ಅಕ್ಟೋಬರ್ 19, 20 ಬಸವಕಲ್ಯಾಣದಲ್ಲಿ ಸ್ವಾಭಿಮಾನಿ ಕಲ್ಯಾಣ ಪರ್ವ

ಬಸವ ಮೀಡಿಯಾ
ಬಸವ ಮೀಡಿಯಾ

ಬೀದರ್

ಅಕ್ಟೋಬರ್ 19 ಮತ್ತು 20 ರಂದು ಬಸವಕಲ್ಯಾಣದಲ್ಲಿ ಸ್ವಾಭಿಮಾನಿ ಕಲ್ಯಾಣ ಪರ್ವ ನಡೆಯಲಿದೆ ಎಂದು ಬೆಂಗಳೂರಿನ ಬಸವ ಗಂಗೋತ್ರಿಯ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷರಾದ ಡಾ. ಚನ್ನಬಸವಾನಂದ ಸ್ವಾಮೀಜಿ ಗುರುವಾರ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಬಸವ ಧರ್ಮ ಪೀಠದ ಸ್ವಾಭಿಮಾನಿ ಶರಣರ ಬಳಗದ ವತಿಯಿಂದ ಆಯೋಜಿತವಾಗಿರುವ ಕಾರ್ಯಕ್ರಮದಲ್ಲಿ ಶರಣ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.

ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡು ಮತ್ತು ಆಂಧ್ರಪ್ರದೇಶ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಂದ ಶರಣ ಶರಣೆಯರು ಪಾಲ್ಗೊಳ್ಳುತಿದ್ದಾರೆ. ಬಸವ ಭಕ್ತರಿಗಾಗಿ ಪ್ರಸಾದ, ವಸತಿ ವ್ಯವಸ್ಥೆ ಇರಲಿದೆ ಎಂದು ತಿಳಿಸಿದರು.

ಬೀದರ ಬಸವ ಮಂಟಪದ ಸಂಚಾಲಕರಾದ ಸದ್ಗುರು ಸತ್ಯಾದೇವಿ ಮಾತಾಜಿ ಮಾತನಾಡಿ, ಸ್ವಾಭಿಮಾನಿ ಕಲ್ಯಾಣ ಪರ್ವ ಎಂದರೆ ಇದೊಂದು ಕಲ್ಯಾಣದ ಹಬ್ಬ. ಶರಣ ಬಂಧುಗಳು ತನು, ಮನ, ಧನ, ಸಮಯ, ಅಭಿಮಾನ ದಾಸೋಹ ಮಾಡಿ ಕಾರ್ಯಕ್ರಮ ಯಶಸ್ವಿಗೊಳಿಸಲು ಕೋರಿದರು.

ಲಿಂಗಾಯತ ಧರ್ಮ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಶಿವರಾಜ ಪಾಟೀಲ ಅತಿವಾಳ, ರಾಷ್ಟ್ರೀಯ ಬಸವ ದಳದ ಜಿಲ್ಲಾ ಉಪಾಧ್ಯಕ್ಷ ಶಿವಶರಣಪ್ಪ ಪಾಟೀಲ ಹಾರೂರಗೇರಿ, ಲಿಂಗಾಯತ ಧರ್ಮ ಮಹಾಸಭಾದ ಔರಾದ ತಾಲೂಕಾಧ್ಯಕ್ಷ ಕಲ್ಲಪ್ಪ ದೇಶಮುಖ, ಪ್ರಮುಖರಾದ ಬಸವಂತರಾವ ಬಿರಾದಾರ, ರವಿಕಾಂತ ಬಿರಾದಾರ, ನಿರ್ಮಲಾ ನಿಲಂಗೆ, ಮಲ್ಲಿಕಾರ್ಜುನ ಬಿರಾದಾರ ಸಂಗಮ, ಮಲ್ಲಿಕಾರ್ಜುನ ಶಹಾಪುರ, ಓಂಪ್ರಕಾಶ ರೊಟ್ಟೆ, ಸೇರಿದಂತೆ ಇನ್ನಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ವಿವರ

ಅಕ್ಟೋಬರ್ 19 ರ ಬೆ.11 ಗಂಟೆಗೆ ಉದ್ಘಾಟನಾ ಸಮಾರಂಭ ಜರುಗಲಿದ್ದು, ಅಂದು ಬೆಳಿಗ್ಗೆ 5 ಗಂಟೆಗೆ ಸುಪ್ರಭಾತ ಸಮಯದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ, ಬಸವ ಚಿಂತನ ಕಾರ್ಯಕ್ರಮ ನಡೆಯಲಿದೆ.

ಸಾ.5 ಗಂಟೆಗೆ ಧರ್ಮಚಿಂತನ ಗೋಷ್ಠಿ- 1 ಜರುಗಲಿದೆ.

ಅಕ್ಟೋಬರ್ 20 ರಂದು ಬೆಳಿಗ್ಗೆ 8 ಗಂಟೆಗೆ ಸಾಮೂಹಿಕ ಪ್ರಾರ್ಥನೆ, ಇಷ್ಟಲಿಂಗ ಪೂಜೆ ಹಾಗೂ ಬೆ. 10-30 ಕ್ಕೆ ಶರಣ ವಂದನೆ 770 ಶರಣರಿಗೆ ಶರಣಾರ್ಥಿ ಹೃದಯಸ್ಪರ್ಶಿ ಕಾರ್ಯಕ್ರಮ ನಡೆಯಲಿದೆ.

ಮ.12 ರಿಂದ 2 ರ ವರೆಗೆ ಮಹಿಳಾಗೋಷ್ಠಿ ಮ.3 ರಿಂದ 5 ರವರೆಗೆ ಯುವಗೋಷ್ಠಿ ಹಾಗೂ ಸಾಯಂಕಾಲ ಸಮಾರೋಪ ಸಮಾರಂಭ ಜರುಗಲಿದೆ.

Share This Article
Leave a comment

Leave a Reply

Your email address will not be published. Required fields are marked *