ದಾವಣಗೆರೆ:
Contents
ರಾಷ್ಟ್ರೀಯ ಬಸವದಳದ ಜಿಲ್ಲಾಮಟ್ಟದ ಸಮಾವೇಶ ನವೆಂಬರ್ 2, ಭಾನುವಾರ ಬೆಳಿಗ್ಗೆ 10 ಗಂಟೆಗೆ, ಸರಸ್ವತಿ ನಗರದ ಬಸವ ಮಹಾಮನೆಯಲ್ಲಿ ನಡೆಯಲಿದೆ.
ಸಾನಿಧ್ಯವನ್ನು ಕೂಡಲಸಂಗಮ ಬಸವಧರ್ಮ ಪೀಠದ ಪೀಠಾಧ್ಯಕ್ಷರಾದ ಡಾ. ಗಂಗಾ ಮಾತಾಜಿ ವಹಿಸಲಿದ್ದಾರೆ. ಸಮ್ಮುಖವನ್ನು ಪಾಂಡೋಮಟ್ಟಿಯ ಡಾ. ಗುರುಬಸವ ಸ್ವಾಮೀಜಿ, ನೇತೃತ್ವವನ್ನು ಪೂಜ್ಯ ಬಸವಯೋಗಿ ಸ್ವಾಮೀಜಿ ವಹಿಸಲಿದ್ದು, ದಾವಣಗೆರೆಯ ಸಂಸದೆ ಪ್ರಭಾ ಮಲ್ಲಿಕಾರ್ಜುನ ಸಮಾವೇಶ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ವೈ. ನರೇಶಪ್ಪ ಅವರು ವಹಿಸುವರು.

 
							 
			     
			
