ದುಬೈನಲ್ಲಿ ಯಶಸ್ವಿಯಾಗಿ ನಡೆದ ಬಸವತತ್ವ ಸಮಾವೇಶ, ವಿಶ್ವಶಾಂತಿ ಯಾತ್ರೆ

ಏಳನೇ ಅಂತರಾಷ್ಟ್ರೀಯ ಬಸವ ತತ್ವ ಸಮ್ಮೇಳನ ಸಿಂಗಾಪುರಿನಲ್ಲಿ

ದುಬೈ:

ರಾಷ್ಟ್ರೀಯ ಬಸವ ದಳ ಕೇಂದ್ರ ಸಮಿತಿ, ಗುರುಬಸವ ಫೌಂಡೇಶನ್ ಹೈದರಾಬಾದ್ ಹಾಗೂ ಚನ್ನಬಸವೇಶ್ವರ ಸಾಹಿತ್ಯಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ದುಬೈನ ಅಲ್ ರಿಂಗ್ ನಗರದ ರಸ್ವೆಲ್ಲಾ ಹೊಟೇಲ್ ಸಭಾಂಗಣದಲ್ಲಿ ಆಯೋಜಿಸಿದ ಆರನೇ ಬಸವ ತತ್ವ ಸಮ್ಮೇಳನ ಈಚೆಗೆ ನಡೆಯಿತು.

ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ  ಬೆಂಗಳೂರಿನ ಬಸವ ಗಂಗೋತ್ರಿಯ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷರಾದ ಪೂಜ್ಯ ಶ್ರೀ ಜಗದ್ಗುರು ಡಾ. ಚನ್ನಬಸವಾನಂದ ಮಹಾಸ್ವಾಮೀಜಿ ಬುದ್ಧ, ಮಹಾವೀರ, ಏಸುಕ್ರಿಸ್ತ ಮತ್ತು ಗುರುನಾನಕರ ಸಮಾನತೆಯ ಸಂದೇಶಗಳು ವಿಶ್ವಮಟ್ಟದಲ್ಲಿ ಬೆಳೆದಿವೆ. ಆದರೆ ವಿಶ್ವಗುರು ಬಸವಣ್ಣನವರ ವಚನ ಸಂದೇಶಗಳು ಭಾರತಕ್ಕೆ ಮಾತ್ರ ಸೀಮಿತಗೊಂಡಿವೆ.

ಶಾಲಾ ಕಾಲೇಜು ಸ್ಥಾಪಿಸಿ, ಹಣ ಸಂಪಾದನೆ ಮಾಡುವುದು ಸುಲಭ. ಆದರೆ ವಿಶ್ವಮಟ್ಟದಲ್ಲಿ ಬಸವ ತತ್ವದ ಪ್ರಚಾರ ಪ್ರಸಾರ ಮಾಡುವುದು ಕಠಿಣ. ಈ ಕಾರಣಕ್ಕಾಗಿ ಬಸವ ಸಂದೇಶಗಳನ್ನು ವಿಶ್ವಮಟ್ಟದಲ್ಲಿ ಪರಿಚಯಿಸುವ ಘನ ಉದ್ದೇಶ ನಮ್ಮದಾಗಿದೆ.

ನೇಪಾಳ, ಭೂತಾನ್, ಶ್ರೀಲಂಕಾ, ದಕ್ಷಿಣ ಆಫ್ರಿಕಾ ಮತ್ತು ಮಾರಿಷಸ್ ನಲ್ಲಿ ಬಸವ ಸಮ್ಮೇಳನ ಮಾಡಲಾಗಿದೆ. ದುಬೈ ಸಮ್ಮೇಳನ ಯಶಸ್ವಿಯಾಗಿ ಜರುಗಿದೆ. ಇಲ್ಲಿರುವ ಕನ್ನಡಿಗರು ಕೂಡ ಪಾಲ್ಗೊಂಡಿರುವುದು ಸಂತಸ ತಂದಿದೆ. ಏಳನೇ ಅಂತರಾಷ್ಟ್ರೀಯ ಬಸವ ತತ್ವ ಸಮ್ಮೇಳನ ಸಿಂಗಾಪುರ್ ನಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ದುಬೈ ಕನ್ನಡಿಗರು ಹಾಗೂ ಬಸವಾಭಿಮಾನಿ ಪ್ರಭುರಾಜ ಹರಕಂಗಿ ಮಾತನಾಡಿ, ಪೂಜ್ಯ ಚನ್ನಬಸವಾನಂದ ಸ್ವಾಮಿಗಳು ವಿಶ್ವಮಟ್ಟದಲ್ಲಿ ಬಸವ ತತ್ವದ ಪ್ರಚಾರಗೈದು ಭಾರತದ ಕೀರ್ತಿ ಜಗತ್ತಿನಾದ್ಯಂತ ಪಸರಿಸುತ್ತಿರುವುದು ಖುಷಿಯಾಗಿದೆ.

ದುಬೈನಲ್ಲಿ ಬಸವಣ್ಣನವರ ಪೂಜೆ, ಪ್ರಾರ್ಥನೆ, ಧ್ವಜಾರೋಹಣ, ಪುಸ್ತಕ ಲೋಕಾರ್ಪಣೆ, ಪೂಜ್ಯ ಸ್ವಾಮೀಜಿಯವರ ಆಶೀರ್ವಚನ ಕೇಳಿ ಭಾರತದಲ್ಲಿ ಇದ್ದಿರುವ ಅನುಭವವಾಯಿತು. ಚನ್ನಬಸವಾನಂದ ಸ್ವಾಮೀಜಿ ಬಹುಭಾಷಾ ಪ್ರಾವೀಣ್ಯತೆ ಹೊಂದಿರುವ ಪ್ರತಿಭಾವಂತರು. ಅವರ ಬಸವ ತತ್ವದ ಪ್ರಚಾರದ ಪಯಣ ವಿಶ್ವಮಟ್ಟದಲ್ಲಿ ಸಾಗಲಿ ಎಂದು ಪ್ರತಿಪಾದಿಸಿದರು.

ದುಬೈ ಕನ್ನಡಿಗರು ಹಾಗೂ ಅಭಿಯಂತರರಾದ ಅಭಿಷೇಕ ಹರಕಂಗಿ ಧಾರವಾಡ, ಶಿವಾನಂದ ಹೆಗಡೆ ಹುಬ್ಬಳ್ಳಿ, ಮಹಾಂತೇಯ್ಯಾ ಗಣಾಚಾರಿ, ಬಾಬುರಾವ ಸೊಂತ ಉಪಸ್ಥಿತರಿದ್ದರು.

ಇದೇ ವೇಳೆ ‘ಲಿಂಗಾಯತ ಧರ್ಮ ಸಾರ’ ಕೃತಿ ಲೋಕಾರ್ಪಣೆ ಮಾಡಲಾಯಿತು. ಸಮ್ಮೇಳನದಲ್ಲಿ ಭಾಗವಹಿದ ಶರಣರಿಗೆ  ಪ್ರಮಾಣ ಪತ್ರ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಡಾ.‌ ವೈಜಿನಾಥ ಭುಟ್ಟೆ ಧ್ವಜಾರೋಹಣ ನೆರವೇರಿಸಿದರು. ಶ್ರೀದೇವಿ ಪಾಟೀಲ, ಗಿರಿಜಮ್ಮ ಧಾರವಾಡ ಮತ್ತಿತರರು ಬಸವ ಪೂಜೆ ನೆರವೇರಿಸಿದರು. ಮಹಾರುದ್ರ ಡಾಕುಳಗೆ ವಚನ ಗಾಯನ ಮಾಡಿದರು.

ನ್ಯಾಯವಾದಿ ಅಶೋಕ ಮಾನೂರೆ,  ಪೂಜ್ಯ ಸತ್ಯಾದೇವಿ ಮಾತಾಜಿ, ನಾಗನಾಥ ಪಾಟೀಲ ಹೈದರಾಬಾದ, ಶ್ರೀನಾಥ ಕೋರೆ, ಸಂಗಮೇಶ ಕೆ.ಬಿ., ವಿದ್ಯಾ ಧಾರವಾಡ, ಜಗನ್ನಾಥ ಹೈದರಾಬಾದ, ಮಂಜುನಾಥ ಹೈದರಾಬಾದ, ಪ್ರಕಾಶ ಜಿ.ಕೆ, ಗಂಗಮ್ಮ ಸೇರಿದಂತೆ ಹಲವರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
2 Comments

Leave a Reply

Your email address will not be published. Required fields are marked *

ಬಸವ ತತ್ವ ಚಿಂತಕರು, ಬೀದರ