ಬೆಳಗಾವಿ:
ತಾಲೂಕಿನ ಹಿರೇಬಾಗೇವಾಡಿ ಗ್ರಾಮದಲ್ಲಿ ಗುರುಬಸವ ಬಳಗ, ತಾಲೂಕು ಜಾಗತಿಕ ಲಿಂಗಾಯತ ಮಹಾಸಭೆ ಇವರ ಸಹಯೋಗದಲ್ಲಿ ರವಿವಾರದಂದು ಮಾಸಿಕ ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ದೀಕ್ಷಾ ಕಾರ್ಯಕ್ರಮ ನಡೆಯಿತು.
ಇದು ಎಂಟನೆಯ ಕಾರ್ಯಕ್ರಮವಾಗಿದ್ದು ಶ್ರೀ ನಿಜಗುಣ ಶಿವಯೋಗಿಗಳ ಮಠದಲ್ಲಿ ಆಯೋಜಿಸಲಾಗಿತ್ತು. ಇಷ್ಟಲಿಂಗ ಪೂಜೆಯ ಪ್ರಾತ್ಯಕ್ಷಿಕೆಯನ್ನು ಶರಣರಾದ ಶ್ರೀ ಮಹಾಂತೇಶ ತೋರಣಗಟ್ಟಿ ಗುರುಗಳು, ಜಿಲ್ಲಾ ಸಂಚಾಲಕರು ಸಂಚಾರಿ ಗುರುಬಸವ ಬಳಗ ಬೆಳಗಾವಿ ಇವರು ನೆರವೇರಿಸಿಕೊಟ್ಟರು.

ಶರಣರಾದ ಬಿ.ಜಿ.ವಾಲಿ ಇಟಗಿ, ಪ್ರವೀಣ ರೊಟ್ಟಿ ಅವರು ಲಿಂಗಾಂಗ ಯೋಗದ ಬಗ್ಗೆ ಅನುಭಾವ ನೀಡಿದರು.
ಐದು ಜನ ಇಷ್ಟಲಿಂಗದೀಕ್ಷೆ ಪಡೆದುಕೊಂಡರು. ಈ ಸಂದರ್ಭದಲ್ಲಿ ಬಿ.ಜಿ. ವಾಲಿಇಟಗಿ, ಬಾಬುಗೌಡ ಪಾಟೀಲ,ಎನ್.ಪಿ. ಉಪ್ಪಿನ, ಮಹಾಂತೇಶ ತೋರಣಗಟ್ಟಿ, ಆನಂದ ಕೊಂಡಗುರಿ, ಪ್ರವೀಣ ರೊಟ್ಟಿ, ಸಿ.ಎಂ. ಹುಬ್ಬಳ್ಳಿ, ದಯಾನಂದ ಹಂಚಿನಮನಿ, ಹಾಗೂ ಗುರುಬಸವ ಬಳಗ, ಜಾಗತಿಕ ಲಿಂಗಾಯತ ಮಹಾಸಭೆಯ ಸದಸ್ಯರು ಈ ಉಪಸ್ಥಿತರಿದ್ದರು.


