ಮೀಸಲಾತಿ ಹೋರಾಟಗಳಿಂದ ಲಿಂಗಾಯತ ಧರ್ಮದ ಯುವಕ-ಯುವತಿಯರು ಗೊಂದಲಗಳಲ್ಲಿ ಸಿಲುಕಿದ್ದಾರೆ, ಎಂದು ಮಾಜಿ ಸಚಿವೆ ರಾಣಿ ಸತೀಶ್ ಹೇಳಿದರು.
ಅಮೇರಿಕದ ರಿಚ್ಮಂಡ್ ನಗರದಲ್ಲಿ ಇತ್ತೀಚೆಗೆ ನಡೆದ 12ನೆಯ ಅಕ್ಕ ಸಮ್ಮೇಳನದ ಅಂಗವಾಗಿ ಜರುಗಿದ ಚಿಂತನಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಮೀಸಲಾತಿ ಹೋರಾಟಗಳಿಂದ ಲಿಂಗಾಯತರ ಒಳ ಉಪಪಂಗಡಗಳು ಮುನ್ನೆಲೆಗೆ ಬರುತ್ತಿವೆ,
ರಾಜಕಾರಣಿಗಳೂ ಧರ್ಮದ ವಿಚಾರಗಳಲ್ಲಿ ವಿಭಜನೆಯ ಮಾತನಾಡಬಾರದು ಎಂದರು.
ಲಿಂಗಾಯತರು ಒಳ ಉಪಪಂಗಡಗಳಲ್ಲಿ ವಿಂಗಡನೆಯಾಗಬಾರದು. ಇಷ್ಟಲಿಂಗಾರ್ಚನೆಯನ್ನು ಕೇಂದ್ರೀಕರಿಸಿ ಧರ್ಮ ಸಿದ್ಧಾಂತಗಳನ್ನು ಮುಕ್ತವಾಗಿ ಅವಲೋಕ ಮಾಡಬೇಕು, ಎಂದರು.