ಶಿವಾಜಿ ಮಹಾರಾಜರನ್ನು ಮಹಾರಾಷ್ಟ್ರದ ಸಾಂಸ್ಕೃತಿಕ ನಾಯಕ ಎಂದು ಮಾಡಿದ್ದಾರೆ, ಅದಕ್ಕೆ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ, ಮುಂಬೈ ರೈಲ್ವೆ ನಿಲ್ದಾಣಕ್ಕೆ ಶಿವಾಜಿ ಹೆಸರನ್ನು ಇಡಲಾಗಿದೆ
ಆದರೆ ಕರ್ನಾಟಕದಲ್ಲಿ ರಾಜ್ಯದ ಸಾಂಸ್ಕೃತಿಕ ನಾಯಕ ಆಗಿರುವ ಬಸವಣ್ಣನವರ ಹೆಸರಿನಲ್ಲಿ ಯಾವುದೇ ರೈಲು ನಿಲ್ದಾಣ ಇಲ್ಲ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮೆಟ್ರೋ ರೈಲು ನಿಲ್ದಾಣ ಯಾವುದೂ ಇಲ್ಲ.
ಕರ್ನಾಟಕದಲ್ಲಿ ಲಿಂಗಾಯತರ ಹೆಸರಿನಲ್ಲಿ ರಾಜಕಾರಣಿಗಳು ಮುಖ್ಯಮಂತ್ರಿ, ಸಚಿವ, ಶಾಸಕ ಎಲ್ಲಾ ಆಗಿದ್ದಾರೆ, ದೊಡ್ಡ ದೊಡ್ಡ ಲಿಂಗಾಯತ ಮಠಗಳು, ಮಠಾಧೀಶರು ಎಲ್ಲಾ ಇದ್ದಾರೆ, ನೂರಾರು ಲಿಂಗಾಯತ ಸಂಘ ಸಂಸ್ಥೆಗಳು, ಸಂಘಟನೆಗಳು ಇವೆ. ಆದರೆ ಇವರಲ್ಲಿ ಯಾರೂ ಇಲ್ಲಿಯವರೆಗೆ ವಿಮಾನ ನಿಲ್ದಾಣ, ರೈಲ್ವೆ, ಮೆಟ್ರೋಗೆ ಬಸವಣ್ಣನವರ ಹೆಸರು ಇಡಬೇಕು ಎಂದು ಹೇಳಿಲ್ಲ
ವರ್ಷಗಳ ಹಿಂದೆ ಕೆಲವು ಕುರುಬ ಮಠಾಧೀಶರು, ಕುರುಬ ಸಂಘಟನೆಗಳು ಬೆಂಗಳೂರು ನಗರ ರೈಲ್ವೆ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರು ಇಡಬೇಕು ಎಂದು ಒತ್ತಾಯ ಮಾಡಿದ ಮೇಲೆ ಬೆಂಗಳೂರು ರೈಲ್ವೆ ನಿಲ್ದಾಣದ ಹೆಸರು ಬದಲಾಯಿತು. ಈ ರೀತಿ ಲಿಂಗಾಯತ ಮಠಾಧೀಶರು,ಲಿಂಗಾಯತ ಸಂಘ ಸಂಸ್ಥೆಗಳು ಯಾಕೆ ಸರ್ಕಾರಕ್ಕೆ ಒತ್ತಾಯ ಮಾಡುವುದಿಲ್ಲ.
ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಲಿಂಗಾಯತರು ಇದ್ದರು ಸಹ ಇಲ್ಲದಂತೆ ಆಗಿದ್ದಾರೆ.
ಯಶವಂತಪುರ ರೈಲ್ವೆ ನಿಲ್ದಾಣ ಬೆಂಗಳೂರಿನ ಎರಡನೇ ಮುಖ್ಯ ರೈಲು ನಿಲ್ದಾಣ ಇದಕ್ಕೆ ಬಸವಣ್ಣನವರ ಹೆಸರು ಇಡಬೇಕು, ಇದರ ಜೊತೆ ಯಾವುದಾದರೂ ಒಂದು ಪ್ರಮುಖ ಮೆಟ್ರೋ ರೈಲು ನಿಲ್ದಾಣಕ್ಕೆ ಬಸವಣ್ಣನವರ ಹೆಸರು ಇಡಬೇಕು ಎಂದು ಲಿಂಗಾಯತ ಸಚಿವರು, ಶಾಸಕರು, ಲಿಂಗಾಯತ ಮಠಾಧೀಶರು ಸರ್ಕಾರದ ಮೇಲೆ ಒತ್ತಡ ಹಾಕಬೇಕು.