ಬಸವತತ್ವದಲ್ಲಿ ಇರುವುದು ಹಿಂದುತ್ವವಲ್ಲ ಬಂಧುತ್ವ
ದಾವಣಗೆರೆ
ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಡಿ.ಎ.ಉಪಾಧ್ಯ ಎಂಬ ಹೊಸ ಲಿಂಗಾಯತ ವಿರೋಧಿ ಬರೆದಿರುವ ‘ಬಸವಶೈವದಲ್ಲಿ ಹಿಂದುತ್ವ’ ಎಂಬ ಪುಸ್ತಕ ಬಿಡುಗಡೆ ಮಾಡಿದ್ದಾರೆ. ಯಥಾಪ್ರಕಾರ ಇದಕ್ಕೆ ಜೊತೆಯಾಗಿ ನಿಂತವರು ಲಿಂಗಾಯತ ಧರ್ಮದಲ್ಲಿ ಹುಟ್ಟಿರುವ ಸನಾತನಿಗಳ ಗುಲಾಮರೇ ಎಂಬುದನ್ನು ಬೇರೆ ಹೇಳಬೇಕಾಗಿಲ್ಲ.

ಉಪಾಧ್ಯ ಲಿಂಗಪೂಜೆ ಬಸವಪೂರ್ವದಲ್ಲಿ ಇತ್ತು ಎಂದು ಹೇಳಿದ್ದಾರೆ. ಆದರೆ ಅದು ಸ್ಥಾವರ ಲಿಂಗಪೂಜೆಯಾಗಿತ್ತು ಎನ್ನುವುದು ಸತ್ಯ.
ಇಷ್ಟಲಿಂಗ ಬಸವಣ್ಣನವರ ಸಂಶೋಧನೆ. ಹಾಗಾಗಿ ಇಷ್ಟಲಿಂಗ ಪೂಜೆ ಹಾಗೂ ಶಿವಯೋಗ ಬಸವಣ್ಣನವರ ಕೊಡುಗೆ ಎಂಬುದೇ ಸತ್ಯ.
ಹಾಗೆಯೇ ಪತ್ರಿಕೆಗಳಲ್ಲಿ ಬಂದಿರುವ ವರದಿಗಳಲ್ಲಿ ಶರಣರು ಶಾಸ್ತ್ರ ಪುರಾಣ ವೇದಗಳನ್ನು ಟೀಕಿಸಿಲ್ಲ, ಹಿಂದುತ್ವ ಅಲ್ಲಗಳೆದಿಲ್ಲ ಎಂದು ಉಪಾಧ್ಯ ಹೇಳಿದ್ದಾರೆ.
ಈ ಉಪಾಧ್ಯ ಎಂಬುವವರು ವಚನಗಳನ್ನು ಓದಿ ಈ ರೀತಿ ಹೇಳಿಕೆ ಕೊಟ್ಟಿದ್ದಾರೋ ಅಥವಾ ವೇದ ಶಾಸ್ತ್ರ ಪುರಾಣಗಳು ಆಗಮಗಳನ್ನು ಓದಿ ಹೇಳಿಕೆ ಕೊಟ್ಟಿದ್ದಾರೋ ನಮಗಂತೂ ಅರ್ಥ ಆಗುತ್ತಿಲ್ಲ.
ಲಭ್ಯವಿರುವ ಬಹುತೇಕ ವಚನಗಳು ವೇದ ಶಾಸ್ತ್ರ ಪುರಾಣಗಳು ಆಗಮಗಳನ್ನು ಖಂಡಿಸಿ, ತಿರಸ್ಕರಿಸಿವೆ. ಶರಣರು ಹಿಂದೂ ಧರ್ಮದ ವೇದ ಶಾಸ್ತ್ರ ಪುರಾಣಗಳು ಆಗಮಗಳನ್ನು ತಿರಸ್ಕರಿಸಿ ಸನಾತನ ಧರ್ಮದ ಆಚರಣೆಗಳನ್ನು ವಿರೋಧಿಸಿ ಹೊಸ ಸಂಪ್ರದಾಯ ಪ್ರಾರಂಭಿಸಿದರು.
ಸನಾತನ ಧರ್ಮದ ಆಚರಣೆಗಳನ್ನು ತಿರಸ್ಕರಿಸಿದ ಮೇಲೆ ಹಿಂದೂ ಧರ್ಮವನ್ನು ತಿರಸ್ಕರಿಸಿದಂತೆಯೇ ಅಲ್ಲವೇ?
ಈ ಸನಾತನಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ವಚನಾನಂದ ಶ್ರೀಗಳು ಈ ಉಪಾಧ್ಯಯರು ಮೂರು ವರ್ಷಗಳ ಕಾಲ ಸಂಶೋಧನೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಮೂರು ವರ್ಷಗಳ ಕಾಲ ಇವರು ಸಂಶೋಧನೆ ಮಾಡುವಂತಹದ್ದು ಏನಿದೆ? ಕೇವಲ ವಚನಗಳನ್ನು ಓದಿದರೆ ಶರಣರು ಸನಾತನ ಧರ್ಮ ತಿರಸ್ಕರಿಸಿ ಹೊಸ ಧರ್ಮ ಹುಟ್ಟುಹಾಕಿದ್ದಾರೆ ಎಂದು ಎಂಥಹ ಮಂಕನಿಗಾದರೂ ಅರ್ಥ ಆಗುತ್ತದೆ.
ಉಪಾಧ್ಯ ಮತ್ತು ಸನಾತನಿಗಳೇ ಹಾಗೂ ಅವರ ಗುಲಾಮಗಿರಿ ಮಾಡುವ ಲಿಂಗಾಯತರೇ ಒಂದು ತಿಳಿಯಿರಿ. ನಿಮ್ಮ ಹೋರಾಟ ಕತ್ತಲಲ್ಲಿ ಬೆಳಕಿನ ವಿರುದ್ಧದ ಹೋರಾಟ. ಬೆಳಕು ಬಂದ ತಕ್ಷಣ ಕತ್ತಲು ಕಣ್ಮರೆಯಾಗುವಂತೆ
ವಚನ ಸಾಹಿತ್ಯದ ಬೆಳಕು ಜನ ಸಾಮಾನ್ಯರಿಗೆ ತಲುಪಿದ ತಕ್ಷಣ ನಿಮ್ಮ ಕತ್ತಲಿನ ಹೋರಾಟ ನಿಂತು ಹೋಗುತ್ತದೆ.

ವಚನ ದರ್ಶನ ಚಾಪ್ಟರ್ 2