ಹೊಸಪೇಟೆ
ಲಿಂಗಾಯತ ಮತಗಳನ್ನು ಬಳಸಿಕೊಂಡು ಗೆಲ್ಲುವ ಲಿಂಗಾಯತ ರಾಜಕಾರಣಿಗಳು ಲಿಂಗಾಯತರ ವಿರುದ್ಧವೇ ಕೆಲಸ ಮಾಡುತ್ತಾರೆ.
ಇಂದು ನಾಡಿನುದ್ದಕ್ಕೂ ಸಕ್ರಿಯವಾಗಿರುವ ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ ಬೆಳಸಿಕೊಂಡರೆ ಮಾತ್ರ ಲಿಂಗಾಯತ ವಿರೋಧಿ ರಾಜಕಾರಣಕ್ಕೆ ಕಡಿವಾಣ ಹಾಕಲು ಸಾಧ್ಯ.
ಈ ಸಾಧ್ಯತೆಯ ಬಗ್ಗೆ ಬಸವ ಸಂಘಟನೆಗಳಲ್ಲಿ ಜಾಗೃತಿ ಮೂಡಿಸಲು ಬಸವ ಶಕ್ತಿ ಶಿಬಿರ, ಸಮಾವೇಶ ನಡೆಸಬೇಕೆಂಬ ಸಲಹೆ ಅನೇಕ ಬಸವ ಕಾರ್ಯಕರ್ತರಿಂದ ಬಂದಿದೆ.
ಇಂದು ಹೊಸಪೇಟೆಯ ಶರಣ ತತ್ವ ಚಿಂತಕ ಡಾ. ಟಿ. ಹೆಚ್. ಬಸವರಾಜ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
1) ಬಸವ ಸಂಘಟನೆಗಳು ರಾಜಕೀಯ ಪ್ರಭಾವ ಬೆಳಸಿಕೊಳ್ಳಬೇಕೆ? ಯಾಕೆ?
ಹೌದು ಬಸವ ಸಂಘಟನೆಗಳು ರಾಜಕೀಯ ಪ್ರಭಾವ ಬೆಳೆಸಿಕೊಳ್ಳಲೇ ಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಧರ್ಮದ ಅಸ್ಮಿತೆಯ ವಿಚಾರದಲ್ಲಿ ಸಾಮಾಜಿಕ ಮನ್ನಣೆ ಎಷ್ಟು ಮುಖ್ಯವೋ ಅಷ್ಟೇ ರಾಜಕೀಯ ಮನ್ನಣೆಯೂ ಮುಖ್ಯ.
2) ಇದಕ್ಕೆ ತರಬೇತಿಯ ಅಗತ್ಯವಿದೆಯೇ?
ಖಂಡಿತವಾಗಲೂ ಇದಕ್ಕೆ ತರಬೇತಿಯ ಅಗತ್ಯವಿದೆ ನಾವು ನಮ್ಮ ಮಾತುಗಳನ್ನ ಗಾಳಿಗೋಪುರಗಳನ್ನಾಗಿ ಮಾಡಿಕೊಳ್ಳಬಾರದು. ನಾವು ತಾತ್ವಿಕವಾಗಿ ಗಟ್ಟಿಯಾಗಿ ಧರ್ಮದ ತಳಹದಿಯನ್ನ ತಿಳಿದು ವಿಚಾರಗಳನ್ನ ಮಂಡಿಸಬೇಕು. ಆಗ ಮಾತ್ರ ಸಮಾಜ ನಮ್ಮ ಮಾತುಗಳನ್ನ ಗಂಭೀರವಾಗಿದೆ ಪರಿಗಣಿಸುತ್ತದೆ. ನಮ್ಮ ಮಾತುಗಳು ಅಂತರಂಗ ಬಹಿರಂಗ ಶುದ್ದಿಯ ಅನುಭವ ಮಂಟಪದ ಮಾತುಗಳಂತೆ ಭಾಸವಾಗಬೇಕು.
3) ಬಸವಶಕ್ತಿ ಸಮಾವೇಶದ ರೂಪುರೇಷೆ ಬಗ್ಗೆ ನಿಮ್ಮ ಸಲಹೆ ಏನು?
ಕರ್ನಾಟಕದ ಮಧ್ಯಭಾಗದಲ್ಲಿ ಅಂದರೆ ದಾವಣಗೆರೆ ಜಿಲ್ಲೆಯ ಹರಿಹರ , ಚಿತ್ರದುರ್ಗ ಜಿಲ್ಲೆಯಲ್ಲಿ ಅಥವಾ ವಿಜಯನಗರ ಜಿಲ್ಲೆಯ ಹಂಪಿಯ ಪರಿಸರದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದರೆ ಕರ್ನಾಟಕದ ಎಲ್ಲ ಜಿಲ್ಲೆಗಳಿಂದ ಕಾರ್ಯಕರ್ತರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲು ಅನುಕೂಲವಾಗಲಿದೆ.
4) ನಿಮ್ಮ ಸಂಘಟನೆಯಿಂದ ಎಷ್ಟು ಜನ ಭಾಗವಹಿಸುತ್ತಿರಾ?
ವಿಜಯನಗರ ಜಿಲ್ಲೆಯ ಎಲ್ಲಾ ಬಸವಪರ ಸಂಘಟನೆಗಳಿಂದ ಸಕ್ರಿಯವಾಗಿ ಬಸವ ತತ್ವ ಪ್ರಚಾರದಲ್ಲಿ ನಿರತರಾಗಿರುವ 20 ಜನ ಕಾರ್ಯಕರ್ತರು ಈ ಸಮಾವೇಶದಲ್ಲಿ ಪಾಲ್ಗೊಳ್ಳುತ್ತೇವೆ.
5) ಸಮಾವೇಶ ಸಂಘಟಿಸಲು ನೆರವಾಗಲು ಆಸಕ್ತಿಯಿದೇಯೇ?
ಈ ಸಮಾವೇಶ ಸಂಘಟಿಸಲು ಅಗತ್ಯವಿರುವ ತನು ಮನ ಧನದ ಸಹಕಾರ ನೀಡಲು ಸಿದ್ದರಿದ್ದೇವೆ.

Dr ಬಸವರಾಜ ಅವರ ಹೇಳಿಕೆ ನೂರಕ್ಕೆ ನೂರು ಸತ್ಯ. ಲಿಂಗಾಯತ ಮತಗಳಿಂದ ಗೆದ್ದು ಲಿಂಗಾಯತ ವಿರೋಧಿಗಳ ಬಗ್ಗೆ ಜಾಗರುಕರಾಗಿರಬೇಕು. ಇದರಲ್ಲಿ ಕಾಂಗ್ರೆಸ್ಸಿಗರ ಕೈವಾಡ ಅದರಲ್ಲೂ ಗಾಂಧಿ ಕುಟುಂಬದ ಗುಲಾಮರ ಬಗ್ಗೆ ಹೆಚ್ಚು ಜಾಗರುಕತೆಯ ಅವಶ್ಯಕತೆ ಇದೆ