ಯುವಕರ ಸೆಳೆಯಲು ಮೊದಲ ಬಾರಿ ನಡೆದ ಬಸವ ಬೈಕ್ ರೇಸ್

ಮಂಜು ಕಲಾಲ
ಮಂಜು ಕಲಾಲ

ಬಸವನಬಾಗೇವಾಡಿ

ಬಸವಣ್ಣನವರ ಜನ್ಮ ಸ್ಥಳದಲ್ಲಿ ಕಳೆದ ಶುಕ್ರವಾರ ನಡೆದ ಬಸವ ಬೈಕ್ ರೇಸ್ ನೂರಾರು ಯುವಕರನ್ನು ಆಕರ್ಷಿಸುವಲ್ಲಿ ಸಫಲವಾಯಿತು.

ಪಟ್ಟಣದ ಆರಾಧ್ಯದೈವ ಬಸವೇಶ್ವರ (ಮೂಲನಂದೀಶ್ವರ ) ಜಾತ್ರಾ ಮಹೋತ್ಸವದ ಅಂಗವಾಗಿ ಇದೇ ಪ್ರಥಮ ಬಾರಿಗೆ ರಾಷ್ಟ್ರೀಯ ಬಸವ ಸೈನ್ಯದ ನೇತೃತ್ವದಲ್ಲಿ ಸೈಕಲ್ ಮೋಟಾರ್ ಸ್ಲೋ ರೇಸ್ ಸ್ಪರ್ಧೆಯನ್ನು ಕಳೆದ ಶುಕ್ರವಾರ ಆಯೋಜಿಸಿತ್ತು.

ಜಾತ್ರಾ ಸಮಿತಿ ಸದಸ್ಯ ಚನ್ನಬಸು ಶಿವಗೊಂಡ ಅವರು ನಿಧಾನವೇ ಪ್ರಧಾನ ಎಂಬಂತೆ ಸ್ಪರ್ಧೆಯಲ್ಲಿ ಯಾರು ನಿಧಾನವಾಗಿ ಬೈಕ್ ಓಡಿಸುತ್ತಾರೋ ಅವರೇ ವಿಜೇತರು. ವೀಲ್ಹಿಂಗ್ ನಂತಹ ಅಪಾಯಕಾರಿ ಕ್ರೀಡೆಗಳಿಗಿಂತ ಸ್ಲೋ ಬೈಕ್ ರೇಸಿನ ಮೂಲಕ ಯುವಕರು ತಮ್ಮ ಕೌಶಲ್ಯವನ್ನು ತೋರಿಸುವುದು ಒಳ್ಳೆಯದು ಎಂದರು.

ಇಂತಹ ಕಾರ್ಯಕ್ರಮವನ್ನು ಆಯೋಜಿಸಿದ ಬಸವ ಸೈನ್ಯ ಯುವಕರು ಮಾದರಿಯಾಗಿದ್ದಾರೆ, ಎಂದರು.

ಸ್ಥಳೀಯ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ನೆರೆದಿದ್ದ ನೂರಾರು ಯುವಕರ ನಡುವೆ ಬಸವೇಶ್ವರ ಸೇವಾ ಸಮಿತಿಯ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಮೋಟಾರ್ ಸೈಕಲ್ ಹತ್ತಿ ಓಡಿಸಿ ಸ್ಪರ್ಧೆಗೆ ಚಾಲನೆ ನೀಡಿದರು.

ವಿಜಯಪುರ-ಬಾಗಲಕೋಟ ಸೇರಿದಂತೆ ವಿವಿಧ ಭಾಗಗಳಿಂದ 50 ಕ್ಕೂ ಅಧಿಕ ಯುವಕರು ಬಸವ ಬೈಕ್ ರೇಸಿನಲ್ಲಿ ಭಾಗವಹಿಸಿದ್ದರು.

ಬಬಲಾದಿಯ ಹಣಮಂತ ಝಳಕಿ ಪ್ರಥಮ, ರಾಯಬಾಗದ ಸುರೇಶ ಮಗದುಮ ದ್ವಿತೀಯ, ಬಬಲಾದಿಯ ಬಾಹುಬಲ ಶ್ರೀಮಂತ ಖವಟಕೊಪ್ಪ (ಬೆಂಕಿಬಬಲಾದಿ) ತೃತೀಯ ಸ್ಥಾನ ಪಡೆದುಕೊಂಡರು.

ಈ ಸಂದರ್ಭದಲ್ಲಿ ಎಂ.ಬಿ.ಆದಿಗೊಂಡ ಮಾತನಾಡಿ ನಿಧಾನವೇ ಪ್ರಧಾನ ಎಂಬುವದನ್ನು ನಾವು ಅರಿತುಕೊಂಡು ನಡೆದರೆ ಜೀವನ ಸುಗಮವಾಗಿ ಸಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ಗುರಲಿಂಗ ಬಸರಕೋಡ, ಪಂಚಾಕ್ಷರಿ ಕಾಳಹಸ್ತೇಶ್ವರಮಠ, ಬಸವರಾಜ ಹಾರಿವಾಳ,ಶೇಖರ ಗೊಳಸಂಗಿ, ಸಂಗಮೇಶ ಓಲೇಕಾರ, ಶಂಕರಗೌಡ ಬಿರಾದಾರ, ಸುರೇಶಗೌಡ ಪಾಟೀಲ, ಬಸವರಾಜ ಅಳ್ಳಗಿ, ಮಿರಾಸಾಬ ಕೊರಬು, ವಿಶ್ವನಾಥ ಹಾರಿವಾಳ, ಎಂ.ಬಿ.ತೋಟದ ಇತರರು ಇದ್ದರು. ಮಹೇಶ ಹುಮನಾಬಾದ, ಎಂ.ಪಿ.ಗಾರಗೆ, ಸೀತಾರಾಮ ಭಜಂತ್ರಿ ಮೈದಾನ ಸಿದ್ಧ ಗೊಳಿಸಿದರು.

ನಿರ್ಣಾಯಕರಾಗಿ ಜಗದೀಶ ಬಿಜಾಪುರ, ಮಲ್ಲು ಪಡಶೆಟ್ಟಿ, ಸಂಗಮೇಶ ಮೈಲೇಶ್ವರ ಕಾರ್ಯನಿರ್ವಹಿಸಿದರು. ಶಂಕರಗೌಡ ಬಿರಾದಾರ ಸ್ವಾಗತಿಸಿದರು. ಚನ್ನಪ್ಪ ಶಿವಗೊಂಡ ನಿರೂಪಿಸಿದರು.

Share This Article
Leave a comment

Leave a Reply

Your email address will not be published. Required fields are marked *