ಚಿಕ್ಕಮಗಳೂರು:
ಶ್ರೀ ಬಸವತತ್ವ ಪೀಠದಲ್ಲಿ ವಚನ ಕಾರ್ತಿಕ-೨೦೨೫ರ ಸಮಾರೋಪ ಸಮಾರಂಭವನ್ನು ಶ್ರೀ ಪೀಠದ ಸಂಸ್ಥಾಪಕರಾದ ಪೂಜ್ಯ ಜಯಚಂದ್ರಶೇಖರ ಸ್ವಾಮಿಗಳವರ ಕರ್ತೃಗದ್ದುಗೆಯಲ್ಲಿ ದೀಪ ಬೆಳಗಿಸಿ ಪುಷ್ಪನಮನ ಸಲ್ಲಿಸಿ ಉದ್ಘಾಟಿಸಲಾಯಿತು.

ಬೆಂಗಳೂರಿನ ರಾಜೇಶ್ವರಿ ಸಾದರ ಮತ್ತು ಕವಿತಾ ಸಾದರ ಇವರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ, ವಚನ ಸಂಗೀತ ಮತ್ತು ಭಾವಗೀತೆಗಳ ಗಾಯನ ಕಾರ್ಯಕ್ರಮ ನೆರವೇರಿತು.

ಬಸವತತ್ವ ಪೀಠದ ಪೀಠಾಧ್ಯಕ್ಷರಾದ ಪೂಜ್ಯ ಡಾ. ಬಸವ ಮರುಳಸಿದ್ಧ ಸ್ವಾಮಿಗಳವರ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದ ಪ್ರಾರಂಭದಲ್ಲಿ, ಶ್ರೀ ಪೀಠದಲ್ಲಿ ಒಂದು ತಿಂಗಳಕಾಲ ಶ್ರೀ ಬಸವೇಶ್ವರ ಭಜನಾ ತಂಡ, ಬೆಳವಾಡಿ ಇವರಿಂದ ಭಜನೆ ಕಲಿತ ಶರಣ ಶರಣೆಯರಿಂದ ಭಜನೆ ನಡೆಯಿತು.

ಈ ಸಂದರ್ಭದಲ್ಲಿ ಡಾ. ಬಸವರಾಜ ಸಾದರ ದಂಪತಿ, ಚಂದ್ರಶೇಖರ ನಾರಣಾಪುರ ದಂಪತಿ, ಬಿಜೆಪಿ ರೈತಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್. ಸಿ. ಕಲ್ಮರುಡಪ್ಪ, ಕಾಂಗ್ರೆಸ್ ಮುಖಂಡ ಮಹಡಿಮನೆ ಸತೀಶ, ಉದ್ಯಮಿ ಬಿ. ಎನ್. ಚಿದಾನಂದ, ದಾಸೋಹಿಗಳಾದ ಸಿ. ಬಿ. ಮಲ್ಲೇಗೌಡ ಮತ್ತು ಕುಟುಂಬದವರು ಹಾಗೂ ನೂರಾರು ಭಕ್ತರು ಉಪಸ್ಥಿತರಿದ್ದರು.

