ಧಾರವಾಡ:
ಸ್ವರಸಾಮ್ರಾಟ ಪಂಡಿತ್ ಬಸವರಾಜ ರಾಜಗುರು ಅವರ ಸ್ಮರಣೆಯಲ್ಲಿ ”ವಚನ ಸಂಗೀತೋತ್ಸವ 2025”, ಧಾರವಾಡದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ನವೆಂಬರ್ 22 ಹಾಗೂ 23ರಂದು ಜರುಗಲಿದೆ.
ಸ್ವರಸಾಮ್ರಾಟ ಪಂ. ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಧಾರವಾಡ ಆಶ್ರಯದಲ್ಲಿ ನಡೆಯುವ ಸಂಗೀತೋತ್ಸವದ 22 ರಂದು ರೇಶ್ಮಾ ಭಟ್ ಬೆಂಗಳೂರು, ಬಸವರಾಜ ಭಂಟನೂರ ಯಾದಗಿರಿ, ಶಂಕರ ಹೂಗಾರ ಕಲಬುರ್ಗಿ, ಸಿದ್ದೇಂದ್ರಕುಮಾರ ಹಿರೇಮಠ ತುಮಕೂರು ಇವರಿಂದ ವಚನ ಸಂಗೀತ ನಡೆಯಲಿದೆ.
23ರಂದು ಮಾಲಾಶ್ರೀ ಕಣವಿ ಬೆಂಗಳೂರು, ಕುಮಾರ ಮರಡೂರ ಧಾರವಾಡ, ಆನಂದಕುಮಾರ ಕಂಬಳಿಹಾಳ ಮೈಸೂರು, ಅನಿರುದ್ಧ ಐತಾಳ ಬೆಂಗಳೂರು ಇವರಿಂದ ವಚನ ಸಂಗೀತ ನಡೆಯಲಿದೆ.

ವಚನ ಗಾಯನ ಪಂ. ಬಸವರಾಜ ರಾಜಗುರು ಅವರಿಗೆ ಪ್ರಿಯವಾಗಿತ್ತು. ಅವರು ವಚನ ಸಂಗೀತದ ಮೂಲಕ ವಚನ ಸಾಹಿತ್ಯದ ಹಿರಿಮೆಯನ್ನು ಪಸರಿಸಿದವರು. ಕರ್ನಾಟಕದಲ್ಲಿ ವಚನ ಸಂಗೀತಕ್ಕೆ ಇಂದು ಪ್ರಾಮುಖ್ಯತೆ ದೊರೆತಿರುವುದಕ್ಕೆ ಪಂ. ಬಸವರಾಜ ರಾಜಗುರು ಅವರ ಕೊಡುಗೆ ಇರುವುದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ.

