸಂಘಟನೆಗಾಗಿ ಕಾರ್ಯಕರ್ತರನ್ನು ಸಿದ್ಧಗೊಳಿಸಬೇಕು. ಇದಕ್ಕೆ ತರಬೇತಿಯ ಅವಶ್ಯಕತೆ ಇದೆ.

3) ಬಸವಶಕ್ತಿ ಶಿಬಿರ, ಸಮಾವೇಶಗಳ ರೂಪುರೇಷೆ ಬಗ್ಗೆ ನಿಮ್ಮ ಸಲಹೆ ಏನು?

ಯಾವುದೇ ಶಿಬಿರ, ಸಮಾವೇಶಗಳನ್ನು ಪಟ್ಟಣಗಳಲ್ಲಿ ಆಯೋಜಿಸುವ ಬದಲು, ಗ್ರಾಮೀಣ ಭಾಗದಲ್ಲಿ ಆಯೋಜಿಸಿದರೆ ಉತ್ತಮ. ಗ್ರಾಮಿಣ ಭಾಗಗಳಲ್ಲಿ ರಾಜಕೀಯ ಪ್ರಜ್ಷೆ ಬೆಳೆಸಿದರೆ ಈ ಪ್ರಯತ್ನಕ್ಕೆ ಅತ್ಯುತ್ತಮ ಬೆಂಬಲ ಸಿಗುತ್ತದೆ. ಖರ್ಚು ಕೂಡ ಉಳಿಯುತ್ತದೆ.

ಇದರ ಜೊತೆಗೆ ಮನೆ ಮನೆಗೆ ಹೋಗಿ ಲಿಂಗಪೂಜೆಯ ಮಹತ್ವ ತಿಳಿಸಿ ಲಿಂಗದೀಕ್ಷೆ ಕೊಟ್ಟರೆ ಧರ್ಮ ಜಾಗೃತಿ ಮೂಡಿಸಿದಂತಾಗುತ್ತದೆ.

ಮಕ್ಕಳಲ್ಲಿ ಮುಖ್ಯವಾಗಿ ಏಕಾಗ್ರತೆಯನ್ನು ಹೆಚ್ಚಿಸಲು ವಚನಗಳು ಬಹುದೊಡ್ಡ ಪಾತ್ರ ವಹಿಸುತ್ತವೆ. ಈ ನಿಟ್ಟಿನಲ್ಲಿ ವಚನ ತಿಳುವಳಿಕೆಯನ್ನು ನೀಡಿದರೆ ಮಕ್ಕಳ ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಇದರಿಂದ ಸ್ಪರ್ಧಾತ್ಮ ಪರೀಕ್ಷೆಗಳಿಗೆ ತಯಾರಿ ಮಾಡಿಕೊಳ್ಳಲು ಅನುಕೂಲ ಆಗಲಿದೆ.

ರೋಗಿಗಳಿಗೆ ವಚನ ಓದಲು ಹೇಳಬೇಕು, ಇದರಿಂದ ಮನಶ್ಯಾಂತಿ ದೊರೆತು ರೋಗ ಬೇಗನೆ ಗುಣಮುಖವಾಗುತ್ತದೆ ಎಂದು ತಿಳಿಸಿ ಹೇಳಿದರೆ ಅವರಿಗೆ ವಚನಗಳತ್ತ ಒಲವು ಉಂಟಾಗಲು ಸಾಧ್ಯ.

4) ನಿಮ್ಮ ಸಂಘಟನೆಯಿಂದ ಎಷ್ಟು ಜನ ಭಾಗವಹಿಸುತ್ತಿರಾ?

20–30 ಜನ ಭಾಗವಹಿಸಬಹುದು.

5) ಸಮಾವೇಶ ಸಂಘಟಿಸಲು ನೆರವಾಗಲು ಆಸಕ್ತಿಯಿದೇಯೇ?

ನನ್ನ ಸಂಪೂರ್ಣ ಬೆಂಬಲವಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ef59kmZXDgwBDbpNqmONQ3

Share This Article
Leave a comment

Leave a Reply

Your email address will not be published. Required fields are marked *