ಆದಿ ಕಾಡಸಿದ್ಧೇಶ್ವರರು ಬಸವೋತ್ತರ ಯುಗದಲ್ಲಿ ಬಸವತತ್ವವನ್ನು ಜನಮನವನ್ನು ತಲುಪಿಸಿದ ಚರ ಜಂಗಮರಾಗಿದ್ದರು.
ವಿಜಯಪುರ
ಹನ್ನೆರಡನೇ ಶತಮಾನಕ್ಕೆ ಮುಂಚೆ ಶೈವˌ ಜೈನˌ ಬೌದ್ದ ಮುಂತಾದ ನೆಲಮೂಲದ ಅವೈದಿಕ ಧರ್ಮಗಳನ್ನು ಸದೆಬಡಿದಿದ್ದ ಸನಾತನಿ ಆರ್ಯನ್ನರ ವಿರುದ್ಧ ಈ ನೆಲಮೂಲದ ಜಾತಿಗಳನ್ನು ಸಂಘಟಿಸಿ ಬಸವಣ್ಣನವರು ಹುಟ್ಟುಹಾಕಿದ ವಚನ ಚಳುವಳಿ ಒಂದು ಸರ್ವಾಂಗೀಣ ರಾಷ್ಟ್ರೀಯವಾದಿ ಚಳುವಳಿ.
ಕಾಗಕ್ಕ-ಗುಬ್ಬಕ್ಕಗಳ ಕಾಲ್ಪನಿಕ ಕತೆಗಳ ಆಧಾರದಲ್ಲಿ ತಮ್ಮದೊಂದು ಪ್ರಾಚೀನ ಧರ್ಮವೆಂದು ಪ್ರತಿಪಾದಿಸುವ ಸನಾತನ ಮನಸ್ಸುಗಳು ಕೇವಲ ಕೆಲವೇ ವಚನಗಳಿಂದ ಒಂದು ಸಿದ್ಧಾಂತ ಕಟ್ಟಲಾಗದು ಎಂದು ಕುಹಕವಾಡುತ್ತವೆ. ಶರಣರು ಬರೆದ ೨೨೦೦೦ ವಚನಗಳು ಮತ್ತು ಅವುಗಳೊಳಗಿನ ಅವೈದಿಕ ಧರ್ಮ ಸಿದ್ಧಾಂತಗಳು ಸನಾತನಿಗಳಿಗೆ ಒಂದು ಧರ್ಮವಾಗಿ ಕಾಣದಿರುವುದು ಅವರ ಕಾಮಾಲೆ ಕಣ್ಣಿನ ದೃಷ್ಟಿಯಿಂದ.
ಬಸವಾದಿ ಶರಣರು ಹಾಕಿಕೊಟ್ಟ ಲಿಂಗಾಯತ ಮಹಾಮಾರ್ಗದಲ್ಲಿ ನಡೆದವರಲ್ಲಿ ಶರಣ ಆದಿ ಕಾಡಸಿದ್ಧೇಶ್ವರರು ಒಬ್ಬರು.
ಇವರು ಮಹಾರಾಷ್ಟ್ರದ ಸಿದ್ಧಗಿರಿಮಠದ ಸಂಪ್ರದಾಯಕ್ಕೆ ಸೇರಿದ ಪೀಠಾಧಿಪತಿಯಾಗಿದ್ದರು. ಇವರ ಕಾಲಮಾನ ಅಂದಾಜು ೧೭೨೫ ಎಂದು ತಿಳಿದುಬರುತ್ತದೆ. ‘ಸಂಗಮೇಶ್ವರ ದೇವರ ಕರಕಮಲದಲ್ಲಿ ಉತ್ಪತ್ಯವಾದ ಶಿಶುವು ಕಾಡಸಿದ್ಧ ನಾನಯ್ಯ’ ಎಂದು ಇವರು ಹೇಳಿಕೊಂಡಿರುವುದರಿಂದ ಈ ‘ಸಂಗಮೆಶ್ವರದೇವ’ ಇವರ ಗುರುವಾಗಿರಬೇಕು ಎಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ.

ಕಾಡಸಿದ್ಧೇಶ್ವರರ ವಚನಗಳು
ಕಾಡಸಿದ್ಧೇಶ್ವರರು ಬರೆದ ಕೃತಿಯ ಹೆಸರು ‘ವೀರಶೈವ ಷಟ್ ಸ್ಥಲ’. ಇದರಲ್ಲಿ ೫೦೦ ವಚನಗಳನ್ನು ಷಟ್ ಸ್ಥಲಾನುಗುಣವಾಗಿ ವಿಂಗಡಿಸಲಾಗಿದೆ. ಇವರ ವಚನಾಂಕಿತ ‘ಕಾಡಿನೊಳಗಾದ ಶಂಕರಪ್ರಿಯ ಚೆನ್ನ ಕದಂಬಲಿಂಗ ನಿಮಾ೯ಯ ಪ್ರಭುವೆ.’ ಇವರ ಬಹುತೇಕ ವಚನಗಳು ಬೆಡಗಿನ ಪರಿಭಾಷೆಯಲ್ಲಿವೆ.
ಈ ವಚನಗಳು ಷಟಸ್ಥಲ ಸಾಧನಾ ತತ್ವ, ಲಿಂಗಾಯತ ತತ್ತ್ವಬೋಧೆಯನ್ನು ಪ್ರತಿಪಾದಿಸುತ್ತವೆ. ಈ ಕೃತಿಯ ವಿಶೇಷತೆಯೆಂದರೆ ಅಲ್ಲಲ್ಲಿ ಬೇರೆ ಬೇರೆ ಶರಣರ ಹೆಸರುಗಳಡಿಯಲ್ಲಿ ಅವರವರ ಕಾಯಕದ ಪರಿಭಾಷೆ ಬಳಸಿದ ಅನೇಕ ವಚನಗಳಿರುವುದು. ಆ ಶರಣರಲ್ಲಿ ಕೆಲವರು ೧೨ನೆಯ ಶತಮಾನಕ್ಕೆ ಸೇರಿದವರಾದರೆ, ಮತ್ತೆ ಕೆಲವರು ಅಜ್ಞಾತ ವಚನಕಾರರು. ಇವರಲ್ಲಿ ಪಿಂಜಾರ ಮಹಮದ ಖಾನಯ್ಯ, ವಲ್ಲಿ ಪೀರಣ್ಣ ಎಂಬಂಥ ಮುಸ್ಲಿಂ ಶರಣರ ಹೆಸರುಗಳೂ ಸೇರಿರುವುದು ವಿಶೇಷ. ಕೆಲವು ವಚನಗಳು ಉರ್ದು ಭಾಷೆಯಲ್ಲಿರುವುದು ಇನ್ನೂ ವಿಶೇಷ.
ಇವರಲ್ಲಿ ಪಿಂಜಾರ ಮಹಮದ ಖಾನಯ್ಯ, ವಲ್ಲಿ ಪೀರಣ್ಣ ಎಂಬಂಥ ಮುಸ್ಲಿಂ ಶರಣರ ಹೆಸರುಗಳೂ ಸೇರಿರುವುದು ವಿಶೇಷ. ಕೆಲವು ವಚನಗಳು ಉರ್ದು ಭಾಷೆಯಲ್ಲಿರುವುದು ಇನ್ನೂ ವಿಶೇಷ.
ಕಾಡಸಿದ್ಧೇಶ್ವರರ ವಚನಗಳಲ್ಲೆವೂ ಕಾಯಕ-ದಾಸೋಹ, ಗುರು-ಲಿಂಗ-ಜಂಗಮದ ನಿಷ್ಠೆಯ ಜೊತೆಗೆ ಸಮಾಜದಲ್ಲಿ ಧಾರ್ಮಿಕ ಸಾಮರಸ್ಯವನ್ನು ಬಿತ್ತುವ ಆಶಯಗಳನ್ನೇ ಹೊಂದಿವೆ.
ಜಯಪ್ಪ ದೇಸಾಯಿಯವರು ತಮ್ಮ ‘ಕುವಯಲಾನಂದ’ ಕೃತಿಯಲ್ಲಿ ಅನೇಕ ವಚನಕಾರರ ಹೆಸರು ಪ್ರಸ್ತಾಪಿಸುತ್ತ ಕಾಡಸಿದ್ದೇಶ್ವರ ಹಾಗೂ ಅವರ ವಚನಗಳ ಬಗ್ಗೆಯೂ ಟೀಕು ಬರೆದಿದ್ದಾರೆ.
ಪ್ರಭಾವಿ ಪರಂಪರೆ
ಕಾಡಸಿದ್ಧೇಶ್ವರರ ಕುರಿತು ಅನೇಕ ಜಾನಪದ ಕತೆಗಳು ಕಾಣಸಿಗುತ್ತವೆ. ಅವರು ಸಂಚರಿಸಿದ ಸ್ಥಳಗಳಲ್ಲೆಲ್ಲ ಸ್ಮಾರಕˌ ದೇಗುಲˌ ಗದ್ದುಗೆಗಳಿವೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಕಾರಭೋಸಗಾ ಗ್ರಾಮದ ಹೊರವಲಯದ ಬೆಟ್ಟದ ಮೇಲೆ ಕೂಡ ಒಂದು ಕಾಡಸಿದ್ದೇಶ್ವರ ದೇಗುಲವಿದೆ. ವರ್ಷಕ್ಕೊಮ್ಮೆ ಅಲ್ಲಿ ದೊಡ್ಡ ಜಾತ್ರೆಯಾಗುತ್ತದೆ. ಆ ಗ್ರಾಮದಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಹುಟ್ಟುವ ಕನಿಷ್ಠ ಒಬ್ಬ ಮಗನಿಗಾದರೂ ಕಾಡಸಿದ್ಧ ಎನ್ನುವ ಹೆಸರಿಡುವುದು ನಿಯಮ.
ಅದೇ ರೀತಿಯಲ್ಲಿ ಬೆಳಗಾವಿ ಜಿಲ್ಲೆಯ ಅನೇಕ ಕಡೆಗಳಲ್ಲಿ ಕಾಡಸಿದ್ಧೇಶ್ವರ ಗದ್ದುಗೆ/ದೇಗುಲಗಳಿವೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಗ್ರಾಮ ಗುಂಡೆವಾಡಿಯಲ್ಲೂ ಕೂಡ ಒಂದು ಕಾಡಸಿದ್ದೇಶ್ವರ ಗುಡಿಯಿದೆ (ಚಿತ್ರದಲ್ಲಿರುವುದು). ಈ ಗ್ರಾಮದ ಸುತ್ತಮುತ್ತಲಿನ ರೈತರು ತಾವು ಬೆಳೆದ ಬೆಳೆಯನ್ನು ಪ್ರತಿವರ್ಷ ಅದು ಏನೇ ಇರಲಿ ಮೊದಲು ಈ ದೇಗುಲಕ್ಕೆ ಸಲ್ಲಿಸುವುದು ಅವರ ನಂಬಿಕೆ. ಹೀಗೆ ಶರಣ ಕಾಡಸಿದ್ಧೇಶ್ವರರು ಈ ಭಾಗದ ಜನರನ್ನು ಪ್ರಭಾವಿಸಿದ್ದಾರೆ.
ಅಥಣಿ ತಾಲೂಕಿನ ಗುಂಡೇವಾಡಿ ಗ್ರಾಮದ ಕಾಡಸಿದ್ಧೇಶ್ವರ ದೇಗುಲದ ಪರಿಸರದಲ್ಲಿಯೆ ಒಂದು ಶೇಖ್ ಶೀಲೆಮಾನ್ ನ ಮಂದಿರವಿದೆ. ಸ್ಥಳಿಯರು ಕಾಡಸಿದ್ಧೇಶ್ವರ ಮತ್ತು ಶೀಲೆಮಾನ್ ಇಬ್ಬರು ಅಣ್ಣ ತಮ್ಮಂದಿರು ಎಂದು ಕತೆ ಹೇಳುತ್ತಾರೆ. ಪ್ರಸ್ತುತ ಕನ್ನೇರಿಯ ಕಾಡಸಿದ್ಧೇಶ್ವರರ ಸಿದ್ಧಗಿರಿ ಮಠದ ಸ್ವಾಮಿ ಇದಕ್ಕೆ ತದ್ವಿರುದ್ಧವಾಗಿ ವರ್ತಿಸುತ್ತಿರುವುದು ಸೋಜಿಗವಾಗಿದೆ.
ಕಾಡಸಿದ್ಧೇಶ್ವರರು ಬಸವೋತ್ತರ ಯುಗದಲ್ಲಿ ಬಸವತತ್ವವನ್ನ ನಾಡಿನೆಲ್ಲೆಡೆ ತಲೆಮೇಲೆ ಹೊತ್ತು ಜನಮನವನ್ನು ತಲುಪಿಸಿದ ಚರ ಜಂಗಮರಾಗಿದ್ದರು. ಇಂದಿನ ಕೊಲ್ಹಾಪುರದ ಕನ್ನೇರಿ ಮಠ ಕೂಡ ಇದೇ ಪರಂಪರೆಗೆ ಸೇರಿದ್ದು ಎನ್ನುವುದು ಗಮನಾರ್ಹ. ಈಗಿನ ಬಸವದ್ರೋಹಿ ಮಠಾಧೀಶರು ಇಂದು ಕಾಡಸಿದ್ಧೇಶ್ವರರ ಹೆಸರಿನಲ್ಲಿ ಅನ್ನ ತಿಂದುˌ ತಿಂದ ಮನೆಗೆ ದ್ರೋಹ ಬಗೆಯುವ ಮಾತನಾಡುತ್ತಿದ್ದಾರೆ.

ಸಂಘಪರಿವಾರದ ಏಜೆಂಟ್
ಹಿಂದುತ್ವವಾದಿಗಳು ಹಾಗೂ ಬ್ರಾಹ್ಮಣವಾದಿಗಳಾಗಿರುವ ಸಂಘಪರಿವಾರದವರ ಏಜಂಟಿನಂತೆ ಈಗಿನ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ನಡೆದುಕೊಳ್ಳುತ್ತಿರುವುದು ದುರಂತದ ಸಂಗತಿ.
ಬಸವ ಪರಂಪರೆಯ ವಿರಕ್ತಮಠದ ಸ್ವಾಮಿಯಾಗಿ ವಿಭೂತಿ ಮತ್ತು ರುದ್ರಾಕ್ಷಿ ಧಾರಣೆ ಮಾಡುವ ಬದಲು ಇವರು ಕುಂಕುಮ ಧರಿಸಿˌ ತುಳಸಿ ಮಾಲೆ ಹಾಕಿಕೊಂಡು ತಾವು ಅನ್ನ ತಿನ್ನುವ ಮಠದ ಪರಂಪರೆಗೆ ದ್ರೋಹ ಬಗೆಯುತ್ತಿದ್ದಾರೆ. ಇವರ ಕಾವಿ ಕೌಪೀನದೊಳಗೆ ಸಂಘದ ಕಾಕಿ ಚಡ್ಡಿ ಇರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಸಂಘದ ಪರಧರ್ಮದ್ವೇಷˌ ಸಾಮರಸ್ಯ ದ್ವೇಷವನ್ನೆ ಇವರು ಮೈತುಂಬಾ ಹೊದ್ದುಕೊಂಡಿದ್ದಾರೆ. ಅಧ್ಯಾತ್ಮˌ ಅನುಭಾವ ಏನೊಂದೂ ತಿಳಿಯದ ಈ ಸ್ವಾಮಿ ಹಿಂದುತ್ವದ ಧರ್ಮ ರಾಜಕಾರಣಕ್ಕೆ ದಾಳವಾಗಿದ್ದಾರೆ. ಇಂತವರು ಇಂದು ಇಡೀ ಮಠ ವ್ಯವಸ್ಥೆಯ ಕುರಿತು ಸಾರ್ವಜನಿಕರಲ್ಲಿ ಅಪನಂಬಿಕೆ ಮೂಡಲು ಕಾರಣವಾಗುತ್ತಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.
ವಿನಾಶೆ ಕಾಲ ವಿಪರೀತಿ ಬುದ್ದಿ ಅನ್ನುವ ಹಾಗೆ ಇದೆ ಕಣೀರಿ ಸ್ವಾಮೀಜಿ ನಡುವಳಿಕೆ
ಕಾಡಸಿದ್ದೇಶ್ವರ ಮಠದ ಐತಿಹಾಸಿಕ ವಿವರಗಳನ್ನು ಒದಗಿಸಿದ್ದಕ್ಕೆ ಧನ್ಯವಾದಗಳು. ಇವರ ಸಂದರ್ಶನ/ಚರ್ಚೆ ನೋಡಿದರೆ ಬಹುಶಃ ಒಂದು ನಿರ್ದಿಷ್ಟ ಪರಂಪರೆಗೆ ಸೇರಿದ ಮಠಾಧೀಶರಿಗೆ ಇರಬೇಕಾದ ಯಾವ ಲಕ್ಷಣಗಳೂ ಇಲ್ಲ. ಇವರಿಗೆ ಅಲ್ಪ ಸ್ವಲ್ಪ ಬಸವತತ್ವದ ಅರಿವಿದ್ದಿದ್ದರೂ ಅವರ ಬಾಯಿಯಿಂದ ಬಸವಣ್ಣನವರ ಹೆಸರಿಗೆ ಸೇರಿಸಿ ಉಪಯೋಗಿಸಿದ ಶಬ್ದ ಬರುತ್ತಿರಲಿಲ್ಲ. ಇವರು ಹೊಸದಾಗಿ ಧರ್ಮಾಂತರ/ಮತಾಂತರ ಆಗಿರುವ ಸ್ವಾಮೀಜಿ ಅಲ್ಲ. ಅದು ಹೇಗೆಂದರೆ, ಕ್ರೈಸ್ತರಲ್ಲದವರು ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿರುವವರನ್ನು ನೋಡಿದರೆ ನಿಮಗೆ ಅರ್ಥವಾಗುತ್ತೆ. ಅವರು ಮೂಲ ಕ್ರೈಸ್ತರಿಗಿಂತ ಹೆಚ್ಚಾಗಿ ಮತ್ತು ಜೋರಾಗಿ ಕ್ರೈಸ್ತ ಧರ್ಮ ಮತ್ತು ಮತಾಂತರವನ್ನು ಸಮರ್ಥಿಸಿಕೊಳ್ಳುತ್ತಾರೆ. ಇವರೆಲ್ಲಾ ಹಾಗೆಯೇ. ಇವರಿಗೆ ವೈದಿಕ ಧರ್ಮಾಚರಣೆಯ ಮೂಲ ಆಶಯಗಳು ಗೊತ್ತಿರಲಿಕ್ಕಿಲ್ಲ. ಹಾಗಿದ್ದರೆ, ಇಷ್ಟೊಂದು ದೊಡ್ಡ ಹೆಸರು ಮಾಡಿರುವ ಮತ್ತು ವೈದಿಕ ಧರ್ಮವನ್ನು ಸಮರ್ಥಿಸಿಕೊಳ್ಳುವ ಇವರನ್ನೇ ಏಕೆ ರಾಮ ಮಂದಿರದ ಉದ್ಘಾಟನೆಗೆ ಹಿಂದುತ್ವ ಶಕ್ತಿಗಳು ಉಪಯೋಗಿಸಿಕೊಳ್ಳಲಿಲ್ಲ. ಬದಲಾಗಿ, ಉಡುಪಿಯ ಜಾತಿ ವ್ಯವಸ್ಥೆಯನ್ನು ಪೋಷಿಸುವ ಮತ್ತು ಸಮರ್ಥಿಸುವ, ಹೆಸರನ್ನೇ ಕೇಳಿರದ ಪೇಜಾವರ ಮಠದ ಮಠಾಧೀಶರಿಂದ ಮಾಡಿಸಿದ್ದು ಏಕೆ? ಬಾಕಿ ಎಲ್ಲಾ ನವ ಮಾತಾಂತರಿ ಸ್ವಾಮೀಜಿಗಳನ್ನು ಗರ್ಭಗುಡಿ ಯಿಂದ ಹೊರಗಡೆ ನಿಲ್ಲಿಸಿದ್ದು ಏಕೆ. ಬಹುಶಃ ಸಂಪೂರ್ಣವಾಗಿ ವೈದಿಕ ಧರ್ಮವೂ ತಿಳಿದಿರದ ಈ ಕಡೆ ಬಸವತತ್ವ ಸಂಪೂರ್ಣ ಅರಿವೂ ಇಲ್ಲದ ಕನ್ನೇರಿ ಮಠಾಧೀಶರಿಗೆ ಇಂತಹ ಧರ್ಮ ಸೂಕ್ಷ್ಮಗಳು ಅರ್ಥವಾಗುವುದು ಕಷ್ಟ.