“ತುಮಕೂರು ತೋಂಟದ ಎಡೆಯೂರು ಸಿದ್ದಲಿಂಗಸ್ವಾಮಿಯವರ ನೆಲ. 700 ಯತಿಗಳ ಊರು. ಕರ್ನಾಟಕ ರಾಜ್ಯದಲ್ಲಿ ಬರ ಬಂದಾಗ ಹಸಿದ ಜನರಿಗೆ ಅನ್ನವನ್ನಿಕ್ಕಿದ ಸಿದ್ದಗಂಗ ಮಠ ಇಲ್ಲಿದೆ…”
ತುಮಕೂರು
ನಗರದಲ್ಲಿ ನಡೆಯುತ್ತಿರುವ ಸಿ.ಪಿ.ಐ.(ಎಂ)ನ ಸಮಾವೇಶದಲ್ಲಿ ಬಸವ ತತ್ವದ ಮುಂದಿರುವ ಸವಾಲು, ಆತಂಕಗಳ ಬಗ್ಗೆ ಪಕ್ಷದ ಅನೇಕ ಮುಖಂಡರು ಮಾತನಾಡಿದ್ದಾರೆ.
“800 ವರ್ಷಗಳ ಹಿಂದೆ ಬಸವಣ್ಣ, ಶರಣರು ಕಾಯಕವೇ ಕೈಲಾಸ ಎಂದರು. ಈ ತತ್ವವನ್ನು ನಾಶ ಮಾಡುವುದು ಆರೆಸೆಸ್ ಮತ್ತು ಬಿಜೆಪಿಗಳ ಗುರಿ,” ಎಂದು ಮಾಜಿ ಸಚಿವ, ಸಿ.ಪಿ.ಐ.(ಎಂ), ಪಾಲಿಟ್ ಬ್ಯೂರೋ ಸದಸ್ಯ ಎಂ.ಎ. ಬೇಬಿ ರವಿವಾರ ಹೇಳಿದರು.
‘ಸಮಗ್ರ, ಸಮೃದ್ಧ-ಕರ್ನಾಟಕ’ಕ್ಕಾಗಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)ದ 24ನೇ ರಾಜ್ಯ ಸಮ್ಮೇಳನದ ಬಹಿರಂಗ ಸಭೆಯನ್ನು ನಗರದಲ್ಲಿ ಉದ್ಘಾಟಿಸಿ ಮಾತನಾಡಿದರು.
ಹಿಂದೂ ರಾಷ್ಟ
ಆರೆಸ್ಸೆಸ್-ಬಿಜೆಪಿಗಳು ಸಮಾಜವನ್ನು ಮತೀಯ ನೆಲೆಗಟ್ಟಿನಲ್ಲಿ ವಿಭಜಿಸುತ್ತಿವೆ ಭಾರತವನ್ನು ಮನುವಾದಿ ಹಿಂದೂ ರಾಷ್ಟ್ರವನ್ನಾಗಿ ಮಾಡಲು ಬಯಸಿವೆ. ನರೇಂದ್ರ ಮೋದಿ, ಆರೆಸ್ಸೆಸ್ ಬಿಜೆಪಿಗಳು ಕಳೆದ ಲೋಕಸಭಾ ಚುನಾವಣೆಯಲ್ಲಿ ೪೦೦ ಸ್ಥಾನಗಳನ್ನು ಗೆದ್ದು ಭಾರತದ ಸಂವಿಧಾನವನ್ನು ಮೂಲಭೂತವಾಗಿ ಬದಲಾಯಿಸಿ ಹಿಂದೂರಾಷ್ಟವನ್ನು ಸ್ಥಾಪಿಸಲು ಬಯಸಿದ್ದರು. ಜನರು ಈ ಗುರಿಯನ್ನು ಸೋಲಿಸಿ ತೀರ್ಪು ಕೊಟ್ಟಿದ್ದಾರೆ, ಎಂದರು. ಹಿಂದೂ ರಾಷ್ಟವನ್ನು ವಿರೋದಿಸಿದವರು ಕೊಲೆ ಕೂಡ ಆಗಿದ್ದಾರೆ ಎಂದು ಡಾ ಎಂ ಎಂ ಕಲಬುರ್ಗಿ ಅವರ ಹತ್ಯೆಯನ್ನು ಸ್ಮರಿಸಿಕೊಂಡರು.

ವಚನ-ನಿಜ ದರ್ಶನ
ಸಿ.ಪಿ.ಐ.(ಎಂ) ರಾಜ್ಯ ಕಾರ್ಯದರ್ಶಿಮಂಡಳಿ ಸದಸ್ಯೆ ಕೆ. ನೀಲಾ ಅವರು ಮಾತನಾಡಿ, ಹನ್ನೆರಡನೇ ಶತಮಾನದ ಶರಣರ ಚಳುವಳಿಯ ಆಶಯವನ್ನು ನಾಶ ಮಾಡುವ ಕೆಲಸವನ್ನು ಈಗ ಆರೆಸ್ಸೆಸ್ ಬಿಜೆಪಿಗಳು ತೀವ್ರಗೊಳಿಸಿವೆ. ಆರೆಸ್ಸೆಸ್ ಬಿಜೆಪಿಯವರು ರಾಜ್ಯದಲ್ಲಿ ಅಸಮಾನತೆ, ಜಾತಿತಾರತಮ್ಯದ ವಿರುದ್ಧದ ವಚನ ಚಳುವಳಿ ನಡೆದೇ ಇಲ್ಲ ಎನ್ನುತ್ತಿದ್ದಾರೆ. ‘ವಚನ- ನಿಜ ದರ್ಶನ’ ಪುಸ್ತಕವನ್ನು ಓದಿ, ಪ್ರಸಾರ ಮಾಡುವ ಮೂಲಕ ಸತ್ಯವನ್ನು ಹೇಳುವ ಕೆಲಸ ಮಾಡೋಣ ಎಂದರು.
ತುಮಕೂರು ತೋಂಟದ ಎಡೆಯೂರು ಸಿದ್ದಲಿಂಗಸ್ವಾಮಿಯವರ ನೆಲ. 700 ಯತಿಗಳ ಊರು. ಕರ್ನಾಟಕ ರಾಜ್ಯದಲ್ಲಿ ಬರ ಬಂದಾಗ ಹಸಿದ ಜನರಿಗೆ ಅನ್ನವನ್ನಿಕ್ಕಿದ ಸಿದ್ದಗಂಗ ಮಠ ಇಲ್ಲಿದೆ, ಎಂದು ಹೇಳಿದರು. ಉತ್ತರ ಕರ್ನಾಟಕದಲ್ಲಿ ಮುಸ್ಲಿಮರು ಯಾರೂ ಇಲ್ಲದ ಊರಿನಲ್ಲೂ ಮೋಹರಂ ಆಚರಿಸುತ್ತಾರೆ. ಜನ. ಅಂತಹ ಸೌಹಾರ್ದತೆ ಇದೆ.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು. ಬಸವರಾಜ್ ಅವರು ಮಾತನಾಡಿ, ಕೋಮುವಾದಿ, ಜನ ವಿರೋಧಿ ನೀತಿಗಳ ಬಿಜೆಪಿ ಸರಕಾರವನ್ನು ಸೋಲಿಸಿ ನಾವು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವನ್ನು ಅಧಿಕಾರಕ್ಕೆ ತಂದೆವು. ಆದರೆ ಕಾಂಗ್ರೆಸ್ ಸರಕಾರ ಜನರ ನಿರೀಕ್ಷೆಯಂತೆ ಕೆಲಸ ಮಾಡದೇ ಜನವಿರೋಧಿ ದಾರಿಯಲ್ಲಿ ಹೋಗುತ್ತಿದೆ, ಎಂದರು.

ವೇದಿಕೆಯ ಮೇಲೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್. ರೇವಣ್ಣ, ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಮೀನಾಕ್ಷಿ ಸುಂದರಂ. ಕೆ.ಪ್ರಕಾಶ್, ಮುನಿವೆಂಕಟಪ್ಪ, ಗೋಪಾಲಕೃಷ್ಣ ಹರಳಹಳ್ಳಿ, ಯಾದವಶೆಟ್ಟಿ, ಕೇಂದ್ರ ಸಮಿತಿ ಸದಸ್ಯ ಕೆ.ಎನ್. ಉಮೇಶ್. ಪಕ್ಷದ ಹಿರಿಯ ನಾಯಕರಾದ ಜಿ.ಎನ್. ನಾಗರಾಜ್, ವಿಜೆಕೆ ನಾಯರ್ ಸೇರಿದಂತೆ ಅನೇಕರಿದ್ದರು.
ಡಿಸೆಂಬರ್ 29 ರಿಂದ 31 ರವರೆಗೆ ತುಮಕೂರಿನಲ್ಲಿ ನಡೆಯುತ್ತಿದ್ದು, ಈ ಸಮ್ಮೇಳನದ ಅಂಗವಾಗಿ ಬೃಹತ್ ಮೆರವಣಿಗೆಯು ಸ್ವಾತಂತ್ರ್ಯ ಚೌಕದಿಂದ ಟೌನಾ ಹಾಲ್‌ವೆರೆಗೆ ನಡೆಯಿತು. ವಿವಿಧ ಜಿಲ್ಲೆಗಳ ಪ್ರತಿನಿಧಿಗಳು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಬಸವಣ್ಣನವರ ತತ್ವಸಿದ್ದಾಂತಗಳನ್ನ ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಆದರೆ ಬಿಜೆಪಿಯು,ಆರ್ ಎಸ್ ಎಸ್ ಬಸವಣ್ಣನವರ ತತ್ವಸಿದ್ದಾಂತಗಳನ್ನ ತುಳಿಯಲು ಹಗಲು ರಾತ್ರಿ ಕುತಂತ್ರ ನಡೆಸುತ್ತಿರುವುದಂತು ಸತ್ಯ..
ಸಂಘ ಪೋಷಿತ ಬಿಜೆಪಿ ಯಲ್ಲಿಯೂ ಲಿಂಗಾಯತ ರಾಜಕಾರಣಿಗಳು ಇದ್ದಾರೆ ಅವರಲ್ಲಿ ಬಹುತೇಕರು ನಾಗಪೂರದ ಚೌಕಿದಾರರು,, ಅಲ್ಪಸ್ವಲ್ಪ ಉಳಿದವರಿಗೆ ಮಾತಾಡಿದರೆ ತನಿಖಾ ಸಂಸ್ಥೆಗಳ ಭಯ ,,ಅದರೂ ಚುನಾವಣೆ ದಂಧೆಗೆ ಬಸವಣ್ಣನವರ ಫೋಟೋ ಮರೆಯದೇ ಹಾಕಿರುತ್ತಾರೆ
ಪ್ರಭಲವಾಗಿ ಒಂದು ರಾಷ್ಟ್ರೀಯ ಪಕ್ಷ ಸಿ.ಪಿ.ಐ(ಎಮ್) ಹೀಗೆ ಹೇಳುವ ಮೂಲಕ ಲಿಂಗಾಯತ ಅನುಯಾಯಿಗಳ ಪ್ರಜ್ಞೆಯನ್ನು ಜಾಗ್ರತಗೊಳಿಸಿದೆ. ಬಿಜೆಪಿ ಆರ್ ಎಸ್ ಎಸ್ ಜೊತೆ ಸೇರಿಕೊಂಡು ದೇಶದಲ್ಲಿ ಏನೆಲ್ಲಾ ಮಾಡುತ್ತಿದೆಯೆಂದು ಜನರಿಗೆ ಅರಿವು ಮೂಡಿಸಿದ್ದೀರಿ. ಒಂದು ರೀತಿಯಲ್ಲಿ ಬಸವಣ್ಣನವರ ತೇಜೋವದೆ ಆದಂತೆಲ್ಲ ಅವರ ಮಾನವೀಯ ಧರ್ಮದ ಪರಿಕಲ್ಪನೆ ಇನ್ನೂ ಹೆಚ್ಚಾಗಿ ಜಗತ್ತಿನಲ್ಲಿ ಬೆಳೆಯುತ್ತಿದೆ ಅನಿಸುತ್ತದೆ. ಏಕೆಂದರೆ, ಬಸವ ಸಂಘಟನೆಗಳು ಕೂಡಲೆ ಜಾಗ್ರತೆಯಾಗಿ ತಾತ್ವಿಕವಾಗಿ ಬಸವಣ್ಣನವರು ಇಡೀ ಮಾನವ ಸಮಾಜಕ್ಕೆ ಯಾವ ಸಂದೇಶ ನೀಡಿದರು ಎಂದು ತಿಳಿಸಿದಾಗ ಜನಸಾಮಾನ್ಯರಿಗೆ ಬಿಜೆಪಿ ಅಪಪ್ರಚಾರಮಾಡುವ ಹಕ್ಕೀಕತ್ತು ಸುಲಭವಾಗಿ ಅರ್ಥವಾಗಿಬಿಡುತ್ತದೆ. ಆದರೆ ನಮ್ಮ ನಮ್ಮ ಲ್ಲೆ ಕಾದಾಡುವಂತೆ ನಮ್ಮ ಕೆಲ ಕಾವಿಗಳನ್ನು ಅವರು ಬುಕ್ ಮಾಡಿಕೊಂಡಿರುವ ವಿಚಾರ ಜಗಜ್ಜಾಹಿರ. ಅಂತಹ ಕಪಟ ಕಾವಿಗಳನ್ನು ಕಿವಿ ಹಿಂಡಿ ಸರಿದಾರಿಗೆ ತರುವುದು ಕೇಳದಿದ್ದರೆ ಉದಾಸೀನವಾಗಿರುವದು. ಅವರು ತಾವೇ ಬಸವಾದಿ ಶರಣರ ಅವಕ್ರಪೆಗೆ ಒಳಗಾಗಿ ಪಡಬಾಬರದ ಕಷ್ಟ ಪಡುತ್ತಾರೆ. ಶರಣು ಶರಣಾರ್ಥಿಗಳು.