ಬೆಂಗಳೂರು
ಬಿಬಿಎಂಪಿ ನೌಕರರ ಕ್ಷೇಮಾಭಿವೃದ್ದಿ ಸಂಘದ ನವಿಕೃತಗೊಂಡಿರುವ ಕಛೇರಿಯ ಉದ್ಘಾಟನೆ ಹಾಗೂ ಬಸವ ಸಭಾಂಗಣ ನಾಮಕರಣ ಸಮಾರಂಭ ಸೋಮವಾರ ನಗರದಲ್ಲಿ ನಡೆಯಿತು.
ಉಪ ಲೋಕಾಯುಕ್ತರಾದ ಬಿ.ವೀರಪ್ಪರವರು ಮಾತನಾಡಿ ನಾವು ಸೇವಾಮನೋಭಾವನೆ ಕೆಲಸ ಮಾಡಬೇಕು, ನಿಷ್ಟಾವಂತರಾಗಿ ಬಾಳಿ, ಬಸವ ತತ್ವದಲ್ಲಿ ಎಲ್ಲರಿಗೂ ಸಾಗಿದಾಗ ಸಮಾಜದ ಅಭಿವೃದ್ದಿ ಸಾಧ್ಯ ಎಂದು ಹೇಳಿದರು.
ನ್ಯಾಯಮೂರ್ತಿಗಳಾದ ಆರ್.ದೇವದಾಸ್ ರವರು ಕಟ್ಟಡವನ್ನು ಉದ್ಘಾಟಿಸಿದರು.

ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರು, ವಿಶೇಷ ಆಯುಕ್ತರಾದ ಡಾ.ಅವಿನಾಶ್ ಮೆನನ್,ವಲಯ ಆಯುಕ್ತರಾದ ಶ್ರೀಮತಿ ಸ್ನೇಹಲ್, ಉಪ ಆಯುಕ್ತರಾದ ಮಂಜುನಾಥ್ ಸ್ವಾಮಿ, ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಎ.ಅಮೃತ್ ರಾಜ್ ರವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಸಂಘದ ಪದಾಧಿಕಾರಿಗಳಾದ ಸಾಯಿಶಂಕರ್, ಎ.ಜಿ.ಬಾಬಣ್ಣ, ಎಸ್.ಜಿ.ಸುರೇಶ್, ಕೆ.ಜಿ.ರವಿ, ಡಿ.ರಾಮಚಂದ್ರ, ಡಾ||ಶೋಭ, ರೇಣುಕಾಂಬ, ಮಂಜೇಗೌಡ, ಬಿ.ರುದ್ರೇಶ್, ಮಂಜುನಾಥ್ ಎನ್,ಸಂತೋಷ್ ಕುಮಾರ್ ನಾಯ್, ಹೆಚ್.ಬಿ.ಹರೀಶ್, ಉಮೇಶ್, ಸಂತೋಷ್, ನರಸಿಂಹರವರು ಬಿಬಿಎಂಪಿ ಅಧಿಕಾರಿ ಮತ್ತು ನೌಕರರು ಪಾಲ್ಗೊಂಡಿದ್ದರು.