ಸಿಂಧನೂರು
ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬೀದರ ಸಭೆಯೊಂದರಲ್ಲಿ ಬಸವಣ್ಣವರ ಬಗ್ಗೆ ಹಗುರವಾಗಿ ಮಾತನಾಡಿದ್ದು, ಕೀಳು ಬುದ್ಧಿ ಹೊಂದಿರುವ ಅವರು ಒಬ್ಬ ಶಾಸಕರಾಗಿದ್ದು, ನಾಲಾಯಕ ವ್ಯಕ್ತಿ ಎಂದು ಪ್ರಗತಿಪರ ಸಂಘಟನೆಯ ಮುಖಂಡ ವೀರಭದ್ರಗೌಡ ಅಮರಾಪುರ ಹೇಳಿದರು.
ಅವರು ಗುರುವಾರ ನಗರದ ಪತ್ರಿಕಾ ಭವನದಲ್ಲಿ ಬಸವಪರ ಹಾಗೂ ಪ್ರಗತಿಪರ ಸಂಘಟನೆಗಳ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಪಹಣಿಯಲ್ಲಿ ವಕ್ಫ್ ನಮೂದು ವಿಚಾರಕ್ಕೆ ಸಂಬಂಧಿಸಿ ಮಾತನಾಡುವಾಗ ‘ಬಸವಣ್ಣನಂತೆ ಜಿಗಿದು ಸಾಯಿರಿ’ ಎಂದು ಹೇಳಿರುವುದು ಖಂಡನೀಯ ವಿಷಯ. ಯತ್ನಾಳ್ ಅವರು ಒಬ್ಬ ಹರುಕು ಬಾಯಿಯ ವ್ಯಕ್ತಿಯಾಗಿದ್ದಾರೆ, ಇವರು ಯಾವುದೇ ಪಕ್ಷದಲ್ಲಿ ಇದ್ದರು ಆ ಪಕ್ಷಕ್ಕೆ ದೊಡ್ಡ ದುರಂತ ತಪ್ಪಿದ್ದಲ್ಲ ಎಂದರು.
ಧರ್ಮದ ಹೆಸರಿನಲ್ಲಿ ಶತಮಾನಗಳಿಂದ ಶೋಷಣೆಗೆ ಒಳಗಾದ ಮನುಕುಲವನ್ನು ಉದ್ಧರಿಸಿದವರು, ಮಹಾಪುರುಷ ಬಸವಣ್ಣನವರು. 12 ನೆಯ ಶತಮಾನದಲ್ಲಿ ಉದಯಿಸಿ ಜಾತಿರಹಿತ, ವರ್ಗರಹಿತ, ಸರ್ವಜೀವಿಗಳ ಏಳಿಗೆಗಾಗಿ ಧಾರ್ಮಿಕ, ಸಾಮಾಜಿಕ ಕ್ರಾಂತಿಯನ್ನು ಮಾಡಿದ್ದು, ಕರ್ನಾಟಕದ ಇತಿಹಾಸದಲ್ಲೇ ಒಂದು ಮೈಲುಗಲ್ಲು. ಅಂತಹ ಮಹಾನ್ ವ್ಯಕ್ತಿಗೆ ಇಲ್ಲಸಲ್ಲದ ಮಾತುಗಳನ್ನು ಆಡುವ ಗುಣ ಬಸನಗೌಡ ಅವರ ಮನಸ್ಸಲ್ಲಿ ಇದೆ, ಹಾಗಾಗಿ ಅವರು ರಾಜಕೀಯವಾಗಿ ಅದೇ ಕೀಳು ಜಾಗದಲ್ಲಿ ಇದ್ದಾರೆ ಎಂದರು.
ಬಸವ ಕೇಂದ್ರದ ಅಧ್ಯಕ್ಷ ಕರೇಗೌಡ ಕುರುಕುಂದಾ ಮಾತನಾಡಿ, ನೀವು ಎಚ್ಚರಗೊಳ್ಳಿ, ಇಲ್ಲವಾದರೆ ಬಸವಣ್ಣನವರಂತೆ ಹೊಳೆಗೆ ಹಾರಿ ಸಾಯಿರಿ ಎನ್ನುವ ಉದ್ಧಟತನದ ಮಾತುಗಳನ್ನು ಯತ್ನಾಳ ಆಡಿದ್ದಾರೆ. ಯತ್ನಾಳ ಅವರು ತಾನು ಹುಟ್ಟಿದ ಧರ್ಮ, ತನ್ನ ಧರ್ಮದ ಗುರುವಾದ ಬಸವಣ್ಣನವರ ಬಗ್ಗೆ ಇಂಥ ಮಾತುಗಳನ್ನೇ ಆಡಿದ್ದು ನೋಡಿದರೆ, ಅವರು ಬಿಜೆಪಿ ಪಕ್ಷದ ಹೃದಯ ಸ್ಥಾನವಾದ ಆರ್ ಎಸ್ ಎಸ್ ನಾಯಕರನ್ನು ಮೆಚ್ಚಿಸಲು ಹೊರಟಂತಿದೆ. ಇವರು ಕೂಡಲೇ ನಾಡಿನ ಜನತೆಯ ಕ್ಷಮೆ ಕೇಳಬೇಕು, ಇಲ್ಲವಾದರೆ ಇವರ ವಿರುದ್ಧ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದರು.
ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷ ಪಿ. ರುದ್ರಪ್ಪ ಕುರುಕುಂದಾ ಮಾತನಾಡಿ, ವಿಶ್ವಗುರು ಬಸವಣ್ಣನವರು ಇತರ ದೇಶದವರಿಗೂ ಮಾದರಿ ನಾಯಕ ಆಗಿದ್ದಾರೆ. ಅಂತ ನಾಯಕರ ವಿರುದ್ಧ ಹಗುರವಾಗಿ ಮಾತನಾಡುವ ಬಸನಗೌಡ ಯತ್ನಾಳ್ ಅವರು ಒಬ್ಬ ಕ್ರೂರಿ ಆಗಿದ್ದಾರೆ. ಯಾವಾಗಲೂ ವಿವಾದ ಉಂಟು ಮಾಡುವ ಕೆಲಸ ಮಾಡುತ್ತಿದ್ದಾರೆ, ಅವನೊಬ್ಬ ಸಂಸ್ಕೃತಿಹೀನ ಮನುಷ್ಯ ಎಂದು ಜರಿದರು. ಹೀಗೆ ಮಾತನಾಡಿ, ರಾಜಕೀಯವಾಗಿ ಇನ್ನೂ ದೊಡ್ಡ ಮಟ್ಟಕ್ಕೆ ಹೋಗಬೇಕು ಎಂಬ ಉದ್ದೇಶ ಇಟ್ಟುಕೊಂಡು ಬಸವಣ್ಣನವರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ, ಇದು ಅವರ ಸಣ್ಣ ಬುದ್ಧಿ. ಜನ ಇದನ್ನು ಮೆಚ್ಚುವುದಿಲ್ಲ. ಕೂಡಲೇ ಅವರು ಕ್ಷಮೆ ಕೇಳಬೇಕು ಎಂದರು.
ಸಂವಿಧಾನದ ಬಗ್ಗೆ ಹಗುರ ಮಾತು ಸರಿಯಲ್ಲ
ನಮ್ಮ ಭಾರತ ದೇಶದ ಸಂವಿಧಾನದಿಂದಲೇ ಪ್ರತಿಯೊಬ್ಬರಿಗೂ ಉನ್ನತ ಸ್ಥಾನ ಮಾನ ಸಿಗುವ ಅವಕಾಶಗಳು ಇವೆ. ಇಂತಹ ಸಂವಿದಾನ ಪಡೆಯಲು ನಾವೆಲ್ಲರೂ ಪುಣ್ಯ ಮಾಡಿದ್ದೇವೆ, ಪೇಜಾವರ ಮಠದ ಶ್ರೀಗಳು ಇಂತಹ ಸಂವಿಧಾನದ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ, ಅವರಿಗೇನು ಗೊತ್ತು ಸವಿಧಾನದ ಬಗ್ಗೆ, 12ನೇ ಶತಮಾನದ ಬಸವಾದಿ ಶರಣರ ಸಮಾನತೆ ಆಶಯವನ್ನು ಸಂವಿಧಾನ ಹೊಂದಿದೆ. ಇದೇ ಸಂವಿಧಾನ ಮುಂದುವರಿಯುವುದು ಉತ್ತಮ. ಕುಲ ಕುಲಗಳ ನಡುವೆ ವಿಷ ಬೀಜ ಬಿತ್ತುವ ಪೇಜಾವರರಂತಹ ಜನಗಳಿಂದ ನಾವೆಲ್ಲ ದೂರ ಇರಬೇಕು, ಆಗ ಮಾತ್ರ ದೇಶ ಶಾಂತಿ ಕಾಣಲು ಸಾಧ್ಯ ಎಂದು ಪಿ. ರುದ್ರಪ್ಪ ಹೇಳಿದರು.
ಬಸವಪರ, ಪ್ರಗತಿಪರ ಸಂಘಟನೆಗಳ ಮುಖಂಡರಾದ ನಗರಸಭೆ ಮಾಜಿ ಅಧ್ಯಕ್ಷ ಕೆ. ಶರಣಪ್ಪ ತೆಂಗಿನಕಾಯಿ, ಎಚ್.ಜಿ. ಹಂಪಣ್ಣ, ವೀರನಗೌಡ ಬಸಾಪುರ, ಎಚ್. ಬಸವರಾಜ ವಕೀಲ, ಚಂದ್ರಗೌಡ ಹರೆಟನೂರು, ನಿಜಗುಣ, ಭೀಮಣ್ಣ ಬೆಳಗುರ್ಕಿ ಮತ್ತೀತರರು ಉಪಸ್ಥಿತರಿದ್ದರು.
ಯತ್ನಾಳ್ ವಿರುದ್ಧ ಪ್ರಮುಖ ಬಿಜೆಪಿಯ ನಾಯಕರು ಯಾರೂ ಕೂಡಾ ಮಾತನಾಡದೆ,ಕ್ರಮಕೈಗೊಳ್ಳದೆ ಇರುವುದನ್ನ ನೋಡಿದರೆ ಅವರೇ ಇವರನ್ನ ವಿವಾದಾತ್ಮಕ ಹೇಳಿಕೆಗಳನ್ನ ಮಾತನಾಡುವ ಏಜೆಂಟರಾಗಿ ನೇಮಿಸಿರಬಹುದೆಂದು ಅನುಮಾನ ಬರುತ್ತಿದೆ
ಯತ್ನಾಳ್ ನ ಯಾವುದೇ ಕಾಯ೯ಕ್ರಮದಲ್ಲಿದ್ದರೂ ಅಲ್ಲಿ ಹೋಗಿ ಕ್ಷಮೆಕೇಳುವಂತೆ ಮಾಡಬೆಕು , ಆತನಿಗೂ & ಆತನಂಥಹ ಮನಸ್ಥಿತಿಯವರಿಗೂ ಒಂದು ಎಚ್ಚರಿಕೆಯ ಸಂದೇಶ ಕೊಟ್ಟಂತಾಗುತ್ತದೆ.
ಯತ್ನಾಳ್ ನ ಯಾವುದೇ ಕಾಯ೯ಕ್ರಮದಲ್ಲಿದ್ದರೂ ಅಲ್ಲಿ ಹೋಗಿ ಕ್ಷಮೆಕೇಳುವಂತೆ ಮಾಡಬೆಕು , ಆತನಿಗೂ & ಆತನಂಥಹ ಮನಸ್ಥಿತಿಯವರಿಗೂ ಒಂದು ಎಚ್ಚರಿಕೆಯ ಸಂದೇಶ ಕೊಟ್ಟಂತಾಗುತ್ತದೆ.
ಎಲ್ಲಾ ಬಸವಪರ ಸಂಘಟನೆಗಳಲ್ಲಿ ಒಂದು ಮನವಿ ದಯಮಾಡಿ ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ರಾಜಕೀಯ ಬಹಿಷ್ಕಾರ ಹಾಕುವ ಬಗ್ಗೆ ಗಂಭೀರವಾಗಿ ಯೋಚಿಸಿ ಎಲ್ಲರೂ ಒಗ್ಗಟ್ಟಾಗಿ ಅಂತಹ ಕರೆ ಕೊಡಬೇಕು. ಅವರನ್ನು ಕ್ಷಮೆ ಕೇಳಿ ಎಂದು ಒತ್ತಾಯಿಸುವುದರಲ್ಲಿ ಏನೂ ಅರ್ಥವಿಲ್ಲ. ಅಷ್ಟರಿಂದ ಬದಲಾಗುವ ಜಾಯಮಾನ ಅವರದ್ದಲ್ಲ. ರಾಜಕೀಯ ಅಧಿಕಾರಕ್ಕಾಗಿ ಅವರು ಯಾವ ಹಂತಕ್ಕೆ ಹೋಗಲೂ ಹೇಸುವುದಿಲ್ಲ. ಅವರು ಬಸವ ಪ್ರಣೀತ ಲಿಂಗಾಯತ ಧರ್ಮಕ್ಕೆ “ಧರ್ಮ ನಿಂದನೆ” ಮಾಡಿದ್ದಾರೆ. ಅವರ ಈ ಕ್ರಮವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ತೆಗೆದುಕೊಳ್ಳದಿದ್ದರೆ ನಮ್ಮನ್ನು ಇನ್ನು ಮುಂದೆ ಎಲ್ಲರೂ ಲಘುವಾಗಿ ಪರಿಗಣಿಸುತ್ತಾರೆ. ಆದುದರಿಂದ ನಮ್ಮ ಧರ್ಮದ ಸಂಸ್ಥಾಪಕರಿಗೆ ಆಗಿರುವ ಅವಮಾನವನ್ನು ನಾವು ಕ್ಷಮಿಸಬಾರದು. ಯೋಚಿಸಿ.