ಬೆಂಗಳೂರು
ಕೆಲವು ವರ್ಷಗಳ ಬಸವಣ್ಣನವರ ಚಿತ್ರವಿದ್ದ ಎಚ್‌ಎಮ್‌ಟಿ ಕೈ ಗಡಿಯಾರಗಳು ಜನಪ್ರಿಯವಾಗಿದ್ದವು. 2016ರಲ್ಲಿ ಎಚ್‌ಎಮ್‌ಟಿ ಕಂಪನಿ ಮುಚ್ಚಿ ಹೋದ ಮೇಲೆ ಈ ಗಡಿಯಾರಗಳು ಕಣ್ಮರೆಯಾಗಿ ಕೆಲವು ಸಂಗ್ರಾಹಕರರ ಬಳಿ ಮಾತ್ರ ಉಳಿದುಕೊಂಡಿವೆ.
ಬೆಂಗಳೂರಿನ ಸಾಫ್ಟ್ವೇರ್ ಉದ್ಯೋಗಿ ಮಲ್ಲಿಕಾರ್ಜುನ ಪಾಟೀಲ್, 35, ಈ ಅಪರೂಪದ ಗಡಿಯಾರಗಳನ್ನು ಮತ್ತೆ ಮಾರುಕಟ್ಟೆಗೆ ತರಲು ಒಂದು ಸಹಿ ಅಭಿಯಾನ ಶುರು ಮಾಡಿದ್ದಾರೆ.

ಮೂಲತಃ ಬಳ್ಳಾರಿಯ ಸಿರಗುಪ್ಪೆಯ ಪಾಟೀಲ್ ಗಡಿಯಾರಗಳ ಸಂಗ್ರಾಹಕರು. ಬಸವಣ್ಣನವರ ಚಿತ್ರಗಳಿರುವ ಗಡಿಯಾರಗಳೂ ಸೇರಿ ಇವರ ಬಳಿ 300 ಗಡಿಯಾರಗಳಿವೆ.
ಎಚ್‌ಎಮ್‌ಟಿ ಇಂದೂ ಕೂಡ ಯಂತ್ರಗಳನ್ನು ಜಪಾನಿನಿಂದ ಆಮದುಮಾಡಿಕೊಂಡು, ಇಲ್ಲೇ ಡಯಲ್ ಮತ್ತು ಬೆಲ್ಟ್ ತಯಾರು ಮಾಡಿ ಗಡಿಯಾರಗಳನ್ನು ತನ್ನ ಅಂಗಡಿ ಮತ್ತು ವೆಬ್‌ಸೈಟಿನಲ್ಲಿ ಮಾರುತ್ತದೆ. ವಿಶೇಷ ವಿನ್ಯಾಸದ ಗಡಿಯಾರಗಳಿಗೆ ಬೇಡಿಕೆಯಿದ್ದರೆ ಅವುಗಳನ್ನು ಉತ್ಪಾದಿಸಲು ಸಿದ್ಧವಿದೆಯಂತೆ.
ಇತ್ತೀಚೆಗೆ ಅವರ ಮನವಿಯ ಮೇಲೆ ಎಚ್‌ಎಮ್‌ಟಿಯಿಂದ ಬಿಡುಗಡೆಯಾಗಿದ್ದ ಗಂಡುಬೇರುಂಡದ ಚಿತ್ರವಿದ್ದ ಗಡಿಯಾರಕ್ಕೆ ಗ್ರಾಹಕರಿಂದ ಬಹಳ ಒಳ್ಳೆಯ ಪ್ರತಿಕ್ರಿಯೆ ಬಂದಿತ್ತು. ಅದನ್ನು ನೋಡಿ ಬಸವಣ್ಣನವರ ಗಡಿಯಾರವನ್ನು ಮತ್ತೆ ತಯಾರಿಸಲು ಎಚ್‌ಎಮ್‌ಟಿಯನ್ನು ಕೇಳಲು ಪಾಟೀಲರು ನಿರ್ಧರಿಸಿದರು.

ಬಸವಣ್ಣವರ ಚಿತ್ರವಿರುವ ಗಡಿಯಾರ ಖರೀದಿಸಲು ಕನಿಷ್ಠ 500 ಜನರು ಮುಂದೆ ಬಂದರೆ ಪಾಟೀಲರು ಖುದ್ದಾಗಿ ಎಚ್‌ಎಮ್‌ಟಿ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಾರೆ. ಅವರು ಮನವಿ ಒಪ್ಪಿ ಗಡಿಯಾರ ತಯಾರಿಸಿದರೆ ಬಸವ ಅನುಯಾಯಿಗಳಿಗೆ 1500-2000 ರೂಪಾಯಿಗಳಲ್ಲಿ ವಿಶೇಷ ಗಡಿಯಾರ ಲಭ್ಯವಾಗುತ್ತದೆ.
ಪಾಟೀಲರು ಆಸಕ್ತರ ವಿವರಗಳನ್ನು ಸಂಗ್ರಹಿಸಲು ಒಂದು ಗೂಗಲ್ ಫಾರ್ಮ್ ತಯಾರು ಮಾಡಿದ್ದಾರೆ. ಗಡಿಯಾರ ಬೇಕಾದವರು ಈ ಲಿಂಕನ್ನು ಒತ್ತಿ ಮಾಡಿ ನಿಮ್ಮ ವಿವರ ನೀಡಬಹುದು.
ಗೂಗಲ್ ಫಾರ್ಮ್ ಲಿಂಕ್ ಒತ್ತಿ ವಿವರ ತುಂಬಿಸಿ
https://docs.google.com/forms/d/e/1FAIpQLScFjy2JW5zdUG-wkiHA1F3CtqTmreMX7t5XtxeC7IZkq6EMzQ/viewform
ನಾವು ಕೊಂಡು ಕ್ಕೊಳ್ಳು ದಕ್ಕೆ ಸಿದ್ರಿದ್ದೇವೆ. ವಿಶ್ವಗುರು ಮತ್ತು ಕಾಯಕವೇ ಕೈಲಾಸ ಈ ಪದಗಳ್ಳನ್ನು ಒಳಗೊಂಡಿದ್ದರೆ ಇನ್ನು ಉತ್ತಮ
ಗೋಡೆ ಗಡಿಯಾರಗಳಲ್ಲಿ ಬಸವಣ್ಣನವರ ವಚನ ರಚನೆಯಲ್ಲಿ ನಿರತ ಭಾವಚಿತ್ರ ಬೇಕು.. ತಯಾರಿಸಿ
ವಿಧವಿಧ ಗೋಡೆಯ ಗಡಿಯಾರದಲ್ಲಿ ಬಸವಣ್ಣನವರು ಭಾವಚಿತ್ರವಿರುವ ಗೋಡೆ ಗಡಿಯಾರ ನಮಗೂ ಬೇಕಾಗಿದೆ ದಯವಿಟ್ಟು ಗೋಡೆ ಗಡಿಯಾರವನ್ನು ತಯಾರಿಸಿ ಬಸವಣ್ಣನವರ ಭಾವಚಿತ್ರ ಇರುವ ಗೋಡೆಯ ಗಡಿಯಾರವನ್ನು ಎಲ್ಲಾ ವರ್ಗದ ಜನರು ತೆಗೆದುಕೊಳ್ಳಲು ಇಚ್ಚಿಸುತ್ತಾರೆ