ಬೆಂಗಳೂರು
ಬಸವ ಸಮಿತಿ ಪ್ರಕಟಿಸಿರುವ ಫ್ರೆಂಚ್ ಭಾಷೆಯ ಪುಸ್ತಕ ‘ವಚನ’ ಫ್ರಾನ್ಸ್ ದೇಶದ ಪ್ರಸಿದ್ಧ ಸಾಂಸ್ಕೃತಿಕ ಸಂಘಟನೆ ಅಲಯನ್ಸ್ ಫ್ರಾಂಚೈಸೈನ ಸಹಯೋಗದಲ್ಲಿ ಇತ್ತೀಚೆಗೆ ಲೋಕಾರ್ಪಣೆಯಾಯಿತು.
ಬಸವಣ್ಣನವರ 2,500 ವಚನಗಳನ್ನು ಫ್ರೆಂಚ್ ಭಾಷೆಗೆ ತಂದಿರುವ ಪುಸ್ತಕವನ್ನು ಫ್ರಾನ್ಸಿನ ಕಾನ್ಸುಲ್ ಜನರಲ್ ಮಾರ್ಕ್ ಲ್ಯಾಮಿ ಬಿಡುಗಡೆ ಮಾಡಿದರು. ವಚನಗಳನ್ನು ಬನಾರಸ್ ಹಿಂದೂ ವಿಶ್ವವಿದ್ಯಾಲಯ ನೆರವಿನಿಂದ ಭಾಷಾಂತರ ಮಾಡಲಾಗಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಬಸವ ಸಮಿತಿಯ ಅಧ್ಯಕ್ಷ ಅರವಿಂದ್ ಜತ್ತಿ ಫ್ರೆಂಚ್ ಭಾಷೆ ಮಾತನಾಡುವ ದೇಶಗಳಿಗೆ ಬಸವಣ್ಣವರನ್ನು ಪರಿಚಯ ಮಾಡಿಕೊಡಲು ಪುಸ್ತಕವನ್ನು ರೂಪಿಸಲಾಗಿದೆ ಎಂದರು. ಇದು ಕೇವಲ ಪುಸ್ತಕ ಬಿಡುಗಡೆಯಲ್ಲ, ಇದೊಂದು ಸಾಂಸ್ಕೃತಿಕ ಸೇತುವೆ. ಬಸವೇಶ್ವರರ ವಚನಗಳನ್ನು ಭೌಗೋಳಿಕ ಗಡಿ ದಾಟಿಸುವ ಪ್ರಯತ್ನ ಎಂದು ಹೇಳಿದರು.
ಈ ಪುಸ್ತಕವು ಮೊದಲು ಭಾರತದಲ್ಲಿರುವ ಎಲ್ಲಾ 23 ಅಲಯನ್ಸ್ ಫ್ರಾಂಚೈಸ್ ಗ್ರಂಥಾಲಯಗಳಲ್ಲಿ ಲಭ್ಯವಿರುತ್ತದೆ. ನಂತರ ಜಗತ್ತಿನಾದ್ಯಂತ ಇರುವ ಅಲಯನ್ಸ್ ಫ್ರಾಂಚೈಸಿನ ಕೇಂದ್ರಗಳಲ್ಲಿಯೂ ಲಭ್ಯಗೊಳಿಸಲು ಪ್ರಯತ್ನಿಸಲಾಗುವುದು.
ಕಾರ್ಯಕ್ರಮದ ಅಲಯನ್ಸ್ ಫ್ರಾಂಚೈಸೈನ ಮುಖ್ಯಸ್ಥ ಡಾ. ಚಿನ್ಮಯ ಪಿ ಚಿಗಟೇರಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಬಸವ ಸಮಿತಿ ಇದುವರೆಗೆ ವಚನಗಳನ್ನು 27 ಭಾರತೀಯ ಮತ್ತು ಐದು ವಿದೇಶಿ ಭಾಷೆಗಳಿಗೆ (ಪರ್ಷಿಯನ್, ಅರೇಬಿಕ್, ನೇಪಾಳಿ, ಜರ್ಮನ್ ಮತ್ತು ಈಗ ಫ್ರೆಂಚ್) ಅನುವಾದಿಸಿದೆ.
ಅನುವಾದ ಕಾರ್ಯದ ಎರಡನೇ ಹಂತವು ರಾಜಸ್ಥಾನಿ, ಗುಜರಾತಿ, ಸಿಂಧಿ, ಒರಿಯಾ, ಭೋಜ್ಪುರಿ, ಅಸ್ಸಾಮಿ, ಸಂತಾಲಿ, ಮೈಥಿಲಿ, ಕಾಶ್ಮೀರಿ, ಕೊಡವ, ಕೊಂಕಣಿ, ತುಳು ಮತ್ತು ಮಲಯಾಳಂ ಭಾಷೆಗಳಲ್ಲಿ ಪೂರ್ಣಗೊಂಡಿದೆ.
ವಚನ ಸಾಹಿತ್ಯದ ಅನುವಾದವನ್ನು ಚೈನೀಸ್, ಜರ್ಮನ್, ಜಪಾನೀಸ್, ಸ್ಪ್ಯಾನಿಷ್ ಮತ್ತು ಉಜ್ಬೆಕ್ ಭಾಷೆಗಳಿಗೂ ಬಹುತೇಕ ಪೂರ್ಣಗೊಳಿಸಿದ್ದೇವೆ ಎಂದು ಜತ್ತಿ ಹೇಳಿದರು.
ಅದ್ಭುತ ಕಾರ್ಯ ಮಾಡುತ್ತಿರುವ ಶರಣ ಅರವಿಂದ ಜತ್ತಿ ಅಣ್ಣನವರಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಗೌರವಪೂರ್ವಕ ಶರಣುಶರಣಾರ್ಥಿಗಳು.
fine.
ಪ್ರಸ್ತುತ ಜಗತ್ತಿಗೆ ಬಸವಣ್ಣನವರ ತತ್ವದ ಬಲ ಬೇಕಾಗಿದೆ. ಹಾಗಾಗಿ ವಿಶ್ವಕ್ಕೆ ಬಸವಣ್ಣನವರ ಮತ್ತು ಬಸವಾದಿಪ್ರಮಥರ ವಿಚಾರ ಮುಟ್ಟಿಸಲು ಬಾಷೆ ಬಹಳ ಅವಶ್ಯಕವಾಗಿತ್ತು ಇಂತಹ ಸಂದರ್ಭದಲ್ಲಿ ಈ ಮಹತ್ವದ ಕಾರ್ಯ ಮಾಡುತ್ತಿರುವ ಅರವಿಂದ ಜತ್ತಿ ಅಣ್ಣನವರಿಗೂ ಅವರ ಜೊತೆ ಕೈಜೋಡಿಸಿದವರಿಗೂ ಅನಂತ ಶರಣು .ಈ ವಿಷಯವನ್ನ ಎಲ್ಲರಿಗೂ ತಲುಪಿಸಿದ ಬಸವ ಮೀಡಿಯಾಕ್ಕೂ ಅನಂತ ಶರಣು
ಬಸವಣ್ಣನವರನ್ನು ಫ್ರಾನ್ಸಿನಲ್ಲಿ ಪರಿಚಯಿಸಲು ಮಾಡಿದ ಈ ಪ್ರಯತ್ನ ತುಂಬಾ ಪ್ರಶಂಷನೆಯ ನಿಜವಾಗಲೂ ಜಗಜ್ಯೋತಿ ಬಸವೇಶ್ವರರ ಪರಿಚಯ ಫ್ರಾನ್ಸ್ ನಲ್ಲಿ ಕೂಡ ಆಗಲಿ ಎನ್ನುವ ಕಾರ್ಯ ಒಳ್ಳೆಯದಾಗಿದೆ ಈ ಕಾರ್ಯದಲ್ಲಿ ಭಾಗವಹಿಸಿದ ಎಲ್ಲರಿಗೂ ತುಂಬು ಹೃದಯದ ಅಭಿನಂದನೆಗಳು.
ಜಗತ್ತಿಗೆ ಬಸವಣ್ಣನವರ ವಚನಗಳನ್ನು ಪ್ರಸಾರಗೊಳಿಸುವ ಅತ್ಯದ್ಭುತ ಕಾರ್ಯಗಳನ್ನು ಕೈಗೊಂಡಿರುವ ನಮ್ಮೆಲ್ಲರ ಅಣ್ಣ ಶ್ರೀ ಅರವಿಂದ ಜತ್ತಿ ಶರಣರಿಗೆ ಮತ್ತು ಬಸವ ಸಮಿತಿಯ ಎಲ್ಲ ಸದಸ್ಯರುಗಳಿಗೆ ಭಕ್ತಿಯ ಶರಣು ಶರಣಾರ್ಥಿಗಳು 🌹🌹🙏🙏🇮🇳🙏🙏 .
👏👌
ಈ ಮಹತ್ವದ ಕಾರ್ಯಕ್ರಮವನ್ನು ನಮ್ಮ ಬಸವ ಸಮಿತಿಯಿಂದ ನಡೆಯುತ್ತಿದೆ. ಅರವಿಂದ ಜತ್ತಿಯವರಿಗೂ ಹಾಗು ಈಮಹತ್ವದ ಕೖ ಜೋಡಿಸಿದ ಎಲ್ಲ ಮಹನೀಯರಿಗೂ ಶರಣುಶರಣಾರ್ಥಿಗಳು.
ಸಾರ್ಥಕ ಕೆಲಸ ಶರಣು ಶರಣಾರ್ಥಿಗಳು ಸರ್.
ಅದಕ್ಕೆ ಹೇಳುವುದು ಬಸವಣ್ಣನವರು ಕರ್ನಾಟಕ, ಮತ್ತು ಭಾರತಕ್ಕೆ ಅಷ್ಟೇ ಗುರು ಅಲ್ಲ. ಅವರು ಇಡೀ ವಿಶ್ವಕ್ಕೆ ಗುರು. ಜತ್ತಿ ಸಾಹೇಬರಿಗೆ ಅಭಿನಂದನೆಗಳು ಸರ್, ಸಾಧ್ಯವಾದಷ್ಟು ಭಾರತದ ಎಲ್ಲಾ ರಾಜ್ಯಗಳಲ್ಲಿ ಬಸವಣ್ಣನವರ ಪುತ್ಥಳಿ ಮತ್ತು ಪೊಟೋ ಅನಾವರಣ ಆಗಬೇಕು ಅಂತ ನನ್ನ ಭಾವನೆ
fine.
It’s very amazing to translated in french language. Hat’s off