“ಕ್ಷಮೆ ಕೇಳಿ ಗಾಯತ್ರಿ ಸಿದ್ದೇಶ್ವರ ದೊಡ್ಡವರಾದರು. ಬಸವ ತತ್ವವನ್ನು ಜನರಿಗೆ ತಲುಪಿಸುವಲ್ಲಿ ನಾವುಗಳು ಸಾಮೂಹಿಕವಾಗಿ ವಿಫಲರಾಗಿದ್ದೇವೆ.”
ದಾವಣಗೆರೆ
ಬಸವ ತತ್ವ ಕಾರ್ಯಕ್ರಮದಲ್ಲಿ ರಾಜಕಾರಣಿಯೊಬ್ಬರು ‘ಜೈ ಶ್ರೀ ರಾಮ್’ ಘೋಷಣೆ ಹಾಕಿ ನಂತರ ಕ್ಷಮೆ ಕೇಳಿದ ಅಪರೂಪದ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ತಮ್ಮ ತಂದೆ ತಾಯಿಗಳ ನೆನಪಿನಲ್ಲಿ ಸ್ಥಾಪಿಸಿರುವ “ಶರಣ ಸಿರಿ” ಪ್ರಶಸ್ತಿಯನ್ನು ಮಾರ್ಚ್ 6ರಂದು ಗುರುವಾರ ಕುವೆಂಪು ಭವನದಲ್ಲಿ ಚನ್ನಗಿರಿಯ ಶರಣ ಎಚ್.ಎಸ್. ಮಲ್ಲಿಕಾರ್ಜುನಪ್ಪ ಅವರಿಗೆ ಪ್ರದಾನ ಮಾಡಲಾಯಿತು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ, ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಿತು.

ಸಿದ್ಧೇಶ್ವರರ ಗೈರು ಹಾಜರಾತಿಯಲ್ಲಿ ಅವರ ಪತ್ನಿ ಮತ್ತು ಬಿಜೆಪಿ ನಾಯಕಿ ಗಾಯತ್ರಿ ಸಿದ್ದೇಶ್ವರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮೊದಲು ಮಾತನಾಡಿದ ಅವರು ತಮ್ಮ ಭಾಷಣ ಮುಗಿದ ಮೇಲೆ “ಜೈ ಶ್ರೀರಾಮ್” ಎಂದು ಕೂಗಿದರು.
ಇದು ಸಮಾರಂಭದಲ್ಲಿ ಪಾಲ್ಗೊಂಡವರ ಹುಬ್ಬೇರಿಸುವಂತೆ ಮಾಡಿತು. ಅಷ್ಟೇ ಅಲ್ಲದೇ ಹಲವರಿಂದ ತಕ್ಷಣವೇ ಆಕ್ಷೇಪ ಸಹ ವ್ಯಕ್ತವಾಯಿತು.
ಗಾಯತ್ರಿ ಅವರು ಭಾಷಣ ಮಾಡಿ ಬಂದು ಕುಳಿತ ಮೇಲೆ, ಅವರ ಪಕ್ಕದಲ್ಲೇ ಆಸೀನರಾಗಿದ್ದ ಎಚ್.ಎಸ್. ಮಲ್ಲಿಕಾರ್ಜುನಪ್ಪ ಅವರಿಗೆ ತಿಳಿಹೇಳಿದ್ದನ್ನು ಬಳಿಯೇ ಇದ್ದ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯಕರ್ತರು ಮತ್ತು ಕೆಲವು ಪತ್ರಕರ್ತರು ಕೇಳಿಸಿಕೊಂಡರು.
“ಇದು ಬಸವತತ್ವ ಸಮಾವೇಶ. ಇಂಥ ಕಾರ್ಯಕ್ರಮದಲ್ಲಿ ಜೈ ಶ್ರೀರಾಮ್ ಅಂಥ ಘೋಷಣೆಗಳನ್ನೆಲ್ಲ ಹೇಳಬಾರದು. ಶ್ರೀರಾಮ ಒಬ್ಬ ಪೌರಾಣಿಕ ಪುರುಷ, ಬಸವಣ್ಣ ಒಬ್ಬ ದಾರ್ಶನಿಕ. ಎಲ್ಲರಿಗೂ ಸಮಾನತೆ ಕೊಟ್ಟಂತಹ ಮಹಾಜಗದ್ಗುರು, ನೀವು ಏನಾದರೂ ಕಾರ್ಯಕ್ರಮದಲ್ಲಿ ಮಾತಾಡಬೇಕಾದರೆ ‘ಜೈ ಬಸವೇಶ’ ಅನ್ನಿರಿ, ‘ಶ್ರೀ ಗುರುಬಸವ ಲಿಂಗಾಯ ನಮಃ’ ಎಂದು ಹೇಳಿರಿ, ‘ಅಪ್ಪ ಬಸವಣ್ಣ’ ಅನ್ನಿರಿ. ಲಿಂಗವಂತ ಧರ್ಮದವರಾಗಿ ತಾವು ‘ಜೈ ಶ್ರೀ ರಾಮ್’ ಅನ್ನಬಾರದು,” ಎಂದು ಮಲ್ಲಿಕಾರ್ಜುನಪ್ಪ ಹೇಳಿದರು.

ಅವರ ಮಾತನ್ನು ಯಾವುದೇ ಆಕ್ಷೇಪಣೆಯಿಲ್ಲದೆ ಕೇಳಿಸಿಕೊಂಡ ಗಾಯತ್ರಿ ಅವರು ಇದೆಲ್ಲಾ ತಮಗೆ ಗೊತ್ತಿರಲಿಲ್ಲವೆಂದು ಪ್ರತಿಕ್ರಿಯೆ ನೀಡಿದರು. ತಕ್ಷಣ ಅವರು ಮತ್ತೆ ಎದ್ದು ಬಂದು, ಮೈಕ್ ಹಿಡಿದು ನನ್ನದು ತಪ್ಪಾಗಿದೆ, ಇನ್ನು ಮುಂದೆ ಇದನ್ನು ಸರಿಪಡಿಸಿಕೊಳ್ಳುವೆ ಎಂದು ಎಲ್ಲರಲ್ಲೂ ಕ್ಷಮೆ ಕೋರಿದರು.
ವೇದಿಕೆಯ ಮೇಲಿದ್ದವರೊಬ್ಬರು ಬಸವ ಮೀಡಿಯಾದ ಜೊತೆ ಮಾತನಾಡುತ್ತ, “ಕ್ಷಮೆ ಕೇಳಿ ಗಾಯತ್ರಿ ಅವರು ದೊಡ್ಡವರಾದರು. ಇದರಲ್ಲಿ ಅವರ ತಪ್ಪಿಲ್ಲ. ಬಸವ ತತ್ವವನ್ನು ಜನರಿಗೆ ತಲುಪಿಸುವಲ್ಲಿ ನಾವುಗಳು ಸಾಮೂಹಿಕವಾಗಿ ವಿಫಲರಾಗಿದ್ದೇವೆ. ಎಲ್ಲಾ ಬಸವ ಅನುಯಾಯಿಗಳು ಈ ಕೆಲಸ ಮೊದಲು ಮಾಡಬೇಕು,” ಎಂದು ಹೇಳಿದರು.
ಪ್ರಶಸ್ತಿ ಸ್ವೀಕರಿಸಿ ಎಚ್. ಎಸ್. ಮಲ್ಲಿಕಾರ್ಜುನಪ್ಪ ಮಾತನಾಡಿ ಬಸವ ಧರ್ಮ ಪಾಲನೆ ಮಾಡಲು ನಾವು ಬಸವ ಅನುಯಾಯಿಗಳಿಗೆ ಹೇಳುತ್ತೇವೆ ಹೊರತು ನಾವು ಯಾರ ಮೇಲೂ ದೌರ್ಜನ್ಯ ಮಾಡುವುದಿಲ್ಲ. ಬಸವ ಅನುಯಾಯಿಗಳನ್ನು ತಾಲಿಬಾನಿಗಳು ಎಂಬ ಪದ ಬಳಸಿ ಕರೆದ ಕನ್ನೇರಿ ಕಾಡಸಿದ್ದೇಶ್ವರ ಸ್ವಾಮಿಗಳು ತಪ್ಪು ಎಸಗಿದ್ದಾರೆ, ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಸಾಣೇಹಳ್ಳಿ ಶ್ರೀಗಳು ಗಾಯತ್ರಿ ಸಿದ್ದೇಶ್ವರ ಅವರು ಇನ್ನೂ ತಮ್ಮ ರಾಜಕೀಯ ಕಾರ್ಯಕ್ರಮ ಗುಂಗಿನಲ್ಲೇ ಇದ್ದಾರೆ ಎಂದು ಸೂಕ್ಷ್ಮವಾಗಿ ಹೇಳಿದರು.
ಇಷ್ಟಲಿಂಗ ಧಾರಣೆ, ಕಾಯಕಶೃದ್ಧೆ ಹಾಗೂ ದಾಸೋಹ ಪ್ರಜ್ಞೆಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಗಂಧ ಮತ್ತು ವಿಭೂತಿ ಶರಣ ಪರಂಪರೆಯ ಪ್ರತೀಕ, ಕುಂಕುಮಕ್ಕಿಂತ ಇವುಗಳನ್ನು ಧರಿಸುವುದು ಸೂಕ್ತ ಎಂದು ಸ್ವಾಮೀಜಿ ಮುಂದುವರೆದು ಹೇಳಿದರು.
ಶರಣ ಸಾಹಿತ್ಯ ಪರಿಷತ್ತಿನ ಸಿ ಸೋಮಶೇಖರ್, ಕೆ. ಸಿ. ಪರಮೇಶ್ವರಪ್ಪ, ಎಚ್. ಕೆ. ಲಿಂಗರಾಜು, ಬಿ.ಟಿ. ಪ್ರಕಾಶ, ಪ್ರಕಾಶ್ ಎಸ್. ಅಂಗಡಿ, ಪ್ರಮೀಳಾ ನಟರಾಜ, ಗಾಯತ್ರಿ ವಸ್ತ್ರದ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ದಾವಣಗೆರೆಯ ಡಿ ಸಿ ಎಂ ಬಡಾವಣೆಯಲ್ಲಿ ನಿರ್ಮಾಣ ಹಂತದಲ್ಲಿರುವ ಒಳಾಂಗಣ ಕ್ರೀಡಾಂಗಣ, ರಂಗ ಮಂದಿರಕ್ಕೆ
ಶ್ರೀ ಶ್ರೀ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಹೆಸರಲ್ಲಿ “ಶ್ರೀ ಪಂಡಿತಾರಾಧ್ಯ ಕ್ರೀಡಾ, ಸಾಂಸ್ಕೃತಿಕ ಸಂಕೀರ್ಣ” ಎ ನಾಮಕರಣವಾಗಲಿ ಎಂದು ಆಶಿಸೋಣ
ಕಾರ್ಯಕ್ರಮ ಪ್ರಾರಂಭ ವಾಗುವ ಮುಂಚೆ ಯೇಶ್ರೀಮತಿ ಗಾಯತ್ರಿ ಸಿದ್ದೇಶ್ವರಯವರಿಗೆ ಬಸವ ಕಾರ್ಯಕ್ರಮ ದಲ್ಲಿ ಅನುಸರಿಸುವ ಪದ್ದತಿಯನ್ನು ತಿಳಿಹೇಳಬೇಕಾಗಿತ್ತು.ಮಾನ್ಯರು ರೂಡಿಯಂತೆ ಈಗಿನ ಕಾಲದ ಬಹು ಪ್ರಸಿದ್ಧ ವಾದಜೈ ಶ್ರೀ ರಾಮ್ ಅಂತ ಘೋಷಣೆಮಾಡಿರುತ್ತಾರೆ. ಯಾವುದೇ ವಾದ ಮಾಡದೇ ತಕ್ಷಣವೇ ಕ್ಷಮೆ ಕೇಳಿರುವುದುಅವರ ದೊಡ್ಡ ಗುಣ.ಕಾರ್ಯಕ್ರಮ ದಅಯೋಜಕರು ಇನ್ನು ಮುಂದೆ ಆದರೂ ಕಾರ್ಯಕ್ರಮ ದ ಗಣ್ಯರಿಗೆ ಬಸವ ಕಾರ್ಯಕ್ರಮ ದ ಲ್ಲಿ ಅನುಸರಿಸುವ ಪದ್ದತಿಯನ್ನು ಹೇಳಿ
ಲಿಂಗಾಯತ ರಾಜಕಾರಣಿಗಳಿಗೆ, ಉದ್ಯಮಗಳಿಗೆ, ವಕೀಲರಿಗೆ, ಶಿಕ್ಷಕರಿಗೆ ಬಸವ ಪ್ರಜ್ಞೆ ಮೂಡಿಸುವ ಕಾರ್ಯ ನಡೆಯಬೇಕಿದೆ.🙏
ತಪ್ಪನ್ನು ಅರಿತು, ಸತ್ಯದ ಮಾರ್ಗವನ್ನು ಸ್ವೀಕರಿಸುವುದು ಬಸವಣ್ಣನವರ ಮಾರ್ಗ. ಗಾಯತ್ರಿ ಅಕ್ಕ ತೋರಿದ ಈ ನಿಷ್ಠಾ ಮತ್ತು ಪರಿವರ್ತನೆಯ ಹಾದಿಯನ್ನು ಎಲ್ಲರೂ ಅನುಸರಿಸಬೇಕು.
ಗಾಯತ್ರಿ ಮೆಡಮ್ ರಂಥಹ ಅನೇಕ ಲಿಂಗಾಯತ ರಾಜಕೀಯ ನಾಯಕರಿಗೆ ಲಿಂಗಾಯತ ಧಮ೯ದ ಇತಿಹಾಸದ ಬಗ್ಗೆ ಮಾಹಿತಿಯಾಗಲಿ ಅನ್ಯಧಮ೯ಗಳಿಗಿಂತ ಲಿಂಗಾಯತ ಧಮ೯ ಸೈದ್ದಾಂತಿಕ ವಿಭಿನ್ನತೆಯಬಗ್ಗೆ ತಿಳಿದಿರುವುದಿಲ್ಲಾ ,ಆ ರಿತಿಯ ತಿಳುವಳಿಕೆಗಳನ್ನು ನಮ್ಮ ಧಾಮಿ೯ಕ ಮುಖಂಡರುಗಳಾಗಲಿ ಸಂಘಟನೆಗಳಾಗಲಿ ಮಾಡಿಲ್ಲಾ.
ಇನ್ನುಮುಂದೆ ರಾಜಕೀಯ ನಾಯಕರುಗಳನ್ನು ವೇದಿಕೆಗೆ ಆಮಂತ್ರಿಸುವಾಗ ಇಂಥಹ ಸಾಮಾನ್ಯ ನಡವಳಿಕೆಗಳ ಬಗ್ಗೆ ತಿಳಿಸಲೇಬೆಕೆಂಬುದು ಕಳಕಳಿಯ ವಿನಂತಿ.
ಅವರು ರಾಜಕಾರಣಿಗಳು ಅದರಲ್ಲೂ ಬಿಜೆಪಿ ಪಕ್ಷದ ಸದಸ್ಯರು ಅವರಿಗೆ ಜೈ ಶ್ರೀ ರಾಮ ಘೋಷಣೆ ಬಿಟ್ಟು ಬೇರೆ ಗೊತ್ತಿಲ್ಲ. ಅದಕ್ಕಾಗಿ ಪಕ್ಷ ದಲ್ಲಿರುವ ಲಿಂಗಾಯತರನ್ನು ಒಂದು ಸಮ್ಮೇಳನದಲ್ಲಿ ಕರೆಸಿ ಎಲ್ಲಾ ಲಿಂಗಾಯತ ಧರ್ಮದ ಪೂಜ್ಯರು ಅವರಿಗೆ ಲಿಂಗಾಯತ ಧರ್ಮದ ಶಿಷ್ಟಾಚಾರಗಳ ಕುರಿತು ಅರಿವು ಮಾಡಿಸಬೇಕು. ಶರಣುಶರಣಾರ್ಥಿಗಳು ಪೂಜ್ಯ ಗುರುಗಳಿಗೆ.
ಕ್ಷಮೆ ಕೇಳುವಂತ ಮಹಾಪರಾದವೆನಲ್ಲ,