ಬಸವಣ್ಣನವರನ್ನು ಮತ್ತೊಮ್ಮೆ ನಾಡಿನಿಂದ ಓಡಿಸಲು ಕೈಜೋಡಿಸಿರುವ ಸೂಡೋ ಲಿಂಗಾಯತರು

ಯಡಿಯೂರಪ್ಪ, ವಿಜಯೇಂದ್ರ, ಬಸವನಗೌಡ ಪಾಟೀಲ ಯತ್ನಾಳ, ಬಸವರಾಜ ಪಾಟೀಲ ಸೇಡಂ, ರೇಣುಕಾಚಾರ್ಯ, ಅರವಿಂದ ಬೆಲ್ಲದರಂತಹ ಸೂಡೋ (pseudo) ಲಿಂಗಾಯತರು, ರಾಜ್ಯದ ಎರಡು ಪ್ರಮುಖ ಮಠಗಳು, ಹಲವಾರು ‘ಕಾಂಜಿ ಪಿಂಜಿ’ ಸ್ವಾಮೀಜಿಗಳು ಆರ್‌ಎಸ್‌ಎಸ್‌ನ ಜೀತದಾಳಾಗಿದ್ದಾರೆ.

ಬೆಂಗಳೂರು

ಬ್ರಾಹ್ಮಣ್ಯವು ೧೨ನೆಯ ಶತಮಾನದಿಂದಲೂ ಬಸವ ಸಿದ್ಧಾಂತವನ್ನು, ಬಸವ ಮೌಲ್ಯವನ್ನು ನಾಶ ಮಾಡುವ ಪ್ರಯತ್ನ ನಡೆಸುತ್ತಲೇ ಬಂದಿದೆ. ಈಗಲೂ ಬ್ರಾಹ್ಮಣ್ಯವು ಲಿಂಗಾಯತವನ್ನು ಹತ್ತಿಕ್ಕಲೂ ಪ್ರಯತ್ನಸುತ್ತಿದೆ.

ಯಾವ ಶಕ್ತಿಗಳು ೧೨ನೆಯ ಶತಮಾನದಲ್ಲಿ ಹರಳಯ್ಯನ ಮಗ ಮತ್ತು ಮದುವಯ್ಯನ ಮಗಳ ನಡುವಿನ ಮದುವೆಗೆ ಸಂಬಂಧಿಸಿದಂತೆ ನಡೆದ ಕ್ರಾಂತಿಯ ಸಂದರ್ಭದಲ್ಲಿ ಬಸವಣ್ಣನವರು ಕಲ್ಯಾಣವನ್ನು ತೊರೆಯುವಂತೆ ಮಾಡಿದ್ದವೋ ಅವೇ ಶಕ್ತಿಗಳೇ ಇಂದು ಬಸವಣ್ಣನವರು ಸ್ಥಾಪಿಸಿರುವ ಲಿಂಗಾಯತವನ್ನು ಹತ್ತಿಕ್ಕಲು-ನಾಶ ಮಾಡಲು ಪ್ರಯತ್ನಸುತ್ತಿವೆ. ಈ ಒಂದು ಹೀನ ಕಾರ್ಯಕ್ಕೆ ದಾರಿ ತಪ್ಪಿದ – ಬ್ರಾಹ್ಮಣ್ಯವನ್ನು ಒಪ್ಪಿಕೊಂಡ ಕೆಲವು ಲಿಂಗಾಯತ ಸ್ವಾಮಿಗಳನ್ನು ಹಾಗೂ ಬಸವ-ವಿರೋಧಿ ಕುಂಕುಮಧಾರಿ ಲಿಂಗಾಯತ ರಾಜಕೀಯ ಮುಖಂಡರನ್ನು ಬಳಸಿಕೊಂಡು ಲಿಂಗಾಯತವನ್ನು ಮಣಿಸವ ಕಾರ್ಯವನ್ನು ಬ್ರಾಹ್ಮಣ್ಯವು ನಡೆಸುತ್ತಿದೆ. ಈ ಕಾರ್ಯದಲ್ಲಿ ಕರ್ನಾಟಕದ ಎರಡು ಪ್ರಮುಖ ಮಠಗಳು ಶಾಮೀಲಾಗಿವೆ.

ಆಂತರಿಕ ಶತ್ರುಗಳು

ಬಸವಣ್ಣನವರ ಕರ್ಮಭೂಮಿಯಾಗಿದ್ದ ಕಲಬುರಗಿ ಪದೇಶವನ್ನು “ಹನುಮನ ನಾಡ”ನ್ನಾಗಿ ಮಾಡಲು ಪ್ರಯತ್ನಸುತ್ತಿರುವ ಬಸವರಾಜ ಪಾಟೀಲ್ ಸೇಡಂ ಅವರು ಬಸವ-ವಿರೋಧಿ ಬ್ರಾಹ್ಮಣ್ಯದ ಹಿಂದಿನ ಶಕ್ತಿಯಾಗಿದ್ದಾರೆ. ಶಿವಮೊಗ್ಗ ಭಾಗದಲ್ಲಿ ಕುಂಕುಮಧಾರಿ – ಮಾತುಮಾತಿಗೆ ಹೋಮ-ಹವನ ಮಾಡುವ ರಾಜ್ಯದ ಮಾಜಿ ಮುಖ್ಯಮಂತ್ರಿಯವರಿದ್ದಾರೆ. ಅವರ ಕಟ್ಟಾ ಹಿಂಬಾಲಕ ರೇಣುಕಾಚಾರ್ಯರಿದ್ದಾರೆ. ಧಾರವಾಡ ಭಾಗದಲ್ಲಿ ವಿಭೂತಿಧಾರಣೆ ಮಾಡಿಕೊಂಡ ರಾಜಕೀಯ ಮುಖಂಡರು ಬ್ರಾಹ್ಮಣ್ಯದ ದೊಡ್ಡ ಶಕ್ತಿಯಾಗಿದ್ದಾರೆ.

ಹರಿಹರ ಭಾಗದಲ್ಲಿ ಬಸವಣ್ಣನನ್ನು ಸೇರಿಸಿಕೊಂಡು ಲಿಂಗಾಯತರು ಹಿಂದೂಗಳು, ಲಿಂಗಾಯತಕ್ಕೂ ವೇದಾಗಮಶಾಸ್ತ ಪುರಾಣ ಪ್ರಣಾಳಿಕೆಯೂ ವ್ಯತ್ಯಾಸವೇನಿಲ್ಲ ಎಂದು ಹೇಳುತ್ತಿರುವ ಲಿಂಗಾಯತ ‘ಸ್ವಾಮೀಜಿ’ ಬ್ರಾಹ್ಮಣ್ಯದ ಶಕ್ತಿಯಾಗಿದ್ದಾರೆ. ಬಸವಣ್ಣನವರ ಜನ್ಮ ಕ್ಷೇತ್ರವಾಗಿರುವ ವಿಜಯಪುರ ಭಾಗದಲ್ಲಿ ಬಸವಣ್ಣನನ್ನು “ಹೊಳೆಗೆ ಹಾರಿಕೊಂಡರು” ಎಂದು ದೂಷಿಸುವ ಬಸವನ ಗೌಡ ಪಾಟೀಲ್ ಯತ್ನಾಳ ಅವರು ಪುರೋಹಿತಶಾಹಿಯ ಹಿಂದಿನ ಶಕ್ತಿಯಾಗಿದ್ದಾರೆ.

ಇವರೆಲ್ಲರನ್ನೂ ಸಾಕುತ್ತಿರುವುದು, ಬೆಳೆಸುತ್ತಿರುವ ಅಖಿಲ ಭಾರತ ಸಾಂಸ್ಕೃತಿಕ ಸಂಘಟನೆ ಎಂದು ಹೇಳಿಕೊಳ್ಳುತ್ತಿರುವ ಬ್ರಾಹ್ಮಣ್ಯದ ಗುತ್ತಿಗೆ ಹಿಡಿದಿರುವ ಸಂಸ್ಥೆಯ ಕಾರ್ಯಕರ್ತರು. ಈ ಸಂಘಟನೆಯು ಬಸವ-ವಿರೋಧಿ ಲಿಂಗಾಯತರಿಗೆ ಬಸವ ಪ್ರಣೀತ ಲಿಂಗಾಯತವನ್ನು ನಾಶ ಮಾಡುವ ಬಗ್ಗೆ ತರಬೇತಿ ನೀಡುತ್ತಿದೆ ಮತ್ತು ಬ್ರೈನ್ ವಾಶ್ ಮಾಡುತ್ತಿದೆ. ಇವರೆಲ್ಲರೂ ಬಸವಣ್ಣನನ್ನು, ಬಸವ ಸಿದ್ಧಾಂತವನ್ನು “ಕೊಲ್ಲುತ್ತಿದ್ದಾರೆ”.

ಆರ್‌ಎಸ್‌ಎಸ್ ಯತ್ನಾಳರ ಗುರುಕುಲ

ಒಂದು ಸಮುದಾಯದ ಬಗ್ಗೆ, ಒಂದು ಪ್ರಬಲ ಸಮುದಾಯದ ಬಗ್ಗೆ, ಅದರ ಧಾರ್ಮಿಕ ಶ್ತದ್ಧಾ ಬಿಂದುವಿನ ಬಗ್ಗೆ ಬಸವಣ್ಣನವರ ಬಗ್ಗೆ ಹಗರವಾಗಿ-ಹೀನಾಯವಾಗಿ, ಅಪಮಾನಕರವಾಗಿ, ಅಸಹ್ಯಕರವಾಗಿ ಮಾತನಾಡಿದರೂ ಭಾರತೀಯ ಸಂಸ್ಕೃತಿಯ ಸಂರಕ್ಷಣೆ ಮಾಡುವ ಸಂಘಟನೆ ಎಂದು ತನನ್ನು ತಾನು ಕರೆದುಕೊಳ್ಳುತ್ತಿರುವ ಆರ್‌ಎಸ್‌ಎಸ್ ಬಾಯಿಬಿಡುತ್ತಿಲ್ಲ. ಬಸವಣ್ಣ ಹೊಳೆಗೆ ಹಾರಿ ಪ್ರಾಣ ಬಿಟ್ಟ ಎಂಬ ಪಾಠವನ್ನು ಬಸವನ ಗೌಡ ಪಾಟೀಲ ಯತ್ನಾಳ ಅವರಿಗೆ ಹೇಳಿಕೊಟ್ಟಿರುವುದೇ ಈ ಆರ್‌ಎಸ್‌ಎಸ್.

ಬಸವ ಸಿದ್ಧಾಂತವನ್ನು ವಿಕೃತಗೊಳಿಸುವ ಉದ್ದೇಶದಿಂದಲೇ ಸಂಘ ಪರಿವಾರ ಸಿದ್ಧಪಡಿಸಿ ಪ್ರಕಟಿಸಿರುವ “ವಚನ ದರ್ಶನ” ಎನ್ನುವ ಕೃತಿಯು ಲಿಂಗಾಯತವನ್ನು ಮಣಿಸುವ ಮಹತ್ ದುಷ್ಟ ಕಾರ್ಯದ ಒಂದು ಭಾಗವೇ ಆಗಿದೆ. ಈಗ ಆರ್‌ಎಸ್‌ಎಸ್ ಸಂಘಟನೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯು ಕರ್ನಾಟಕಲದ ಲಿಂಗಾಯತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಗ್‌ರಾಜ್‌ನಲ್ಲಿ ೨೦೨೫ರ ಜನವರಿಯಲ್ಲಿ ನಡೆಯುವ ಕುಂಭಮೇಳಕ್ಕೆ ಕರೆತರಬೇಕೆಂದು ಹೇಳಿದ್ದಾರೆ-ಆದೇಶಿಸಿದ್ದಾರೆ ಎಂಬ ಸುದ್ಧಿಯು ಪತ್ರಿಕೆಗಳಲ್ಲಿ ವರದಿಯಾಗುತ್ತಿದೆ. ಲಿಂಗಾಯತರಿಗೂ ಕುಂಭಮೇಳಕ್ಕೂ ಯಾವತ್ತೂ, ಯಾವುದೇ ರೀತಿಯ ಸಂಬಂಧವಿಲ್ಲ. ಆದರೂ ಲಿಂಗಾಯತರನ್ನು ಬಸವ-ವಿರೋಧಿಗಳನ್ನಾಗಿ ಮಾಡುವ ಬೃಹತ್ ಯೋಜನೆಯ ಒಂದು ಭಾಗ ಕುಂಭಮೇಳಕ್ಕೆ ಲಿಂಗಾತಯರಿಗೆ ಆಹ್ವಾನ.

ಇದಕ್ಕೆ ಯಾವ ಸಂಕೋಚ-ನಾಚಿಕೆ-ಹೇಸಿಗೆ ಇಲ್ಲದೆ ಕರ್ನಾಟಕದ ಎರಡು ಪ್ರಮುಖ ಮಠಗಳು ಬೆನ್ನೆಲುಬಾಗಿ ನಿಲ್ಲುತ್ತವೆ ಎಂಬುದರ ಬಗ್ಗೆ ಯಾವ ಅನುಮಾನವೂ ಬೇಡ. ಇನ್ನು ಕೆಲವು “ಕಾಂಜಿ ಪಿಂಜಿ” ಲಿಂಗಾಯತ ಮಠಗಳು ಅದರ ಸ್ವಾಮೀಜಿಗಳು ಕುಂಭಮೇಳಕ್ಕೆ ಈಗಾಗಲೆ ಹೊರಟಿರುವ ಸಾಧ್ಯತೆಯಿದೆ. ಹಡಪದ ಅಪ್ಪಣ್ಣ ಶರಣರು ಕುಂಭಮೇಳದಂತಹ ತೀರ್ಥ ಯಾತ್ರೆ ಲಿಂಗ ದರ್ಶನ ಬಗ್ಗೆ ಏನು ಹೇಳಿದ್ದಾರೆ ನೋಡಿ:

ತೀರ್ಥ ಯಾತ್ರೆ ಲಿಂಗ ದರುಶನಕ್ಕೆ ಹೋಗಿ
ಕರ್ಮವ ಹಿಂಗಿಸಿಕೊಂಬೆನೆಂಬ ಮಾತ ಕೇಳಲಾಗದು
ಅದೇನು ಕಾರಣವೆಂದಡೆ
ತೀರ್ಥಯಾವುದು, ಯಾತ್ರೆಯಾವುದು, ಲಿಂಗವಾವುದು ಬಲ್ಲರೆ ನೀವು ಹೇಳಿರೆ
ಮಹಾಘನ ಗುರುಪಾದತೀರ್ಥದಿಂದ ವೆಗ್ಗಳ ತೀರ್ಥ ಉಂಟೆ?
ಜಗತ್ಪಾವನ ಜಂಗಮ ದರುಶನದಿಂದ ಬೇರೆ ಯಾತ್ರೆ ಉಂಟೆ?
ಇಂಗಿತವನರಿದ ಬಳಿಕ ತನ್ನ ಅಂಗದ ಮೇಲಿರ್ಪ ಲಿಂಗವಲ್ಲದೆ ಬೇರೆ ಲಿಂಗ ಉಂಟೆ?
ಇದನರಿಯದೆ ಇನ್ನು ತೀರ್ಥಯಾತ್ರೆ ಲಿಂಗ ದರುಶನ ಉಂಟೆAಬ
ಅಂಗಹೀನರ ಮುಖವ ನೊಡಲಾಗದು ಬಸವಪ್ರಿಯ ಕೂಡಲಚೆನ್ನಬಸವಣ್ಣ

ಕುಂಭಮೇಳ

ಈ ವಚನ ನಿಯಮವನ್ನು ಪಾಲಿಸುವುದು ಲಿಂಗಾಯತದ ಕರ್ತವ್ಯ. ಇಷ್ಟಾದ ಮೇಲೂ ಕುಂಭಮೇಳಕ್ಕೆ ಹೋದರೆ ಅಲ್ಲಪ್ರಭುಗಳು ಗುಡಿ ಸಂಸ್ಕೃತಿಯ ಬಗ್ಗೆ ಹೇಳಿದಂತೆ ಅವರಿಗೆ “ನಾಯಕ ನರಕ” ತಪ್ಪಿದ್ದಲ್ಲ. ತೀರ್ಥಸ್ನಾನದಿಂದ ಪಾಪ ಪರಿಹಾರವಾಗುತ್ತದೆ ಎಂಬುದು ತಟ್ಟೆಕಾಸಿನವರ ಒಂದು ಹುನ್ನಾರ. ತ್ರ‍್ರಿವೇಣಿ ಸಂಗಮದಲ್ಲಿನ ಸ್ನಾನದಿಂದ “ಪುಣ್ಯ”ಬರುತ್ತದೆ ಎಂಬುದು ಒಂದು ಭ್ರಮೆ. ಕುಂಭಮೇಳ ಎನ್ನುವುದೇ ಒಂದು ಮೌಢ್ಯ, ಒಂದು ಕಂದಾಚಾರ. ಬಸವಣ್ಣನವರು ಇದರ ಬಗ್ಗೆ ಹೀಗೆ ವ್ಯಂಗ್ಯವಾಡಿದ್ದಾರೆ.

ಕಣ್ಣ ಮುಚ್ಚಿ ಕನ್ನಡಿಯ ತೋರುವಂತೆ ಇರುಳು ಹಗಲಿನ ನಿದ್ರೆ ಸಾಲದೆ?
ಬೆರಳನೆಣಿಸಿ ಪರಮಾರ್ಥವ ಹಡೆವೆಡೆ ಚೋದ್ಯವಲ್ಲವೆ ಹೇಳಾ!
ಮೂಗಮುಚ್ಚು ಮುಕ್ತುಯ ಬಯಸುವ ನಾಚಿಕೆಯಲ್ಲದವರ ನಾನೇನೆಂಬೆ
ಕೂಡಲ ಸಂಗಮದೇವಾ

ಬಸವ ಪ್ರಣಾಳಿಕೆಯಲ್ಲಿ ಪರಮಾರ್ಥವು ಮೂಗುಮುಚ್ಚಿ ಬೆರಳ ಎಣಿಸುವುದರಿಂದ ಬರುವುದಿಲ್ಲ. ಅದು ಕಾಯಕದಿಂದ ಬರುತ್ತದೆ. ಕುಂಭಮೇಳಕ್ಕೆ ಆಹ್ವಾನ ನೀಡುತ್ತಿರುವವರಿಗೆ ಮತ್ತು ಅದಕ್ಕೆ ಬೆಂಬಲ ನೀಡುತ್ತಿರುವ ಆರ್‌ಎಸ್‌ಎಸ್‌ಗೆ ದುಡಿಮೆಯಲ್ಲಿ, ಬೆವರಿನಲ್ಲಿ, ಕಾಯಕದಲ್ಲಿ ನಂಬಿಕೆಯಿಲ್ಲ.

ಮಾದಾರ ಧೂಳಯ್ಯನವರು ದೇವರನ್ನು ಎಲ್ಲಿ ಕಾಣುತ್ತಾರೆ?
“ಅಟ್ಟೆಯ ಚುಚ್ಚುವ ಉಳಿಯ ಮೊನೆಯಲ್ಲಿ ಪ್ರತ್ಯಕ್ಷನಾದ ಪರಮೇಶ್ವರನ ಕಂಡು”

ಸೈದ್ಧಾಂತಿಕವಾಗಿ ಕುಂಭಮೇಳಕ್ಕೆ ಮಾದಾರ ಧೂಳಯ್ಯನವರಿಗೆ, ಮಾದಾರ ಚೆನ್ನಯ್ಯನವರಿಗೆ ಪ್ರವೇಶವಿಲ್ಲ. ಕೆಲವರಿಗೆ ಅಲ್ಲಿ ಪ್ರವೇಶ, ಕೆಲವರಿಗೆ ಪ್ರವೇಶವಿಲ್ಲ ಎಂಬುದು ಅಸ್ಪೃಶ್ಯತೆಯ ಆಚರಣೆಗೆ ಸಮ. ಬಸವನಗೌಡ ಪಾಟೀಲ ಯತ್ನಾಳ, ಬಸವರಾಜ ಪಾಟೀಲ ಸೇಡಂ, ರೇಣುಕಾಚಾರ್ಯ, ರಾಜ್ಯದ ಎರಡು ಪ್ರಮುಖ ಮಠಗಳು, ಬೆಲ್ಲದ ಕುಟುಂಬ, ವಿಜಯೇಂದ್ರ ಮುಂತಾದ ಸುಡೋ ಲಿಂಗಾಯತರೆಲ್ಲ ಆರ್‌ಎಸ್‌ಎಸ್‌ನ ಕೈಗೊಂಬೆಯಾಗಿದ್ದಾರೆ – ಜೀತದಾಳಾಗಿದ್ದಾರೆ.

ಬಸವ ದ್ರೋಹಿಗಳನ್ನು ಬಹಿಷ್ಕರಿಸಿ

ಇವರೆಲ್ಲರಿಗೂ ಪಾಠ ಕಲಿಸಬೇಕಾದರೆ ನಾವು ನೇರವಾಗಿ ಆರ್‌ಎಸ್‌ಎಸ್ ಟಾರ್ಗೆಟ್ ಮಾಡಿಕೊಳ್ಳಬೇಕು. ಲಿಂಗಾಯತ ಧರ್ಮವನ್ನು, ಬಸವ ಸಿದ್ಧಾಂತವನ್ನು ಭ್ರಷ್ಠಗೊಳಿಸುತ್ತಿರವ ಯತ್ನಾಳ, ಸೇಡಂ, ಬೆಲ್ಲದ, ಬಿಎಸ್‌ವೈ ಮುಂತಾದವರನ್ನೆಲ್ಲ ಬಹಿಷ್ಕರಿಸಬೇಕು. ಆರ್‌ಎಸ್‌ಎಸ್ ಜೊತೆಯಲ್ಲಿ ಲಿಂಗಾಯತರು ಯಾವುದೇ ಕಾರಣಕ್ಕೂ ಸಂಬಂಧ ಸಂಪರ್ಕ ಇಟ್ಟುಕೊಳ್ಳಬಾರದು.

ತೀರ್ಥಸ್ನಾದ ಬಗ್ಗೆ, ಗಂಗೆಯಲ್ಲಿ ಮೀಯುವುದರ ಬಗ್ಗೆ ಅಲ್ಲ,ಪ್ರಭುದೇವರು ಹೀಗೆ ಹೇಳಿದ್ದಾರೆ:
ಸುತ್ತಿ ಸುತ್ತಿ ಬಂದಡಿಲ್ಲ ಲಕ್ಷ ಗಂಗೆಯ ಮಿಂದಡಿಲ್ಲ
ತುಟ್ಟ ತುದಿಯ ಮೇರುಗಿರಿಯ ಮೆಟ್ಟಿ ಕೂಗಿದಡಿಲ್ಲ
ನಿತ್ಯ ನೇಮದಿಂದ ತನುವ ಮುಟ್ಟಿಕೊಂದಡಿಲ್ಲ
ನಿಚ್ಚಕ್ಕೆ ನಿತ್ಯ ತನುವ, ಅಂದಂದಿಗೆ ಅತ್ತಲಿತ್ತ ಹರಿವ ಮನವ
ಚಿತ್ತದಲ್ಲಿ ನಿಲಿಸಬಲ್ಲಡೆ
ಬಚ್ಚ ಬರಿಯ ಬೆಳಗು ಗುಹೇಶ್ವರನೆಂಬ ಲಿಂಗವು

ಲಿಂಗಾಯತರಿಗೆ ಯಾವ ಕುಂಭಮೇಳವೂ ಬೇಕಾಗಿಲ್ಲ. ಗಂಗೆಯಲ್ಲಿನ ಸ್ನಾನವೂ ಬೇಕಾಗಿಲ್ಲ. ಅದರಿಂದ ಪಾಪ ಪರಿಹಾರವಾಗುವುದಿಲ್ಲ; ಪುಣ್ಯ ಪ್ರಾಪ್ತವಾಗುವುದಿಲ್ಲ. ಇದರ ಬಗ್ಗೆ ಲಿಂಗಾಯತರು ಗಂಭೀರವಾಗಿ ಯೋಚಿಸಿ ಆರ್‌ಎಸ್‌ಎಸ್ ಒಡ್ಡುತ್ತಿರುವ ಖೆಡ್ಡಾಕ್ಕೆ ಬೀಳದಂತೆ ಎಚ್ಚರವಹಿಸಬೇಕು ಮತ್ತು ಲಿಂಗಾಯತರಲ್ಲೇ ಇರುವ ಬಸವ-ದ್ರೋಹಿ ಕುಂಕುಮಧಾರಿ ಮುಖಂಡರನ್ನು, ಬಸವ-ವಿರೋದಿ ಮಠಗಳನ್ನು ಬಹಿಷ್ಕರಿಸಬೇಕು.

Share This Article
6 Comments
  • “ಇದರ ಬಗ್ಗೆ ಲಿಂಗಾಯತರು ಗಂಭೀರವಾಗಿ ಯೋಚಿಸಿ ಆರ್‌ಎಸ್‌ಎಸ್ ಒಡ್ಡುತ್ತಿರುವ ಖೆಡ್ಡಾಕ್ಕೆ ಬೀಳದಂತೆ ಎಚ್ಚರವಹಿಸಬೇಕು ಮತ್ತು ಲಿಂಗಾಯತರಲ್ಲೇ ಇರುವ ಬಸವ-ದ್ರೋಹಿ ಕುಂಕುಮಧಾರಿ ಮುಖಂಡರನ್ನು, ಬಸವ-ವಿರೋದಿ ಮಠಗಳನ್ನು ಬಹಿಷ್ಕರಿಸಬೇಕು.”
    👆 ಸಾರ್ ಬಸವತತ್ವ ದ್ರೋಹಿ ರಾಜಕೀಯ ಮುಖಂಡರುಗಳನ್ನು ಪಕ್ಷಾತೀತವಾಗಿ ರಾಜಕೀಯವಾಗಿ ಬಹಿಷ್ಕರಿಸಬೇಕು. ಎಲ್ಲಾ ಬಸವಪರ ಸಂಘಟನೆಗಳು ಒಟ್ಟಾಗಿ ಮತ ಹಾಕದಂತೆ ಬಹಿಷ್ಕರಿಸಲು ಕರೆ ಕೊಡಬೇಕು.

  • ಲಿಂಗಾಯತರಲ್ಲಿ ಬಸವ ಪ್ರಜ್ಞೆ ಗಟ್ಟಿಯಾಗಬೇಕು
    ಲಿಂಗಾಯತ ಕೋಟಾದಲ್ಲಿ ಪಕ್ಷದ ಟಿಕೇಟ್ ಪಡೆದು
    ಲಿಂಗಾಯತರ ಮೂಲಕ ಲಿಂಗಾಯತ ಸಂಸ್ಕೃತಿಯ
    ಮೇಲೆ ದಾಳಿ ಮಾಡಿಸುತ್ತಿದ್ದಾರೆ. ತನ್ನ ಸ್ವಧರ್ಮವ
    ತಾನೆ ದ್ವೇಷಿಸುವ ಮಟ್ಟಕ್ಕೆ ಈ ಲಿಂಗಾಯತ ರಾಜಕಾರಣಿಗಳು ಇಳಿಯುತ್ತಾರೆ ಎಂಬುದನ್ನು
    ಜನಸಾಮಾನ್ಯ ಲಿಂಗಾಯತರು, ಮತದಾರ
    ಲಿಂಗಾಯತರು ಅರ್ಥ ಮಾಡಿಕೊಳ್ಳಬೇಕು
    ಯಾವ ಮನು ಸಿದ್ದಾಂತ ದ ಪಕ್ಷದ ವಿರುದ್ಧ ಸಿಡಿದೆದ್ದು
    ಪರ್ಯಾಯ ಲಿಂಗಾಯತ ಚಳುವಳಿ ಮೂಲಕ ಕನ್ನಡ ನಾಡಿಗೆ ಕನ್ನಡದ ಮೊಟ್ಟಮೊದಲು ಲಿಂಗಾಯತ ಧರ್ಮ ನೀಡಿದರು. ಅಂಥವರನ್ನು ಮರೆತು ಹಿಂದೂ ಧರ್ಮದ
    ಗುಲಾಂರಾಗಿದ್ದೇವೆ. ಈಗಲಾದರೂ ಈ ಗುಲಾಂದ
    ಸರಪಳಿ ಕಳೆದು ಕೊಂಡು ಮನು ಸಿದ್ದಾಂತ ಪಕ್ಷವನ್ನು
    ಹೊಡೆದೋಡಿಸುವ ರಾಜಕೀಯ ಬಹಿಷ್ಕಾರ.ಹಾಕಿದಾಗ
    ಮಾತ್ರ ಈ ಲಿಂಗಾಯತ ರಾಜಕಾರಣಿಗಳು, ಇವರನ್ನು
    ಪೂಜಿಸುವ ಮಠಾಧೀಶರು ಸರಿದಾರಿಗೆ ಬರುತ್ತಾರೆ ಇಲ್ಲ
    ವೆಂದರೆ ಈ ಧರ್ಮವನ್ನು ನುಂಗಿ ಈ ಬಸವ ಮೌಲ್ಯವನ್ನು
    ಸಂಪೂರ್ಣ ನಾಶ ಮಾಡುತ್ತಾರೆ. ಶರಣ ಟಿ. ಆರ್. ಚಂದ್ರಶೇಖರ ಸರ್ ಹೇಳಿದ ಪ್ರತಿಯೊಂದು ಮಾತು
    ಬಸವ ಮೌಲ್ಯದ ಕಾಳಜಿಯ ಮಾತಾಗಿದೆ.

  • ಧರ್ಮ ವಿರೋದಿ ಮಠಾಧೀಶರು ಮತ್ತು ರಾಜಕಾರಣಿಗಳನ್ನು ದೂರ ಇಟ್ಟು ಧರ್ಮಿಯರನ್ನು ಜಾಗ್ರತಿ ಗೊಳಿಸಬೇಕಿದೆ. ಜಾ.ಲಿ. ಮಹಾಸಭೆ ಬಸವಕಲ್ಯಾಣದಲ್ಲಿ ರಾಜಕೀಯೇತರವಾಗಿ ಲಿಂಗಾಯತ ಮಹಾದಿವೇಶನ ನಡೆಸಿ ಯಶಸ್ವಿಗೊಂಡಿದಿದು ಎಲ್ಲರಿಗೂ ತಿಳಿದ ವಿಚಾರ. ಲಿಂಗಾಯತರು ಜಾಗೃತರಾಗುತ್ತಿರುವುದಕ್ಕೆ ಇದೇ ಸಾಕ್ಷಿ. ಈ ಬಗ್ಗೆ ಲಿಂಗಾಯತ ಧರ್ಮ ಪರ ಹೋರಾಡುವ ಮುಖಂಡರು ಆಸಕ್ತಿ ವಹಿಸಿ ಸೂಕ್ತ ಕಾರ್ಯಕ್ರಮಗಳನ್ನು ರೂಪಿಸಿ ಸಮುದಾಯವನ್ನು ಎಚ್ಚರಗೊಳಿಸಬೇಕು.

  • ಲಿಂಗಾಯತರು ಬಸವ ಪ್ರಜ್ಞೆಯನ್ನು ಬೆಳೆಸಿಕೊಂಡು ಯಾವಾಗಲೂ ಎಚ್ಚರವಿರಬೇಕು………
    ತಮ್ಮ ತಮ್ಮ ಕುಟುಂಬದವರಿಗೂ ಬಸವ ಪ್ರಜ್ಞೆಯನ್ನು ಬೆಳೆಸಿ ಉಳಿಸಿ ,ಬಸವ ಬಳ್ಳಿಯನ್ನು ಬೆಳೆಸಬೇಕು. . . . . 🙏🙏

  • ಲಿಂಗಾಯತ ತತ್ವ ನಿತ್ಯಸತ್ಯ ಸಿದ್ಧಾಂತ. ಲಿಂಗಾಯತ ಸಿದ್ಧಾಂತ ‌ಜಗತ್ತಿನ ಶಕ್ತಿ. ವಿಶ್ವದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಲಿಂಗಾಯತ ಹಾಳುಗೆಡುವಲು ಸಾಧ್ಯವಿಲ್ಲ. ಹಾಳು ಮಾಡಲು ಪ್ರಯತ್ನ ಮಾಡಿದಂತೆ ಅದು ಹೆಚ್ಚು ಹೆಚ್ಚು ಪಸರಿಸುತ್ತಿದೆ. ಶರಣರೇ‌ ವಿವರವಾಗದ ಮನಮುಟ್ಟುವ ಬರಹ. ಶರಣು ಶರಣಾರ್ಥಿಗಳು

Leave a Reply

Your email address will not be published. Required fields are marked *

ಲೇಖಕರು ಅರ್ಥಶಾಸ್ತ್ರಜ್ಞರು ಮತ್ತು ಬಸವ ತತ್ವ ಚಿಂತಕರು