ಬೆಳಗಾವಿ
ಲಿಂಗಾಯತ ಸಂಘಟನೆ ವತಿಯಿಂದ ಹಳಕಟ್ಟಿ ಭವನದಲ್ಲಿ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿಯವರ ಜಯಂತಿ ಆಚರಿಸಲಾಯಿತು.
ಡಾ ಫ.ಗು. ಹಳಕಟ್ಟಿ ಜಯಂತಿ ನಿಮಿತ್ತ ಬೆಳಗಾವಿ ಜಿಲ್ಲಾ ಮಟ್ಟದ ವಚನ ಕಂಠಪಾಠ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಮಾಡಿ, ವಚನ ಪಿತಾಮಹ ಡಾ. ಫ.ಗು.ಹಳಕಟ್ಟಿ ಅವರ ಜೀವನ ಸಂದೇಶ ಕುರಿತು ಅನುಭಾವವನ್ನು ಬಸವತತ್ವ ಅನುಭವ ಕೇಂದ್ರದ ಪೂಜ್ಯ ವಾಗ್ದೇವಿ ತಾಯಿಯವರು ನೀಡಿದರು.

ಜಗಲಿ ಕಟ್ಟಿ ಕೊಟ್ಟರು. ವಚನ ಕಟ್ಟುಗಳು ಸಂಗ್ರಹಿಸಿ ಪ್ರಕಟಿಸಿದರು. ವಿದ್ಯಾಥಿ೯ ಇದ್ದಾಗಲೆ ಸಂಘಟನೆ ಮಾಡಿದರು. ಹಾಲಬಾವಿ ಅವರ ಮನೆಯಲ್ಲಿ ಹಳೆಯ ಗ್ರಂಥಗಳು ಸಿಕ್ಕವು. ಅಲ್ಲದೆ ತಾಡೊಲೆಗಳು ಸಂಗ್ರಹಿಸಿ ಅವುಗಳನ್ನು ಪ್ರಕಟಿಸಿದರು. ಬೇರೆ ಬೇರೆ ಗ್ರಾಮದಿಂದ ತಾಡೋಲೆ ಸಂಗ್ರಹಿಸಿದರು. ಬೆಳಗಾವಿಯಲ್ಲಿ ವಕೀಲ ವೃತ್ತಿ ಪ್ರಾರಂಭಿಸಿದರು. ನಂತರ ವಿಜಯಪುರಕ್ಕೆ ಹೋದರು. ವ್ಯಾಜಗಳನ್ನು ನ್ಯಾಯಾಲಯದ ಹೊರಗೆ ಬಗೆಹರಿಸಿ ಕಳಿಸುತ್ತಿದ್ದರು. ಅವರ ಫೀ ಅಂದರೆ ತಾಡೋಲೆಗಳು ಎಲ್ಲಿ ಇವೆ ಅವುಗಳನ್ನು ಕೇಳಿ ಪಡೆಯುತ್ತಿದ್ದರು.
ಅನೇಕ ಸಹಕಾರ ಸಂಘಗಳನ್ನು ಸ್ಥಾಪಿಸಿದರು, ನೊಂದಣಿ ಮಾಡಿಸಿ ಕೊಡುತ್ತಿದ್ದರು. ಸಿದ್ದೇಶ್ವರ ಬ್ಯಾಂಕ ಸಹ ರಜಿಸ್ಟರ ಮಾಡಿಸಿಕೊಟ್ಟರು. ಶಾಲೆಗಳನ್ನು ಸಹ ಪ್ರಾರಂಭಿಸಿದರು. ಕನ್ನಡ ಭಾಷೆಯನ್ನು ಕನ್ನಡ ಅಂಕಿಗಳನ್ನ ಬಳಿಸಿ ಲೆಕ್ಕಪತ್ರ ಬರೆಯಲು ಪ್ರೂತ್ಸಾಹಿಸಿದರು. ಬಿ ಎಲ್ ಡಿ ಸಂಸ್ಥೆ ಸ್ಥಾಪಿಸಲು ಪ್ರೇರಣೆ ನೀಡಿದರು. ಅನೇಕ ಪುಸ್ತಕಗಳನ್ನು ಪ್ರಕಟಿಸಿದರು ಎಂದರು.

ಪೂಜ್ಯ ಕುಮದಿನಿ ತಾಯಿಯವರು ವಚನಗಳನ್ನು ರಾಗಬದ್ಧವಾಗಿ ಹೇಳಿಕೊಟ್ಟರು. ಪ್ರಾರಂಭದಲ್ಲಿ ಮಹಾದೇವಿ ಅರಳಿ ವಚನ ಪ್ರಾಥ೯ನೆ ನಡಿಸಿಕೂಟ್ಟರು.
ಮುಖ್ಯ ಅತಿಥಿಗಳಾಗಿ ಮಹಾಂತೇಶ ತೋರಣಗಟ್ಟಿ ಆಗಮಿಸಿದ್ದರು. ಕಮಲಾ ಗಣಾಚಾರಿ ದಾಸೋಹ ಸೇವೆಗೈದರು. ಅಕ್ಕಮಹಾದೇವಿ ತೆಗ್ಗಿ, ಸುಜಾತಾ ಮತ್ತಿಕಟ್ಟಿ, ಜಯಶ್ರೀ ಚಾವಲಗಿ, ಸುವರ್ಣ ಗುಡಸ, ಜಾಹ್ನವಿ ಘೊಪ೯ಡೆ, ವಿದ್ಯಾ ಕಕಿ೯, ಸದಾಶಿವ ದೇವರಮನಿ, ಬಸವರಾಜ ಕರಡಿಮಠ, ಶಿವಪುತ್ರಯ್ಯ ಪೂಜಾರ, ಶ೦ಕರ ರಾವಳ, ಬಾಬಣ್ಣ ತಿಗಡಿ ದ೦ಪತಿಗಳು, ಮಹದೇವ ಕೆ೦ಪಿಗೌಡರ, ಶೇಖರ ವಾಲಿ ಇಟಗಿ, ಮಹಾಂತೇಶ ಮೆಣಸಿನಕಾಯಿ, ಶಿವಾನಂದ ಲಾಳಸಂಗಿ, ಗುರುಸಿದ್ದಪ್ಪ ರೇವಣ್ಣವರ, ಗದಿಗೆಪ್ಪ ತಿಗಡಿ, ಶಂಕರ ಗುಡಸ, ಸಿ ಎಂ ಬೂದಿಹಾಳ, ಬಸವರಾಜ ಬಿಜ್ಜರಗಿ, ಶಿವಾನಂದ ತಲ್ಲೂರ, ಅ.ಬ. ಇಟಗಿ, ಶಿವಾನಂದ ನಾಯಕ, ಶರಣ ಶರಣೆಯರು ಉಪಸ್ಥಿತರಿದ್ದರು. ಸಂಗಮೇಶ ಅರಳಿ ನಿರೂಪಿಸಿದರು.