ಬೆಳಗಾವಿ
ಜಾಗತಿಕ ಲಿಂಗಾಯತ ಮಹಾಸಭಾ ಮಹಾನಗರ ಘಟಕ ಹಾಗೂ ತಾಲೂಕಾ ಘಟಕ ಇವರಿಂದ, ಬೆಳಗಾವಿ ತಾಲೂಕಾ ಮಟ್ಟದಲ್ಲಿ ವ್ಯಕ್ತಿತ್ವ ವಿಕಸನಕ್ಕಾಗಿ, ಗುರು ಬಸವಣ್ಣನವರ ವಚನ ಕಂಠಪಾಠ ಸ್ಪರ್ಧೆಯನ್ನು ದಿನಾಂಕ 02/03/2025ರ ರವಿವಾರದಂದು, ನಗರದ ಶ್ರೀ ಸಿದ್ದರಾಮೇಶ್ವರ ಪ್ರೌಢ ಶಾಲೆ, ಶಿವಬಸವ ನಗರ, ಬೆಳಗಾವಿಯಲ್ಲಿ ಮುಂಜಾನೆ 10 ಗಂಟೆಗೆ ಆಯೋಜಿಸಲಾಗಿದೆ.
ವಿಜೇತರಿಗೆ,
- ಪ್ರಥಮ ಬಹುಮಾನ -3001ರೂ.
- ದ್ವಿತೀಯ ಬಹುಮಾನ -2001ರೂ.
- ತೃತೀಯ ಬಹುಮಾನ -1001ರೂ.
ನೀಡಲಾಗುವುದು. ಸ್ಪರ್ಧೆಯ ನಿಯಮಗಳು - ಸ್ಪರ್ಧೆಯು ಬೆಳಗಾವಿ ತಾಲೂಕಿಗೆ ಮಾತ್ರ ಸೀಮಿತವಾಗಿರುತ್ತದೆ.
- ಗುರು ಬಸವಣ್ಣನವರ ವಚನಗಳನ್ನು ಮಾತ್ರ ಹೇಳುವುದು.
- ಸ್ಪರ್ಧಾಳುಗಳಿಗೆ ಉಚಿತ ಪ್ರವೇಶ.
- ಭಾಗವಹಿಸುವ ಸ್ಪರ್ದಾಳುಗಳಿಗೆ ಯಾವುದೇ ರೀತಿಯ ಖರ್ಚು ಕೊಡಲಾಗುವುದಿಲ್ಲ.
- ತಾವು ಹೇಳುವ ವಚನಗಳ ಒಂದು ಲಿಖಿತ ಅಥವಾ ಮುದ್ರಿತ ಪ್ರತಿಯನ್ನು ಸಂಘಟಕರಲ್ಲಿ ನೀಡುವುದು.
- ವಚನಗಳನ್ನು ಹೇಳುವ ಗರಿಷ್ಠ 30 ನಿಮಿಷ ಮತ್ತು ಮಧ್ಯದಲ್ಲಿ ನೆನಪಿಸಿಕೊಳ್ಳಲು 60 ಸೆಕೆಂಡ್ ಮಾತ್ರ ಕಾಲಾವಕಾಶ.
- ರಾಜ್ಯಮಟ್ಟದಲ್ಲಿ ಭಾಲ್ಕಿ ಹಿರೇಮಠದ ಮತ್ತು ಜಿಲ್ಲಾಮಟ್ಟದಲ್ಲಿ ಸಂಚಾರಿ ಗುರುಬಸವ ಬಳಗ ಏರ್ಪಡಿಸಿದ ಸ್ಪರ್ಧೆಯಲ್ಲಿ ಭಾಗವಹಿಸಿದ ವಿಜೇತರಿಗೆ ಅವಕಾಶ ಇರುವುದಿಲ್ಲ.
- ವಯಸ್ಸಿನ ನಿರ್ಬಂಧವಿಲ್ಲದೆ ಎಲ್ಲ ವಯಸ್ಸಿನ ಆಸಕ್ತರು ಭಾಗವಹಿಸಬಹುದು.
- ತೀರ್ಪುಗಾರರ ನಿರ್ಣಯವೇ ಅಂತಿಮ.
- ಸ್ಪರ್ಧೆಯಲ್ಲಿ ಭಾಗವಹಿಸುವವರು 25/02/2025 ರೊಳಗಾಗಿ ಹೆಸರು ನೋಂದಾಯಿಸಿಕೊಳ್ಳಬೇಕು.
- ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದವರನ್ನು ಸಂಚಾರಿ ಗುರುಬಸವ ಬಳಗ ನಡೆಸುವ ಜಿಲ್ಲಾಮಟ್ಟದ ವಚನ ಕಂಠಪಾಠ ಸ್ಪರ್ಧೆಗೆ ಆಯ್ಕೆ ಮಾಡಲಾಗುವುದು.
- ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ಸ್ಪರ್ಧಿಗಳಿಗೆ ನಗದು ಬಹುಮಾನ ಹಾಗೂ ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುವುದು.
ವಿವರಗಳಿಗೆ ಈ ಕೆಳಗಿನವರನ್ನು ಸಂಪರ್ಕಿಸಬೇಕು.
1) ಶರಣ ಸಿ.ಎಂ. ಬೂದಿಹಾಳ-9980385079
ಪ್ರಧಾನ ಕಾರ್ಯದರ್ಶಿ ಜಾಗತಿಕ ಲಿಂಗಾಯತ ಮಹಾಸಭಾ, ನಗರ ಘಟಕ
2) ಶರಣ ಆನಂದ ಯಲ್ಲಪ್ಪ ಕೊಂಡಗುರಿ-8861872272
ಪ್ರಧಾನ ಕಾರ್ಯದರ್ಶಿ ಜಾಗತಿಕ ಲಿಂಗಾಯತ ಮಹಾಸಭಾ, ತಾಲೂಕ ಘಟಕ ಬೆಳಗಾವಿ.