ಬಸವಕಲ್ಯಾಣ
ಲಿಂಗಾಯತರು ಸುಮ್ಮನೆ ಕೈಕಟ್ಟಿ ಮೌನವಾಗಿ ಕುಳಿತರೆ ಅಲ್ಪಸಂಖ್ಯಾತರ ಪಟ್ಟಿಗೆ ಸೇರ್ಪಡೆಯಾಗುವ ಸಾಧ್ಯತೆಯಿಲ್ಲ. ಅಂತರಂಗವನ್ನು ಗಟ್ಟಿಗೊಳಿಸಿ, ಪಣ ತೊಟ್ಟು ಹೋರಾಡಿದರೆ ಮಾತ್ರ ಪ್ರತ್ಯೇಕ ಧರ್ಮದ ಸ್ಥಾನ ಸಿಗುತ್ತದೆ. ಬಸವಾದಿ ಶರಣರು ನಡೆದಾಡಿದ ಪುಣ್ಯಭೂಮಿಯಿಂದಲೇ ಮತ್ತೆ ಚಳುವಳಿ ಆರಂಭವಾದರೆ ಜಯ ಶತಸಿದ್ಧ,” ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ ಹೇಳಿದರು.
ನಗರದಲ್ಲಿ ಶನಿವಾರ ನಡೆದ ಶರಣ ಕಮ್ಮಟ ಮತ್ತು ಅನುಭವ ಮಂಟಪ ಉತ್ಸವದ `ಲಿಂಗಾಯತ ಹೋರಾಟ: ಮುಂದೇನು?’ ಗೋಷ್ಠಿಯಲ್ಲಿ ಮಾತನಾಡುತ್ತಾ ಪ್ರತ್ಯೇಕ ಧರ್ಮ ಮಾನ್ಯತೆಗೆ ಚಳುವಳಿಯನ್ನು ಮುಂದುವರೆಸದ ಲಿಂಗಾಯತರ ಬಗ್ಗೆ ವಿಷಾದ ವ್ಯಕ್ತ ಪಡಿಸಿದರು.
ಲಿಂಗಾಯತ ಧರ್ಮಕ್ಕಾಗಿ ಕರ್ನಾಟಕ, ಆಂಧ್ರ ಮತ್ತು ಮಹಾರಾಷ್ಟ್ರದ ಅನೇಕ ಕಡೆಗಳಲ್ಲಿ ಲಕ್ಷಾಂತರ ಜನರಿಂದ ರ್ಯಾಲಿಗಳನ್ನು ನಡೆಸಲಾಯಿತು. ಆದರೆ, ಅದನ್ನು ತಿರಸ್ಕರಿಸಿದಾಗ ಮಾತ್ರ ಜನರಲ್ಲಿ ಆ ಕಿಚ್ಚು ಕಾಣಲಿಲ್ಲ.
ನನ್ನ ನೇತೃತ್ವದ ಆಯೋಗ ಲಿಂಗಾಯತರಿಗೆ ಅಲ್ಪಸಂಖ್ಯಾತರ ಸ್ಥಾನ ನೀಡಲು ಶಿಫಾರಸು ಮಾಡಿತ್ತು. ಅದನ್ನು ರಾಜ್ಯ ಸರ್ಕಾರ ಒಪ್ಪಿಕೊಂಡು ಅನುಮೋದನೆಗಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತು. ಆದರೆ, ಕೇಂದ್ರದವರು ಕ್ಷುಲ್ಲಕ ಕಾರಣ ನೀಡಿ ಅದನ್ನು ತಿರಸ್ಕರಿಸಿದಾಗ ಎಲ್ಲರೂ ಸುಮ್ಮನಾದರು. ಒಬ್ಬರೂ ಹೋರಾಟಕ್ಕೆ ಮುಂದಾಗಲಿಲ್ಲ,’ ಎಂದು ಹೇಳಿದರು.
`ಧರ್ಮ ಮಾನ್ಯತೆಗೆ ಅಂತರಂಗವನ್ನು ಗಟ್ಟಿಗೊಳಿಸಿ, ಪಣ ತೊಟ್ಟು ಹೋರಾಡಬೇಕು. ಬಸವಾದಿ ಶರಣರು ನಡೆದಾಡಿದ ಪುಣ್ಯಭೂಮಿಯಿಂದಲೇ ಹೋರಾಟ ಆರಂಭವಾದರೆ ಜಯ ಶತಸಿದ್ಧ,” ಎಂದರು.
ನ್ಯಾಯಮೂರ್ತಿಗಳ ದ್ವನಿ ಲಿಂಗಾಯತರಿಗೆ ತಲುಪಲಿ. ಲಿಂಗಾಯತ ಮಠಾಧೀಶರುಗಳನ್ನು ನಂಬಿ ಕೂತರೆ ಏನೂ ಆಗುವುದಿಲ್ಲ. ಇವರೆಲ್ಲಾ ಹೆಚ್ಚಿನ ಬಾರಿ ಆಳುವ ಪಕ್ಷಗಳ ಕೈಗೊಂಬೆಗಳಾಗಿಬಿಡುತ್ತಾರೆ. ಜೊತೆಗೆ ಸಂಘ ಪರಿವಾರ ಲಿಂಗಾಯತ ಮಠಾಧೀಶರುಗಳನ್ನೇ ಹೈಜಾಕ್ ಮಾಡುತ್ತಿದ್ದಾರೆ. ಲಿಂಗಾಯತರು ಎಚ್ಚರಗೊಳ್ಳುವರೇ ?
ಕೇವಲ ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಜಪ ಮಾಡಿದರೆ ಸಾಲದು, ನ್ಯಾಯಮೂರ್ತಿಗಳು ಹೇಳಿದ ಹಾಗೆ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಿದೆ ಮಾತ್ರವಲ್ಲ ಕೇಂದ್ರ ಬಿಜೆಪಿ ಸರ್ಕಾರದ ಹುನ್ನಾರವನ್ನು ಬಯಲು ಮಾಡಬೇಕು.
Good points.
I fully agree 👍
Unless we fight unitedly we won’t achieve the goal
LINGAYAT
NOT veerashaiv
ಶ್ರೀಯುತ ನಾಗಮೋಹನ್ ದಾಸ್ ರವರ ಮಾತು ಸತ್ಯ .ಲಿಂಗಾಯತ ಎಡಬೀಡಂಗಿ ಕೆಲವು ರಾಜಕೀಯ ಧುರೀಣರು ಹಾಗೂ ಮಠಾಧೀಶರು ಸಾಹಿತಿಗಳು ಕಗ್ಗಂಟಾಗಿ ಇರುವುದು ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಹಿನ್ನೆಡೆ ಆಗುತ್ತಿದೆ ಇದನ್ನ ಅರಿತು ಎಲ್ಲರೂ ಧ್ವನಿಯಾದಾಗ ಮಾತ್ರ ಯಶಸ್ಸು ಸಿಗಲು ಸಾಧ್ಯ.
ಲಿಂಗಾಯತ ಧರ್ಮಕ್ಕೆ ಧ್ವನಿಯಾಗಿ ಜಾಗತಿಕ ಲಿಂಗಾಯತ ಮಹಾಸಭಾ ಪಣತೊಟ್ಟು ನಿಂತಿದೆ ಅದಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯ.