ದಾವಣಗೆರೆ
ಲಿಂಗಾಯತ ಮತಗಳನ್ನು ಬಳಸಿಕೊಂಡು ಗೆಲ್ಲುವ ಲಿಂಗಾಯತ ರಾಜಕಾರಣಿಗಳು ಲಿಂಗಾಯತರ ವಿರುದ್ಧವೇ ಕೆಲಸ ಮಾಡುತ್ತಾರೆ.
ಇಂದು ನಾಡಿನುದ್ದಕ್ಕೂ ಸಕ್ರಿಯವಾಗಿರುವ ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ ಬೆಳಸಿಕೊಂಡರೆ ಮಾತ್ರ ಲಿಂಗಾಯತ ವಿರೋಧಿ ರಾಜಕಾರಣಕ್ಕೆ ಕಡಿವಾಣ ಹಾಕಲು ಸಾಧ್ಯ.
ಈ ಸಾಧ್ಯತೆಯ ಬಗ್ಗೆ ಬಸವ ಸಂಘಟನೆಗಳಲ್ಲಿ ಜಾಗೃತಿ ಮೂಡಿಸಲು ‘ಬಸವ ಶಕ್ತಿ’ ಸಮಾವೇಶ ನಡೆಸಬೇಕೆಂಬ ಸಲಹೆ ಅನೇಕ ಬಸವ ಕಾರ್ಯಕರ್ತರಿಂದ ಬಂದಿದೆ.
‘ಬಸವ ಶಕ್ತಿ’ ಸಮಾವೇಶದ ಬಗ್ಗೆ ಇಂದು ದಾವಣಗೆರೆ ಶರಣ ಸಾಹಿತ್ಯ ಪರಿಷತ್ತಿನ ವಿಶ್ವೇಶ್ವರಯ್ಯ ಬಸವಬಳ್ಳಿ ತಮ್ಮ ಅಭಿಪ್ರಾಯ ನೀಡಿದ್ದಾರೆ.
1) ಬಸವ ಸಂಘಟನೆಗಳು ರಾಜಕೀಯ ಪ್ರಭಾವ ಬೆಳೆಸಿಕೊಳ್ಳಬೇಕೇ? ಯಾಕೆ?
ಬಸವ ಸಂಘಟನೆಗಳು ರಾಜಕೀಯ ಪ್ರಭಾವ ಬೆಳೆಸಿಕೊಳ್ಳಬೇಕಾದುದು ಅತ್ಯಗತ್ಯ. ಯಾವುದೇ ಒಳ್ಳೆಯ ವಿಚಾರಗಳು ಪ್ರವರ್ಧಮಾನಕ್ಕೆ ಮಾನಕ್ಕೆ ಬರಬೇಕಾದರೆ ಒಂದು ಅಧಿಕಾರದ ಆಶ್ರಯ ಬೇಕು.
ಇಲ್ಲ ಅಂದರೆ ಸತ್ಯವನ್ನು ಅಸತ್ಯ ನುಂಗಿದಂತೆ ಈ ಬಸವ ತತ್ವದ ವಿರೋಧಿಗಳು ಶರಣರ ವಿಚಾರಗಳನ್ನು ನುಂಗಿ ನಾಶ ಪಡಿಸುತ್ತಾರೆ.
2) ಇದಕ್ಕೆ ತರಬೇತಿಯ ಅಗತ್ಯವಿದೆಯೇ?
ಖಂಡಿತಾ ತರಬೇತಿ ಬೇಕೇಬೇಕು.
ಸ್ಥಾಪಿತ ಸಿದ್ಧಾಂತದ ವಿರುದ್ಧ ಹೋರಾಟದಲ್ಲಿ ಯಶಸ್ವಿ ಆಗಬೇಕಾದರೆ ಹೋರಾಟ ಮಾಡುವವರಿಗೆ ತರಬೇತಿ ಅಗತ್ಯ ಇದೆ.
3) ಬಸವ ಶಕ್ತಿ ಸಮಾವೇಶದ ರೂಪುರೇಷೆಯ ಬಗ್ಗೆ ನಿಮ್ಮ ಸಲಹೆ.
ಬಸವ ಶಕ್ತಿ ಸಮಾವೇಶಕ್ಕೆ ಮೊದಲು ರಾಜ್ಯದ ವಿವಿಧ ವಿಭಾಗಗಳಲ್ಲಿ ಪೂರ್ವಭಾವಿ ಸಭೆ ಮಾಡಬೇಕು. ಬಸವ ಶಕ್ತಿ ಸಮಾವೇಶದ ಗುರಿ ಉದ್ದೇಶ ಜನತೆಗೆ ತಿಳಿಸಬೇಕು.
ಆ ನಂತರ ರಾಜ್ಯದ ಪ್ರಮುಖ ಕ್ಷೇತ್ರಗಳಾದ ಬಸವ ಕಲ್ಯಾಣ ಅಥವಾ ಕೂಡಲಸಂಗಮದಲ್ಲಿ, ಜಾತ್ಯಾತೀತವಾಗಿ ಪಕ್ಷಾತೀತವಾಗಿ ಒಂದು ಬೃಹತ್ ಸಮಾವೇಶ ಮಾಡಬೇಕು.
4) ನಿಮ್ಮ ಸಂಘಟನೆಯಿಂದ ಎಷ್ಟು ಜನ ಭಾಗವಹಿಸುತೀರಾ?
ನಮ್ಮ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಎಲ್ಲಾ ಪದಾಧಿಕಾರಿಗಳು ಹಾಗೂ ಬುದ್ಧ ಬಸವ ಅಂಬೇಡ್ಕರ್ ತತ್ವ ನಿಷ್ಠೆ ಇರುವವರಲ್ಲಿ ತಿಳಿಹೇಳಿ ಭಾಗವಹಿಸುವಂತೆ ಪ್ರೋತ್ಸಾಹಿಸುತ್ತೇನೆ.
5) ಸಮಾವೇಶ ಸಂಘಟಿಸಲು ನೆರವಾಗಲು ನಿಮಗೆ ಆಸಕ್ತಿಯಿದೆಯೇ?
ಸಮಾವೇಶಕ್ಕೆ ನಮ್ಮ ಕೈಯಲ್ಲಿ ಆದಂತೆ ತನು ಮನ ಧನ ಸಹಾಯ ಇದ್ದೇ ಇರುತ್ತದೆ. ಏಕೆಂದರೆ ಒಂದು ತತ್ವ ಬದ್ಧ ಜನ ತಯಾರಾದರೆ ರಾಜಕಾರಣದಲ್ಲಿ ಬದಲಾವಣೆ ಆಗುತ್ತದೆ. ರಾಜಕೀಯದಲ್ಲಿ ಬದಲಾವಣೆ ಆದರೆ ದೇಶ ಪ್ರಗತಿ ಪಥದಲ್ಲಿ ನಡೆಯಲು ಸಾಧ್ಯ.
